ಅನುಕ್ರಮ

ಕ್ಷಯ ನಿರ್ಮೂಲನೆಗೆ ವ್ಯಯಿಸಿ, ಜೀವ ಉಳಿಸಿ | Invest to end T B , save lives – ಈ ಬಾರಿಯ ಘೋಷ ವಾಕ್ಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಂದು ಆಕಸ್ಮಿಕವಾಗಿ ಗೆಳತಿ ಬಸ್ಸ್ ನಲ್ಲಿ ಸಿಕ್ಕಿದ್ದಳು. ಎಷ್ಟೋ ವರ್ಷಗಳ ನಂತರ ಸಿಕ್ಕಿದಾಗ ನನಗಂತು ಗೊತ್ತೇ ಆಗಲಿಲ್ಲ. ಅವಳ ಮುಖದಲ್ಲಿ ಕಣ್ಣು ಮಾತ್ರ ಕಾಣುತ್ತಿತ್ತು. ಅಷ್ಟು ವೀಕ್ ಆಗಿ ಬಿಟ್ಟಿದ್ದಳು. ಸದೃಢ ವಾಗಿದ್ದ ಗೆಳತಿ ಹೀಗೇಕಾದಳು ಎಂಬ ಚಿಂತೆ ಕಾಡ ತೊಡಗಿತು. ಬಸ್ಸ್ ಲ್ಲಿ ಸಿಕ್ಕಿದ ಕಾರಣ ಹೆಚ್ಚು ಮಾತಾಡಿಸದೆ ಧೈರ್ಯ ತುಂಬಿದೆ. ಅವಳನ್ನು ನೋಡುತ್ತಲೇ ಅರಿವಿಲ್ಲದೆ ಕಣ್ಣು ಹನಿಗೂಡಿತು.

Advertisement

ಒಂದೆರಡು ದಿನ ಕಳೆಯುತ್ತಲೇ ನಾನಾಕೆಗೆ ಫೋನಾಯಿಸಿದೆ. ಏನಾಯಿತೇ ನಿನಗೆ ಎಂದು ನೇರವಾಗಿ ಕೇಳಿಯೇ ಬಿಟ್ಟೆ. ನಿಟ್ಟುಸಿರು ಬಿಡುತ್ತಾ ಆಕೆ ಹೇಳಿದ ಶಬ್ದ ಕೇಳಿ ನಾನು ಹೌಹಾರಿದೆ. ಹೌದಾ ಹೇಗಾಯ್ತು ಮಾರಾಯಿತಿ ಎನ್ನುತ್ತಲೇ ಅವಳು ಎಲ್ಲಾ ವಿಷಯಗಳನ್ನು ಹೇಳ ತೊಡಗಿದಳು. ಮೊದಲಿಗೆ ಶೀತ ಸುರುವಾಯಿತು. ಅದಕ್ಕೆ ಮದ್ದು ತಗೊಂಡಾಯಿತು. ಸ್ವಲ್ಪ ಕಮ್ಮಿ ಆಯಿತು ಅನ್ನುತ್ತಲೇ ಮತ್ತೆ ಜೋರಾಗ ತೊಡಗಿತು. ಯಾವ ಮದ್ದಿಗೂ ಜಗ್ಗುತ್ತಲೇ ಇರಲಿಲ್ಲ. ಹಲವು ವೈದ್ಯ ರನ್ನು ಭೇಟಿಯಾದರೂ ಉತ್ತರ ಶೂನ್ಯ. ಕೊನೆಗೆ ಹಲವು ಪರೀಕ್ಷೆಗಳ ನಂತರ ಕ್ಷಯ ರೋಗದ ಪತ್ತೆಯಾಯಿತು. ಅದು ಹ್ಯಾಗೆ, ಎಲ್ಲಿಂದ ನನಗೆ ಬಂತೆಂದೇ ತಿಳಿಯದು. ಆದರೆ ಈಗ ಚಿಕಿತ್ಸೆಯ ನಂತರ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದೇನೆ. ದೇವರು ದೊಡ್ಡವನು , ಸಕಾಲದಲ್ಲಿ ಗೊತ್ತಾಯಿತು.

1882 ಮಾರ್ಚ್ 24  ರಂದು ಜರ್ಮನಿಯ ರಾಬರ್ಟ್ ಕೋಚ್ ಎಂಬ ಸಂಶೋಧಕ ಕ್ಷಯ ರೋಗಕ್ಕೆ ಕಾರಣವನ್ನು ಕಂಡು ಹಿಡಿದರು. ಹಾಗಾಗಿ ಈ ದಿನವನ್ನು ಕ್ಷಯ ದಿನವಾಗಿ ಆಚರಿಸಲಾಗುತ್ತದೆ. ಟ್ಯೂಬರ್ ಕ್ಯುಲೋಸಿಸ್ ಮತ್ತು ಮೈಕ್ರೋ ಬ್ಯಾಕ್ಟೀರಿಯಾ ಜಾತಿಯ ಹಲವು ಬ್ಯಾಕ್ಟೀರಿಯಾ ಗಳಿಂದ ಈ ಕಾಯಿಲೆ ಬರುತ್ತದೆ.ಪ್ರಮುಖವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವ ಈ ಕಾಯಿಲೆ ಸಾಂಕ್ರಾಮಿಕ ರೋಗ ವಾಗಿದೆ. ಆಮೇಲೆ ದೇಹದ ಇತರ ಅಂಗಗಳಿಗೂ ಹರಡಲಾರಂಭಿಸುತ್ತದೆ. ಆರಂಭದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ಬೇಗನೆ ಪರಿಣಾಮಕಾರಿ. ಮಾಮೂಲು ಶೀತ ಕೆಮ್ಮೆಂದೇ ಭಾಸವಾಗುವ ಈ ಕಾಯಿಲೆ ಬಂದದ್ದೇ ಗೊತ್ತಾಗದು. ಕೂದಲು ಹಾಗೂ ಉಗುರಿನ ಹೊರತು ದೇಹದೆಲ್ಲಾ ಭಾಗಗಳಲ್ಲೂ ತನ್ನಾಟವನ್ನು ಕ್ಷಯ ತೋರಿಸಿ ಬಿಡ ಬಹುದು.
ಸಕಾಲದಲ್ಲಿ ಔಷಧೀಯ ಚಿಕಿತ್ಸೆ ದೊರೆತಾಗ. ಕ್ಷಯದಿಂದ ಸಂಪೂರ್ಣ ಗುಣಮುಖರಾಗ ಬಹುದು. ಪೌಷ್ಟಿಕ ಆಹಾರ, ಅಗತ್ಯ ಚಿಕಿತ್ಸೆ ಗಳಿಂದ ಪೂರ್ಣ ಗುಣಮುಖರಾಗ ಬಹುದು.
2025 ರ ವೇಳೆಗೆ ಕರ್ನಾಟಕ ದಿಂದ ಕ್ಷಯ ರೋಗವನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದೆ. ಅಗತ್ಯ ಆರೋಗ್ಯಾಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದೆ. ಜಾಗತಿಕ ಕ್ಷಯ ರೋಗದ ವರದಿಯ ಪ್ರಕಾರ ಜಗತ್ತಿನ ಶೇ 26 ರಷ್ಟು ಪಾಲು ಭಾರತದಲ್ಲೇ ಇದೆ. ಎರಡು ನಿಮಿಷಕ್ಕೆ ಮೂರು ಜನ ಸಾಯುತ್ತಿರುವುದು ಇದರ ಗಂಭೀರತೆಯನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಜನ ಜಾಗೃತಿಯೊಂದೇ ಪರಿಹಾರ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

1 hour ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

2 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

9 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

9 hours ago

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌

ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…

17 hours ago

ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …

19 hours ago