ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ. ಏಕೆಂದರೆ ಈಗ ಕರ್ಕಾಟಕ ವೃತ್ತದೆಡೆಗೆ, ಚಲಿಸುತ್ತಿರುವ ಸೂರ್ಯ ತಾನು ಹಾದುಹೋಗುವ ಸ್ಥಳಗಳಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಬಂದಾಗ ಭೂಮಿಯ ಮೇಲೆ ಬೀಳುವ ವಸ್ತುಗಳ ನೆರಳು ಶೂನ್ಯವಾಗುತ್ತದೆ. ಆ ದಿನಗಳನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಭೂಮಿಯ ಭ್ರಮಣದ ಅಕ್ಷವು 23.5 ಡಿಗ್ರಿ ವಾಲಿರುವುದರಿಂದ ಕರ್ಕಾಟಕ ಮತ್ತು ಮಕರ ಸಂಕ್ರಾತಿ ವೃತ್ತಗಳ ಒಳಭಾಗದಲ್ಲಿ ಈ ವಿದ್ಯಮಾನವು ವಿವಿಧ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.
ಹೆಚ್ಚಿನ Updates ಪಡೆಯಲು ರೂರಲ್ ಮಿರರ್.ಕಾಂ WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ…
ಇದಕ್ಕೆ ಸಂಬಂಧಿಸಿದ ವಿದ್ಯಮಾನವನ್ನು ಯಾರು ಬೇಕಾದರೂ ಮಾಡಿ ನೋಡಬಹುದು. ಮಂಗಳೂರಿನಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಾರ್ವಜನಿಕರಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ದೇಶದ ಇತರ ಕೇಂದ್ರಗಳ ಸಮನ್ವಯತೆ ಹಾಗೂ ಸಮಾಲೋಚನೆಯಿಂದ ಕೆಲವು ಪ್ರಯೋಗಗಳನ್ನು ಸಹ ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿದೆ. ಪ್ರಾತ್ಯಕ್ಷಿಕೆಗಳನ್ನು ಹಾಗೂ ಪ್ರಯೋಗಗಳನ್ನು ಕೇಂದ್ರದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಆಯೋಜಿಸಿದ್ದು ಆಸಕ್ತರು ಭಾಗವಹಿಸಬೇಕಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.