ಕುಕ್ಕೆ ಸುಬ್ರಹ್ಮಣ್ಯ: ಹಳೆಬ್ರಹ್ಮರಥದ ಜಾಗಕ್ಕೆ ನೂತನ ರಥ

November 5, 2019
3:03 PM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನೇಕ ವರ್ಷಗಳಿಂದ ಇದ್ದ ಬ್ರಹ್ಮರಥದ ಜಾಗದಲ್ಲಿ ಈಗ ನೂತನ ಬ್ರಹ್ಮರಥ ಇರಿಸಲಾಯಿತು. ಇದುವರೆಗೆ ಇದ್ದ ಹಳೆಯ ಬ್ರಹ್ಮರಥವನ್ನು ಸವಾರಿ ಮಂಟಪದ ಬಳಿ ಇಡುವ ಕಾರ್ಯ ನಡೆಯುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಕಳೆದ ಹಲವಾರು ವರ್ಷಗಳಿಂದ ಚಂಪಾಷ್ಠಿ ಸಂದರ್ಭ ಎಳೆಯಲಾಗುವ ಬ್ರಹ್ಮರಥ ದೇಶದಲ್ಲೇ ಅತ್ಯಂತ ವಿಶಿಷ್ಠ ಎನಿಸಿದೆ. ಇದೀಗ ನೂತನ ಬ್ರಹ್ಮರಥ ನಿರ್ಮಾಣದ ಬಳಿಕ ಕೋಟೇಶ್ವರದಿಂದ  ವಿಜೃಂಭಣೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗಿತ್ತು. ಈ ಬಾರಿಯ ಚಂಪಾ ಷಷ್ಠಿಗೆ ನೂತನ ಬ್ರಹ್ಮರಥ ಎಳೆಯಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ  ಹಳೆಯ ಬ್ರಹ್ಮರಥ ತೆರವು ಕಾರ್ಯ ಮಂಗಳವಾರ ಕ್ರೇನ್ ಮೂಲಕ ನಡೆಯಿತು. ಹಳೆಯ ಬ್ರಹ್ಮರಥವನ್ನು ಸದ್ಯ ಸವಾರಿ ಮಂಟಪದ ಬಳಿ ಇರಿಸಲಾಗುತ್ತಿದೆ. ಮುಂದೆ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಬದಿ ಭಕ್ತಾದಿಗಳಿಗೆ ಕಾಣುವಂತೆ ಇರಿಸಬೇಕು ಎಂಬುದು ಭಕ್ತಾದಿಗಳ ಬೇಡಿಕೆಯಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪತ್ರಕರ್ತ, ಕೃಷಿಕ : ಮಹೇಶ್ ಪುಚ್ಚಪ್ಪಾಡಿ
February 18, 2026
11:06 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05.11.2025 | ಎಲ್ಲೆಲ್ಲಾ ಮಳೆ ನಿರೀಕ್ಷೆ..? ನಿರೀಕ್ಷೆಯಂತೆ ಮಳೆಯಾಗದಿರಲು ಕಾರಣವೇನು..?
November 5, 2025
2:24 PM
by: ಸಾಯಿಶೇಖರ್ ಕರಿಕಳ
ಹಸಿರು ಹೈಡ್ರೋಜನ್ ಘಟಕ ಕಾರ್ಯಾಚರಣೆ | ಹಸಿರು ಇಂಧನ ಉತ್ಪಾದನೆಗೆ ಒತ್ತು
August 1, 2025
7:38 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror