ಜನ ಮೋಸ ಹೋಗುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಅದರಲ್ಲೂ ಈ ಚೀನಿ#Chineseಯರು ಇತರ ದೇಶದ ಜನರನ್ನು ಮಂಗ ಮಾಡೋದ್ರಲ್ಲಿ ಎತ್ತಿದ ಕೈ. ಚೀನಾ ದೇಶ ತಂತ್ರಜ್ಞಾನ#Technologyದಲ್ಲಿ ಪವರ್ಫುಲ್ ದೇಶ. ಗ್ಯಾಜೆಟ್ ಐಟಂ ತಯಾರಿಸುದಲ್ಲಿ ಮುಂಚೂಣಿಯಲ್ಲಿದೆ. ಹಾಗೆ ಇದೇ ಅಸ್ತ್ರದೊಂದಿಗೆ ಇತರರನ್ನು ದೋಚುವ ಕೆಲಸವನ್ನು ಚೆನ್ನಾಗಿ ಮಾಡುತ್ತಿದೆ. ಪ್ರಪಂಚದಲ್ಲಿ ಯಾವತ್ತಿದ್ದರೂ ಚೀನಾ ಮೋಸಕ್ಕೆ ಹೆಸರುವಾಸಿ. ಹಾಗಾಗಿ ಚೀನಾ ಅಪ್ ಗಳನ್ನು ಬಳಸುವಾಗ ಎಚ್ಚರ.
ಸಾಮಾಜಿಕ ಜಾಲತಾಣದಲ್ಲಿ ಸಾಲ ಕೊಡುವ ಆ್ಯಪ್ ಗಳು ಹೆಚ್ಚಾಗಿವೆ. ಕಡಿಮೆ ಬಡ್ಡಿಗೆ ಹಣ ಸಿಗುತ್ತೆ ಅಂತ ಜನ ಮೋಸ ಹೋಗ್ತಾ ಇದ್ದಾರೆ. ಅದರಲ್ಲೂ ಚೀನೀ ಆ್ಯಪ್ಗಳನ್ನು ಡೌನ್‍ಲೋಡ್ ಮಾಡಿಕೊಂಡು ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಸಾಲದ ಆ್ಯಪ್ಗಳಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಚೀನೀ ಆ್ಯಪ್ಗಳಿಂದ ಎಚ್ಚರದಿಂದ ಇರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಟ್ರ್ಯ್ರಾಪ್ ಕಾಲ್ : ವೀಡಿಯೊ ಕಾಲ್ ಮತ್ತು ಇಂಟರ್ನೆಟ್ ಕಾಲ್ ಮೂಲಕ ಜನರನ್ನು ಚೀನೀ ಆ್ಯಪ್ಗಳು ಸಾಲದ ಬಲೆಗೆ ಬೀಳಿಸಿಕೊಳ್ಳುತ್ತಿವೆ. ಅವರು ಮಾನ್ಯತೆ ಪಡೆದ ಹಣಕಾಸು ಏಜೆನ್ಸಿಗಳಿಂದ ಮಾತನಾಡಿದಂತೆ ಮಾಡಿ ಜನರನ್ನು ನಂಬಿಸುತ್ತಾರೆ. ನಂತರ ಸಾಲ ಕೊಡುವ ನೆಪದಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಭಾವಚಿತ್ರಗಳು ಸೇರಿದಂತೆ ವೈಯಕ್ತಿಕ ವಿವರಗಳನ್ನು ಪಡೆಯುತ್ತಾರೆ. ಸಾಲದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮೊತ್ತವನ್ನು ಜಮಾ ಮಾಡಿದ ಕ್ಷಣದಿಂದಲೇ ಟ್ರ್ಯಾಪ್ ಮಾಡಲು ಪ್ರಾರಂಭಿಸುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಜನರಿಗೆ ಬ್ಲ್ಯಾಕ್‍ಮೇಲ್ : ಸಾಲ ವಸೂಲಾತಿಗಾಗಿ ಸಂತ್ರಸ್ತರ ಕುಟುಂಬಗಳಿಗೆ ಅಶ್ಲೀಲ ಫೋಟೋಗಳನ್ನು ಕಳಿಸಿ ಬ್ಲ್ಯಾಕ್‍ಮೇಲ್ ಮಾಡ್ತಾರೆ. ಸಾಲದ ಅಪ್ಲಿಕೇಶನ್ ಸಂಸ್ಥೆಗಳು ಜನರ ವೈಯಕ್ತಿಕ ವಿವರಗಳನ್ನು ಪಡೆಯುವ ಮೂಲಕ ಸಾಲವನ್ನು ವಸೂಲಿ ಮಾಡಲು ಮುಂದಾಗುತ್ತವೆ. ಅಂತಿಮವಾಗಿ ಸಂತ್ರಸ್ತರು ಸಾಲವಾಗಿ ಪಡೆದಿದ್ದಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿ ಮಾಡುತ್ತಾರೆ ಎಂದು ಜೈನ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಸುಮಾರು 600 ಸಾಲದ ಅಪ್ಲಿಕೇಶನ್‍ಗಳನ್ನು ನಿಷೇಧಿಸಿದೆ. ಆದ್ರೂ ದಿನ ಹೊಸ ಹೊಸ ಆ್ಯಪ್ಗಳು ಹುಟ್ಟಿಕೊಂಡು ಜನರನ್ನು ಮೋಸಗೊಳಿಸುತ್ತಿವೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…