ಉಗ್ರಸ್ವರೂಪ ಪಡೆದ ಚಂಡಮಾರುತ ಬಿಪೊರ್‌ ಜೊಯ್‌ | ಗುಜರಾತ್‌ ಗೂ ಅಪ್ಪಳಿಸಲಿದೆ ಚಂಡಮಾರುತ |

June 12, 2023
9:55 AM

ಅರಬ್ಬಿ ಸಮು​ದ್ರ​ದಲ್ಲಿ ಸೃಷ್ಟಿ​ಯಾ​ದ  ಬಿಪೊರ್‌ಜೊ​ಯ್‌ ಇದೀಗ ತೀವ್ರ ಸ್ವರೂ​ಪದೊಂದಿಗೆ  ಗುಜ​ರಾ​ತ್‌ನ ಕಛ್‌ ಹಾಗೂ ಪಾಕಿ​ಸ್ತಾ​ನದ ಕರಾಚಿ ನಡುವೆ ಜೂನ್ 15ರ ವೇಳೆಗೆ ಅಪ್ಪ​ಳಿ​ಸುವ ಸಾಧ್ಯತೆ ಇದೆ ಎಂದು ಭಾರ​ತೀ​ಯ ಹವಾ​ಮಾನ ಇಲಾಖೆ  ಹೇಳಿ​ದೆ. 

ಎರಡನೇ ಹಂತದ ಚಂಡಮಾರುತ ಎಚ್ಚರಿಕೆಯನ್ನು ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಎಚ್ಚರಿಕೆಯನ್ನು ನೀಡಲಾಗಿದೆ. ಬೈಪಾರ್ಜೋಯ್ ಪೂರ್ವ ಮಧ್ಯ ಅರೇಬಿಯನ್ ಸಮುದ್ರದಲ್ಲಿ ಜೂನ್ 11 ರಂದು ಚಲಿಸಿ ಜೂನ್ 15 ರ ಮಧ್ಯಾಹ್ನದ ವೇಳೆಗೆ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಂಗಾಳಿ ಭಾಷೆ​ಯಲ್ಲಿ ಚಂಡ​ಮಾ​ರು​ತ​ಕ್ಕೆ ‘ಬಿ​ಪೊ​ರ್‌​ಜೊ​ಯ್‌’  ಎಂದು ಹೆಸ​ರಿ​ಡ​ಲಾ​ಗಿದೆ. ಭಾನು​ವಾರ  ಗುಜ​ರಾ​ತ್‌ನ ಪೋರ​ಬಂದ​ರ್‌​ನಿಂದ 480 ಕಿ.ಮೀ. ದೂರದ ನೈಋತ್ಯ ಭಾಗ​ದಲ್ಲಿ ಕೇಂದ್ರೀ​ಕೃ​ತ​ವಾ​ಗಿ​ತ್ತು. ಅದು ಉತ್ತರ ಭಾಗ​ದತ್ತ ಚಲಿ​ಸ​ಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್‌ ಮತ್ತು ಪಾಕಿ​ಸ್ತಾನದ ಕರಾಚಿ ಕರಾ​ವ​ಳಿ​ಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿ​ಗೆ ಅಪ್ಪ​ಳಿ​ಸ​ಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ
September 19, 2026
12:06 PM
by: ದ ರೂರಲ್ ಮಿರರ್.ಕಾಂ
ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು
September 19, 2026
11:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror