ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಮಹಾಸಭೆ

July 14, 2019
9:00 PM

ಸುಳ್ಯ: ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್  ಇದರ ವಾರ್ಷಿಕ ಮಹಾಸಭೆ ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಬಿ.ಕೆ. ಮಾಧವ , ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್ ಆಯ್ಕೆಯಾದರು.

ಸಭೆಯ ಅಧ್ಯಕ್ಷತೆಯನ್ನು ಎನ್.ಎ. ರಾಮಚಂದ್ರ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಶೀರ್.ಆರ್.ಬಿ. ಲೆಕ್ಕಾಚಾರ ಮಂಡಿಸಿದರು.

ಸಭೆಯನ್ನು ಉದ್ದೇಶಿಸಿ ನಿರ್ಗಮನ ಅಧ್ಯಕ್ಷ ಎನ್.ಎ. ರಾಮಚಂದ್ರ, ನೂತನ ಅಧ್ಯಕ್ಷ ಬಿ.ಕೆ. ಮಾಧವ, ಜಿಲ್ಲಾ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶರತ್ ಅಡ್ಕಾರು, ನಿರ್ಣಾಯಕ ಮಂಡಳಿ ಅಧ್ಯಕ್ಷ ಮಾಯಿಲಪ್ಪ, ಸಂಚಾಲಕರಾದ ನಟರಾಜ, ಸಂದೀಪ್ ಪಲ್ಲೋಡಿ ಉಪಸ್ಥಿತರಿದ್ದರು.

ಕೋಶಾಧಿಕಾರಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಸುಧಾಕರ ರೈ ಬಾಳಿಲ ಧನ್ಯವಾದ ಮಾಡಿದರು. ಕೆ.ಟಿ. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:

ಗೌರವಾಧ್ಯಕ್ಷರಾಗಿ ಎನ್. ಎ. ರಾಮಚಂದ್ರ, ಅಧ್ಯಕ್ಷರಾಗಿ ಬಿ.ಕೆ. ಮಾಧವ, ಉಪಾಧ್ಯಕ್ಷರಾಗಿ ಕೆ.ಎಸ್. ಗೋಪಾಲಕೃಷ್ಣ ಕರೋಡಿ, ಶರತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಟಿ.ವಿಶ್ವನಾಥ್, ಜತೆ ಕಾರ್ಯದರ್ಶಿಯಾಗಿ ಹರಿಪ್ರಕಾಶ್ ಅಡ್ಕಾರ್, ಕೋಶಾಧಿಕಾರಿಯಾಗಿ ಸುಧಾಕರ ರೈ ಬಾಳಿಲ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಆರ್ ಬಿ., ಹರ್ಷಿತ್, ನಿರ್ದೇಶಕರುಗಳಾಗಿ ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ರವಿ ಪ್ರಕಾಶ್, ಸತೀಶ್ ಕೆ.ಜಿ., ಹಮೀದ್ ಕೊಳಂಜಿಕೋಡಿ, ರಾಧಾಕೃಷ್ಣ ರೈ ಬೂಡು, ಮಹಮ್ಮದ್ ನಾಸೀರ್, ಮಹಾಪೋಷಕಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಪೋಷಕಾಧ್ಯಕ್ಷರಾಗಿ ಅಕ್ಷಯ್ ಕುರುಂಜಿ, ಗೌರವ ಸಲಹೆಗಾರರಾಗಿ ಸುಧಾಕರ ರೈ ಪಿ,ಬಿ., ಶಿವರಾಮ ಏನೆಕಲ್, ಎಸ್ ಸಂಶುದ್ದೀನ್, ಎನ್. ಜಯಪ್ರಕಾಶ್ ರೈ, ಕೆ.ಎಂ. ಮುಸ್ತಫಾ ಆಯ್ಕೆಯಾದರು.

ನಿರ್ಣಾಯಕ ಮಂಡಳಿಯ ಪದಾಧಿಕಾರಿಗಳು :

ಅಧ್ಯಕ್ಷರಾಗಿ ಮಾಯಿಲಪ್ಪ ಕೆ., ಸಂಚಾಲಕರಾಗಿ ನಟರಾಜ ಎಂ.ಎಸ್., ಸಂದೀಪ್ ಪಲ್ಲೋಡಿ, ಸದಸ್ಯರುಗಳಾಗಿ ಶಿವರಾಮ ಏನೆಕಲ್ಲು, ದೊಡ್ಡಣ್ಣ ಬರೆಮೇಲು, ಎ.ಸಿ. ವಸಂತ, ವಿಶ್ವನಾಥ ಕೆ., ಮಂಜುನಾಥ, ವೀರನಾಥ, ರಂಗನಾಥ, ಪದ್ಮನಾಭ ಏನೆಕಲ್, ಉಮೇಶ್, ತೀರ್ಥವರ್ಣ, ಸೀತಾರಾಮ, ವಿನ್ಯಾಸ, ಮಿಥುನ್ ಆಯ್ಕೆಯಾದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ
ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ
October 16, 2026
3:13 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ
October 16, 2026
2:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror