ನಾವು ನಮ್ಮ ಬದುಕು ಪೂರ್ಣವಾಗಿ ಅವಲಂಬಿತವಾಗಿರುವುದು ಮಣ್ಣಿನ ಮೇಲೆ. ಫಲವತ್ತಾದ ಮಣ್ಣು ಉತ್ತಮ ಪರಿಸರವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾದ ಮಣ್ಣು ಇರುವ ಭೂಮಿ ನಮಗೆ ದೊರೆತುದು ಪುಣ್ಯವೇ.
ಇಂದು ಅತಿಯಾದ ಸಂಪನ್ಮೂಲಗಳ ಬಳಕೆಯ ನೇರ ಪರಿಣಾಮವಾಗುತ್ತಿರುವುದು ಮಣ್ಣಿನ ಮೇಲೆ ಅಂದರೆ ಭೂಮಿಯ ಮೇಲೆ. ಹಲವು ರೀತಿಯ ಕಲ್ಮಶಗಳನ್ನು ನೇರವಾಗಿ ಮಣ್ಣಿನ ಮೇಲೆ ಸುರಿದು ಹಾಳು ಮಾಡುತ್ತಿದ್ದೇವೆ. ಮಾಲಿನ್ಯವನ್ನು ನಿಯಂತ್ರಿಸುವ ಅಗತ್ಯವಿದೆ. ಸಕಾಲದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮಣ್ಣಿನೊಂದಿಗೆ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಮಣ್ಣಿನ ಜೀವ ವೈವಿಧ್ಯವನ್ನು ರಕ್ಷಿಸಿ.
ಆರೋಗ್ಯಕರ ಮಣ್ಣಿನ ಪರಿಸರ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಆಚರಣೆಯ ಉದ್ದೇಶ. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ವಿಶ್ವ ಮಣ್ಣು ದಿನ” ದ ಆಚರಣೆ ಆರಂಭವಾಯಿತು.
2014 ಡಿಸೆಂಬರ್ 5 ರಂದು ಮೊದಲ ಬಾರಿಗೆ “ವಿಶ್ವ ಮಣ್ಣು ದಿನ”ದ ಆಚರಣೆ ಆರಂಭವಾಯಿತು. ನಮಗಾಗಿ , ಮುಂದಿನ ಪೀಳಿಗೆಗಾಗಿ ಆರೋಗ್ಯಕರವಾದ ಮಣ್ಣನ್ನು ಉಳಿಸಿಕೊಳ್ಳೋಣ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…