ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈಗೀಗ ಜನ ಸಂರಕ್ಷಣೆಯ ಅಗತ್ಯದ ಬಗ್ಗೆ ಮನವರಿಕೆಯಾಗಲು ಆರಂಭವಾಗಿದೆ. ಈ ವರ್ಷ ನೀರಿನ ಬಿಕ್ಕಟ್ಟು ಆರಂಭವಾಗಿದೆ. ಕೈಕೊಟ್ಟ ಮುಂಗಾರು, ಬತ್ತುತ್ತಿರುವ ಅಂರ್ತಜಲ, ವಿಪರೀತ ಬಿಸಿಲು ಇರುವ ನೀರನ್ನು ಬತ್ತುವಂತೆ ಮಾಡುತ್ತಿದೆ. ಹೀಗಾಗಿ ತಡವಾಗಿಯಾದರೂ ಜಲ ಸಂರಕ್ಷಣೆಯ ಕಡೆಗೆ ಗಮನಹರಿಸಬೇಕಿದೆ. ನೀರು ಉಳಿಸುವ ಬಗ್ಗೆ ಅತಿಯಾಗಿ ಗಮನ ಕೊಡಬೇಕಿದೆ.
1992 ರಲ್ಲಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಮಾರ್ಚ್ 22 ವಿಶ್ವ ಜಲ ದಿನ ಎಂದು ಘೋಷಿಸಲಾಯಿತು. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು, ಪ್ರತಿ ವರ್ಷ ನೀರು ಮತ್ತು ನೈರ್ಮಲ್ಯದ ಕುರಿತು ಮಾಹಿತಿ ನೀಡಲಾಗುತ್ತದೆ. ಈ ವರ್ಷ ‘ಸಮೃದ್ಧಿ ಮತ್ತು ಶಾಂತಿಗಾಗಿ ನೀರು’ ಎಂಬ ವಿಷಯದ ಮೇಲೆ ಜಲ ದಿನವನ್ನು ಆಚರಿಸಲಾಗುತ್ತದೆ.
ನೀರು ಶಾಂತಿಯನ್ನು ಸೃಷ್ಟಿಸಬಹುದು, ಘರ್ಷಣೆಯನ್ನು ಸೃಷ್ಟಿಸಬಹುದು. ನೀರು ಕಡಿಮೆಯಾದಾಗ ಅಥವಾ ಕಲುಷಿತಗೊಂಡಾಗ ಸಮಾಜಗಳಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಆ ಸಮಯದಲ್ಲಿ ಪ್ರತಿಯೊಬ್ಬರ ಸಹಕಾರದಿಂದ ಮಾತ್ರ ನೀರಿನ ಅಗತ್ಯವನ್ನು ಸರಿಗೊಳಿಸಬಹುದು. ನೀರು ಸಮೃದ್ಧಿಗಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರು ಇದ್ದರೆ ಮಾತ್ರವೇ ಕೃಷಿಯಿಂದ ತೊಡಗಿ ಎಲ್ಲಾ ಕಡೆಯೂ ಅಭಿವೃಧ್ಧಿ ಸಾಧ್ಯ.
ಜಲ ದಿನದ ಸಂದರ್ಭದ ವಿಶೇಷ ಗಮನಹರಿಸುವ ಭಾಗ ಇದು :
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…