ಮಂಡೆಕೋಲು ಅಪರಾಧ ಮುಕ್ತ ಗ್ರಾಮಕ್ಕೆ ಸಂಕಲ್ಪ : ‘ಗ್ರಾಮ ಸ್ವರಾಜ್ಯದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಂಗಾರ

October 3, 2019
6:31 PM

ಸುಳ್ಯ:ಪ್ರತಿಯೊಬ್ಬರೂ ಅಪರಾಧಗಳಿಂದ ದೂರವಿದ್ದು ದುಶ್ಚಟಗಳಿಂದ ಮುಕ್ತರಾದರೆ ಅಂತಹ ನಾಡು ಆದರ್ಶವಾಗಿರಲು ಸಾಧ್ಯ. ಆದುದರಿಂದ ಆದರ್ಶ ಗ್ರಾಮವಾಗಲು ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ ಎಂದು ಶಾಸಕ ಎಸ್. ಅಂಗಾರ ಹೇಳಿದ್ದಾರೆ.

ಮಂಡೆಕೋಲು ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಮತ್ತು ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಹಯೋಗದಲ್ಲಿ ಮಂಡೆಕೋಲನ್ನು ಆದರ್ಶ ಗ್ರಾಮವಾಗಿಸುವ ಸಂಕಲ್ಪ ‘ಗ್ರಾಮ ಸ್ವರಾಜ್ಯದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಹಿಂದೆ ಅಪರಾಧ ಮುಕ್ತ ಗ್ರಾಮ ಎಂಬ ಆಂದೋಲನ ನಡೆಸಿರುವುದು ಮತ್ತು ಈಗ ಗ್ರಾಮಸ್ಥರೇ ಸೇರಿ ಆದರ್ಶ ಗ್ರಾಮವನ್ನು ರೂಪಿಸಲು ಮುಂದಾಗಿರುವುದು ಅತ್ಯಂತ ಧನಾತ್ಮಕ ಮತ್ತು ಶ್ರೇಷ್ಠ ಚಿಂತನೆ. ಇದಕ್ಕೆ ಎಲ್ಲಾ ರೀತಿಯ ಬೆಂಬಲವನ್ನೂ ನೀಡುತ್ತೇನೆ. ಗ್ರಾಮದ ಮೂಲಭೂತ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಅವರು ಹೇಳಿದರು.

ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಬಿ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಾನಕಿ ಕಣೆಮರಡ್ಕ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಪ್ರೇರಕಿ ಸಂಧ್ಯಾ ಮಾವಂಜಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸರೋಜಿನಿ ಮಾವಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯೆ ವಿನುತಾ ಪಾತಿಕಲ್ಲು ಸ್ವಾಗತಿಸಿ, ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿ ಸಂಚಾಲಕ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ವಿಕಾಸ ಸಮಿತಿ ಸಂಚಾಲಕ ಜಯರಾಜ್ ಕುಕ್ಕೆಟ್ಟಿ ವಂದಿಸಿದರು. ಶ್ರೀಕಾಂತ್ ಮವಂಜಿ ಮತ್ತು ಬಾಲಕೃಷ್ಣ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror