ಸುಳ್ಯ: ಪೆಬ್ರವರಿ 16 ರಂದು ಅಜ್ಜಾವರ ನವೋದಯ ಸ್ವ ಸಹಾಯ ಸಂಘಕ್ಕೆ ಮಾಹಿತಿ ಕಾರ್ಯಕ್ರಮ ಅಜ್ಜಾವರದ ಅಂಬೇಡ್ಕರ್ ಭವನ ಮೇನಾಲದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನನಿ ನವೋದಯ ಸಂಘದ ಸದಸ್ಯೆ ಮತ್ತು ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೀನಾ ಕರುಣಾಕರ ಉಪಸ್ಥಿತರಿದ್ದರು. ನವೋದಯ ಸ್ವ ಸಹಾಯ ಸಂಘದ ತಾಲೂಕು ಮೇಲ್ವಿಚಾರಕರಾದ ತಿಮ್ಮಪ್ಪ ಗೌಡ ನವೋದಯ ಸಂಘದ ಬಗ್ಗೆ ಮಾಹಿತಿ ನೀಡಿದರು.
ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನನಿ ನವೋದಯ ಗುಂಪಿನ ಸದಸ್ಯೆ ವೀಣಾ ವಂದಿಸಿದರು. ಸುಮಾರು ನೂರಕ್ಕೂ ಅಧಿಕ ನವೋದಯ ಸಂಘದ ಸದಸ್ಯರು ಸಮವಸ್ತ್ರದಲ್ಲಿ ಪಾಲ್ಗೊಂಡು ಮಾಹಿತಿ ಪಡಕೊಂಡರು. ಲಘು ಉಪಹಾರದ ವ್ಯವಸ್ಥೆಯನ್ನು ಸುಳ್ಯ ಸಿ ಎ ಬ್ಯಾಂಕ್ ವತಿಯಿಂದ ಮಾಡಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel