#WorldEnvironmentDay #ವಿಶ್ವಪರಿಸರದಿನ | ಅನುದಿನವೂ ಹಸಿರಾಗಿರಲಿ ಜಗವು

June 5, 2020
9:09 AM
ವಿಶ್ವ ಪರಿಸರ ದಿನ. 
1972 ರಿಂದ ಆರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂ.5 ರಂದು  ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ .  ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ. ಈ ಆಚರಣೆ ಪರಿಸರದ ಕುರಿತಾಗಿ ವಿಶ್ವ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ಈಗ ಜಗತ್ತಿನಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪರಿಸರವನ್ನು ಉಳಿಸುವುದು ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುವುದು ಇದರ ಉದ್ದೇಶ.

ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ವಿಶ್ವಸಂಸ್ಥೆಯು Celebrate Biodiversity ಎಂಬ ಘೋಷ ವಾಕ್ಯವನ್ನು  ನೀಡಿದೆ. ಕಳೆದ ಬಾರಿ beat air pollution  ಎಂಬ ಘೋಷ ವಾಕ್ಯವನ್ನು ನೀಡಿತ್ತು.

Advertisement
Advertisement
Advertisement

ಈ ಬಾರಿ  ವಿಶ್ವ ಪರಿಸರ ದಿನ 2020 ರ  ಪ್ರಮುಖ ವಿಷಯವೆಂದರೆ “ಜೀವ ವೈವಿಧ್ಯತೆಯನ್ನು ಆಚರಿಸಿ”.  ಜಗತ್ತಿನಲ್ಲಿ ಸುಮಾರು 1 ಮಿಲಿಯನ್ ಜೀವ ಪ್ರಭೇದಗಳು ಅಳಿವಿನಂಚಿನಲ್ಲಿದೆ. ಹೀಗಾಗಿ ಈಗಲೇ ಜೀವವೈವಿಧ್ಯತೆಯ ಮೇಲೆ ಕೇಂದ್ರೀಕರಿಸಲು ಹೆಚ್ಚು ಮಹತ್ವದ ಸಮಯವಾಗಿದೆ. ಇಂತಹ ಅವಕಾಶ ಹಿಂದೆ ಇರಲಿಲ್ಲ. 

Advertisement

ಈ ದಿನ ವಿಶ್ವ ಪರಿಸರ ದಿನ. ಈ ಹೊತ್ತಿನಲ್ಲಿ ಒಂದು ಹೃದಯ ಚೂರಾಗುವಂತಹ ಸುದ್ದಿ ಬಹಿರಂಗವಾಗಿದೆ.‌
ಕೇರಳದ ಮಲಪ್ಪುರಂನಲ್ಲಿ ಅನನಾಸು ಹಣ್ಣಿನೊಳಗೆ ಸುಡುಮದ್ದು ಇಟ್ಟು ತಿನ್ನಿಸಿದ ಪರಿಣಾಮ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದೆ…ಇದನ್ನು ನೋಡಿದ ಬಳಿಕ ನಮಗೆ ಕೋವಿಡ್19 ಎಂಬುವುದು ಅತ್ಯಂತ ಚಿಕ್ಕ ಶಿಕ್ಷೆಯಾಗಿಯೇ ತೋರುತ್ತದೆ..
ವಿಶ್ವ ಪರಿಸರ ದಿನದ ಆಚರಣೆಯ ಸಂದರ್ಭದಲ್ಲಿ ಈ ಸುದ್ದಿ ಮನಸು ಕೆಡಿಸುವಂತಿದೆ. ಪ್ರಕೃತಿ ಎಲ್ಲವನ್ನೂ  ಮನುಷ್ಯ ನಿಗೆ ಅಗತ್ಯ ಕ್ಕಿಂತ ‌ಹೆಚ್ಚೇ ಕೊಟ್ಟಾಗಿದೆ. ಮಣ್ಣು, ನೀರು, ಗಾಳಿ ಎಲ್ಲವನ್ನೂ ಧಾರಾಳವಾಗಿ ಬಳಸುವ ಸ್ವಾತಂತ್ರ್ಯ ಮನುಜನಿಗಿದೆ. ಯಾವತ್ತೂ  ಅದನ್ನು ಬಳಸ ಬೇಡ, ಇದನ್ನು ಮುಟ್ಟ ಬೇಡವೆಂದು ಭೂಮಿ ತಾಯಿ ಎಲ್ಲೂ ತಡೆದಿಲ್ಲ. ಅಗತ್ಯಕ್ಕಿಂತ ಹೆಚ್ಚೇ ಬಳಸಿ ಹಾಳು ಮಾಡುತ್ತಿರುವುದು ನಾವೇ.   ಪರಿಸರದ ಮಕ್ಕಳಾದ ನಾವು , ಪ್ರಾಣಿ , ಪಕ್ಷಿಗಳೆಲ್ಲರೂ ಒಂದಾಗಿ ಬಾಳುವುದನ್ನು ಬಿಟ್ಟು ನಮ್ಮ ಪ್ರಾಬಲ್ಯ ವನ್ನು ಮೆರೆಯುತ್ತಿದ್ದೇವೆ. ಈ ಮನಸ್ಥಿತಿಯಿಂದ ಹೊರಬರಬೇಕಾದ ಸಮಯ ಬಂದಿದೆ. ಮತ್ತೀಗ  ನಾವೇ ಎಚ್ವೆತ್ತು ಕೊಳ್ಳುವ ಸಂದರ್ಭ ಒದಗಿ ಬಂದಿದೆ.
ಒಂದಾದ ಮೇಲೆ ಒಂದು ಅಪಾಯಗಳು  ಬಂದೆರಗುತ್ತಿವೆ. ಕೊರೊನಾದೊಂದಿಗೆ  ಒಂದಾದ ಮೇಲೊಂದರಂತೆ ‌ ಬರುತ್ತಿರುವ ಪ್ರಾಕೃತಿಕ ವಿಕೋಪಗಳು  ದೃತಿಕೆಡಿಸುತ್ತಿದೆ. ವಿಶ್ವ ದೆಲ್ಲೆಡೆ ಕೊರೊನಾ ಬಹು ದೊಡ್ಡ ಪಾಠ ಕಲಿಸಿದೆ. ಲಾಕ್ ಡೌನ್ ಜನರ ವಿಪರೀತ ಗಳಿಗೆ ಕೊಂಚ ಬ್ರೇಕ್ ಹಾಕಿದೆ. ಅನಾವಶ್ಯಕ ತಿರುಗಾಟಗಳನ್ನು, ಖರ್ಚು ಗಳನ್ನು ನಿಯಂತ್ರಿಸುವ ಕಾರ್ಯ ಕೊರೊನಾ ಮಾಡಿದೆ. ದೇಶಗಳಿಗೆ ಆರ್ಥಿಕ ವಾಗಿ ಬಹು ದೊಡ್ಡ ಹೊಡೆತ ವಾದರು ಪ್ರಕೃತಿ ಗೆ ಒಳ್ಳೆಯದೇ ಆಗಿದೆ. ಎಷ್ಟೋ ನಗರಗಳು, ನದಿಗಳು, ಕಲುಷಿತ ಮುಕ್ತ ವಾಗಿವೆ.  ಪ್ರಾಣಿ ಪಕ್ಷಿಗಳು ಮುಕ್ತವಾಗಿ ಓಡಾಡುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.     ವರ್ಷಕ್ಕೊಮ್ಮೆ 2 ತಿಂಗಳು ಲಾಕ್ ಡೌನ್ ಇದ್ದರೆ ಚೆಂದವೆಂದು ಜನರು ಅಭಿಪ್ರಾಯ ಪಡುವಂತಾಗಿದೆ.
ಈ ಸಂಧಿಕಾಲದಲ್ಲಿ  ಬಂದಿರುವ ವಿಶ್ವ ಪರಿಸರ ದಿನ ಆಚರಣೆ ಬಂದಿದೆ. ಜೂನ್ 5 ರಂದು ವಿಶ್ವದೆಲ್ಲೆಡೆ  ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತೇವೆ.  ಪ್ರಕೃತಿಗಾಗಿ ಕಿಂಚಿತ್ತು ಕೊಡುಗೆ ಕೊಡುವ ಅವಕಾಶ.  ಪ್ರತಿವರ್ಷ ಒಂದು ಧ್ಯೇಯ, ಉದ್ದೇಶ ಗಳೊಂದಿಗೆ ಆಚರಿಸಲಾಗುತ್ತದೆ.  ‘ ಜೀವ ವೈವಿಧ್ಯ ದ ಸಂರಕ್ಷಣೆ ‘ ಎಂಬ ಧ್ಯೇಯ ವಾಕ್ಯ ವಾಗಿದೆ.     ‘ ಹಸಿರು ಉಳಿದರಷ್ಟೇ ಉಸಿರು, ಮನೆಗೊಂದು ಗಿಡ ನೆಡಿ’ ಆಶಯವನ್ನು  ಪಾಲಿಸ ಬೇಕಾಗಿದೆ.. ನಾವು ಇಂದು ಪೂರ್ಣ ಮನಸಿನಿಂದ ಸಂಕಲ್ಪ ಮಾಡೋಣ . ಮನೆಗೊಂದು ಗಿಡ ನೆಡೋಣ. 
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |
November 22, 2024
9:02 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror