ಅಡಿಕೆ ಆಮದು ನಿಲ್ಲುವತ್ತ ಕ್ರಮ ? ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ …

July 5, 2019
8:00 AM

ವಿದೇಶಗಳಿಂದ ಆಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಅಕ್ರಮವಾಗಿ ಆಮದಾಗುತ್ತಿದೆ. ಇದು ಸಂಪೂರ್ಣ ನಿಷೇಧವಾದರೆ ಅಡಿಕೆ ಧಾರಣೆ ಸ್ಥಿರ ಹಾಗೂ ಏರಿಕೆಯೂ ಸಾಧ್ಯವಿದೆ. ಇದೀಗ ಕೇಂದ್ರ ಸರಕಾರವು ಅಡಿಕೆ ಆಮದು ತಡೆಗೆ ಕ್ರಮ ಕೈಗೊಳ್ಳುತ್ತಿದೆ. ಇದೊಂದು ಕಾರಣದಿಂದ ಅಡಿಕೆ ಧಾರಣೆ ಏರಿಕೆ ನಿರೀಕ್ಷೆಯೂ ಇದ್ದು ಕಳೆದ ವಾರವೇ ಹೊಸ ಅಡಿಕೆಗೆ 2 ರೂಪಾಯಿ ಧಾರಣೆಯೂ ಏರಿಕೆ ಕಂಡಿದೆ.

Advertisement
Advertisement
Advertisement
Advertisement

ವಿದೇಶದಿಂದ ಕಳಪೆ ಅಡಿಕೆ  ಆಮದನ್ನು ತಡೆಯುವ ಕುರಿತು ಕೇಂದ್ರ ಸರಕಾರವು ಗಮನಹರಿಸಬೇಕು ಹಾಗೂ ವಿದೇಶದಿಂದ ಅಕ್ರಮವಾಗಿ ಬರುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು  ಸಂಸದ ನಳಿನ್ ಕುಮಾರ್ ಕಟೀಲು ಲೋಕಸಭೆಯಲ್ಲಿ ಸರಕಾರವನ್ನು  ಒತ್ತಾಯಿಸಿದ್ದಾರೆ. ಇದರ ಜೊತೆಗೆ ಅಡಿಕೆ ಬೆಳೆಗಾರರ ಬಗ್ಗೆ ಹಾಗೂ ಅಡಿಕೆ ಕೃಷಿ ಬಗ್ಗೆ ಸಮಗ್ರ ವಿವರವನ್ನೂ ವಾಣಿಜ್ಯ ಸಚಿವರಿಗೆ ಕ್ಯಾಂಪ್ಕೋ ಹಾಗೂ ಅಡಿಕೆ ಬೆಳೆಗಾರರ ನಿಯೋಗ ನೀಡಿದೆ. ಅಧಿವೇಶನದ ಬಳಿಕ ಕ್ರಮವಾಗಲಿದೆ ಎಂದು  ಮಾಹಿತಿ ಲಭ್ಯವಾಗಿದೆ.

Advertisement

ಪ್ರಮುಖವಾಗಿ ನೆರೆಯ ಬಾಂಗ್ಲಾ, ಬರ್ಮಾ, ನೇಪಾಳ, ಶ್ರೀಲಂಕಾ ಹಾಗೂ ಮಲೇಶಿಯಾ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆ ದೇಶದೊಳಗೆ ಬಂದು ಇಲ್ಲಿ ಭಾರತದ ಅಡಿಕೆ ಜೊತೆ ಬೆರೆಸಿ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ಕಳೆದ ಕೆಲವು ಸಮಯಗಳಿಂದ ನಿಗಾ ಇರಿಸಲಾಗಿದ್ದು ಸಮಗ್ರ ಮಾಹಿತಿಯನ್ನೂ ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಕಳಪೆ ಗುಣಮಟ್ಟದ ಅಡಿಕೆಯ ಕಾರಣದಿಂದ ಅಡಿಕೆ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳು  ಸಂಕಷ್ಟಕ್ಕೆ ಒಳಗಾಗಿವೆ . ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಕರು ಕಂಗಾಲಾಗಿರುತ್ತಾರೆ. ಈ ಬಾರಿ ಕೊಳೆರೋಗದಿಂದ ಅಡಿಕೆಯೂ ಕಡಿಮೆಯಾಗಿರುವ ಕಾರಣ ಧಾರಣೆ ಏರಿಕೆ ಈಗಲೇ ಕಾಣಬೇಕಿತ್ತು. ಆದರೆ ಏರಿಕೆಯಾಗದೆ ಕೃಷಿಕರೂ ಕಂಗಾಲಾಗಿದ್ದಾರೆ. ಇದೀಗ ಸರಕಾರವು ಸೂಕ್ತ ಕ್ರಮಕೈಗೊಂಡರೆ ಅಡಿಕೆ ಧಾರಣೆ ಏರಿಕೆ ನಿಶ್ಚಿತ.

ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧಿವೇಶನದಲ್ಲಿ  ಅಡಿಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತು   ಕೇಂದ್ರ ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು  ಒತ್ತಾಯಿಸಿರುವುದು  ಕೃಷಿಕರಿಗೆ ಆಶಾಭಾವನೆ ಮೂಡಿಸಿದೆ.

Advertisement

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
Weather Updates | ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಕ್ಷೀಣ |
January 30, 2025
11:47 AM
by: ಸಾಯಿಶೇಖರ್ ಕರಿಕಳ
ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕ್ರಮ | ರೈತರ ಜತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚರ್ಚೆ
January 30, 2025
7:28 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror