ಈಚೆಗೆ ಗ್ರಾಮೀಣ ಭಾಗದಲ್ಲಿ ಚಿಕ್ಕಮೇಳ ಸದ್ದು ಮಾಡುತ್ತಿದೆ. ಮಳೆಗಾಲದ ಅವಧಿಯಲ್ಲಿ ಮನೆಮನೆಗೆ ತೆರಳಿ ಯಕ್ಷಗಾನ ಉಳಿಸಿ, ಬೆಳೆಸುವ ಪ್ರಯತ್ನವೊಂದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಮನೆಗೆ ಭೇಟಿ ನೀಡಿದ ತಂಡವು ತಿರುಗಾಟವನ್ನು ಆರಂಭಿಸಿತು.
ಅಂಗ್ರಿ , ಕನ್ಯಾನದ ಶ್ರೀ ದುರ್ಗಾಪರಮೇಶ್ವರಿ ( ಶ್ರೀ ಉಳ್ಳಾಲ್ತಿ) ಸಂಚಾರಿ ತಿರುಗಾಟದ ಯಕ್ಷಗಾನ ತಂಡವು ಸುಳ್ಯ ತಾಲೂಕಿನ ಗುತ್ತಿಗಾರಿನ ತಂಡದೊಂದಿಗೆ ಹೊರಟ ಚಿಕ್ಕಮೇಳ ತಂಡ ಸುಳ್ಯದ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರ ಮನೆಗೆ ಭೇಟಿ ನೀಡಿತು.
ಈ ಸಂದರ್ಭ ಹಿಮ್ಮೇಳ ಕಲಾವಿದರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್ ಭಟ್ ದೇವಸ್ಯ ಹಾಗೂ ಮುಮ್ಮೇಳ ಕಲಾವಿದರಾಗಿ ಗಿರೀಶ್ ಕಣ್ಕಲ್ , ಚರಣ್ ಗೌಡ ಕಾಣಿಯೂರು(ಧರ್ಮಸ್ಥಳ ಮೇಳ).
ಮತ್ತು ಮಿಥುನ್ ಕುಮಾರ್ ಸೋನ , ಚಂದ್ರ ಶೇಖರ್ ಕಾನಾವು ಮೊದಲಾದವರು ಇದ್ದರು.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…