ಕುಮಾರಪರ್ವತ ಚಾರಣ ಹೋದ ಯುವಕ ನಾಪತ್ತೆ

September 16, 2019
9:06 PM

ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣ ಹೋದ ಯುವಕರ ತಂಡದಲ್ಲಿದ್ದ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ. ಒಟ್ಟು 12 ಜನರ ತಂಡ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿತ್ತು. ಈ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್  ಭಾನುವಾರ ಸಂಜೆ ನಾಪತ್ತೆಯಾಗಿದ್ದಾರೆ. ಇದೀಗ ಹುಡುಕಾಟ ಆರಂಭವಾಗಿದೆ. ನಾಳೆ ಬೆಳಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ 5 ತಂಡ ಹುಡುಕಾಟ ನಡೆಸಲಿದೆ.

 

ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ  ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು. 12 ಜನರ ತಂಡದಲ್ಲಿದ್ದವರು ಸುಸ್ತಾದ್ದರಿಂದ ತಂಡ ತಂಡವಾಗಿ ನಡೆದುಕೊಂಡು ಬರುತ್ತಿದ್ದರು. 5 ಮಂದಿ ಮುಂದೆ ಹಾಗೂ ಆ ನಂತರ 6 ಜನ ಹಾಗೂ ನಡುವೆ ನಾಪತ್ತೆಯಾದ ಸಂತೋಷ್ ಒಬ್ಬರೇ ಬರುತ್ತಿದ್ದರು. ಈ ಸಂದರ್ಭ ಸಂತೋಷ್ ಹೇಗೆ ನಾಪತ್ತೆಯಾದರು ಎನ್ನುವುದು ಕುತೂಹಲ ಮೂಡಿಸಿದೆ. ಸೋಮವಾರ ಬೆಳಗ್ಗೆ ನಾಪತ್ತೆಯಾದ ಯುವಕನ ಪತ್ತೆಗೆ ಪ್ರಯತ್ನ ನಡೆಸಲಾಗಿದೆ. ಸಂಜೆಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಣೆಯಾದ ವ್ಯಕ್ತಿಯ ಪತ್ತೆಯ ನಿಮಿತ್ತ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 5 ತಂಡಗಳು  ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕಾರ್ಯಚರಣೆ ಪ್ರಾರಂಭಿಸಲಿದೆ.

ಬೆಂಗಳೂರು ಕಾಳಿಕಾ ನಗರ ನಿವಾಸಿ ದರ್ಶನ್ ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror