ಕುಮಾರಪರ್ವತ ಟ್ರಕ್ಕಿಂಗ್ ಮಾಡುವವರಿಗೆ ಬೇಕು ಸರಿಯಾದ ಮಾಹಿತಿ….

September 18, 2019
9:00 AM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೇ ಕೆಲವು ಟ್ರಕ್ಕಿಂಗ್ ಜಾಗಗಳು ಇವೆ. ಇದರಲ್ಲಿ ಕುಮಾರಪರ್ವತವೂ ಒಂದು. ಆದರೆ ಕುಮಾರಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಮಳೆಗಾಲದ ಅವಧಿ ಸೂಕ್ತವಲ್ಲ. ಈಗಂತೂ ಭಾರೀ ಮಳೆ ಹಾಗೂ ಗುಡ್ಡ ಕುಸಿದತಂಹ ಸಂದರ್ಭಗಳು ಹೆಚ್ಚಾಗುತ್ತಿರುವ ಕಾರಣದಿಂದ ಚಾರಣಿಗರಿಗೆ ಸೂಕ್ತ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೇಳಬೇಕಿದೆ….

Advertisement
Advertisement
Advertisement

ಚಾರಣ, ಟ್ರಕ್ಕಿಂಗ್ ಎಂದರೆ ಯುವಕರಿಗೆ ಮಾತ್ರವಲ್ಲ ಹಲವಾರು ಮಂದಿಗೆ ಆಸಕ್ತಿ. ಯುವಕರು ಮುಂಚೂಣಿಯಲ್ಲಿದ್ದರೆ ವಯಸ್ಕರೂ ಆಸಕ್ತಿಯಿಂದ ಭಾಗವಹಿಸುತ್ತಾರೆ. ಏಕೆಂದರೆ ಚಾರಣ ನೀಡುವ ಖುಷಿ ಅಂತಹದ್ದು. ಪರಿಸರದ ನಡುವೆ ಓಡಾಡುತ್ತಾ ಸುಂದರ ದೃಶ್ಯಗಳು ಮನಸ್ಸಿಗೆ ಆಹ್ಲಾದ ನೀಡುತ್ತದೆ.  ರಾಜ್ಯದ ಹಲವು ಕಡೆ ಟ್ರಕ್ಕಿಂಗ್ ಸ್ಫಾಟ್ ಇದೆ. ಇಲ್ಲಿ ಹಸಿರಿನಿಂದ ಕೂಡಿದ ಕಾಡು-ಮೇಡು, ನದಿ, ಝರಿ, ಗುಡ್ಡ ,ಪರ್ವತ, ಕಣಿವೆ, ಶಿಖರಗಳು ಸೆಳೆಯುತ್ತವೆ.  ಕೆಲವು ಜನರು ಟ್ರಕ್ಕಿಂಗ್ ಅನ್ನು ಒಂದು ಹವ್ಯಾಸವಾಗಿ ರೂಢಿಸಿಕೊಂಡು ಆಗಾಗ್ಗೆ ಕಾಡು ಮೇಡು ಅಲೆಯುತ್ತಿರುತಾರೆ. ಹೀಗಾಗಿ ಚಾರಣ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಂದರ್ಭದಲ್ಲಿ ಸ್ಥಳೀಯವಾಗಿ ಮಾಹಿತಿ ಇಲ್ಲದೆ ಅಲೆದಾಟ ಮಾಡಬೇಕಾದ ಸ್ಥಿತಿ ಬರುತ್ತದೆ. ಇದಕ್ಕಾಗಿ ಸೂಕ್ತ ಮಾಹಿತಿ ಅಗತ್ಯವಾಗಿದೆ.

Advertisement

ಅನುಮತಿ ಪಡೆದೇ ಚಾರಣ ಮಾಡಬೇಕು. ಅದಕ್ಕೆ ಒಂದಷ್ಟು ಸಿದ್ದತೆ ಮುಖ್ಯ. ನಡೆಯುವ ಅಭ್ಯಾಸ ಇಲ್ಲದಿರುವವರು ಚಾರಣಕ್ಕೆ ಹೋಗುವ ಮುನ್ನ ನಡೆಯುವ ಅಭ್ಯಾಸ ಇಟ್ಟುಕೊಂಡರೆ ಚಾರಣ ಮಾಡುವುದಕ್ಕೆ ಅನುಕೂಲ. ಟ್ರಕ್ಕಿಂಗ್ ಬ್ಯಾಗ್, ಷೂ, ವಾಟರ್ ಬಾಟಲ್ ,ಟಾರ್ಚ್, ಟಿ ಷರ್ಟ್ ಬರ್ಮುಡ ಚಡ್ಡಿ , ಕ್ಯಾಪ್ ಬೇಕಾದ ಸಾಮಾಗ್ರಿಗಳು ರಾತ್ರಿ ಟೆಂಟ್ ವ್ಯವಸ್ಥೆ ಇದ್ದರೆ ಅದಕ್ಕೆ ಒಂದಷ್ಟು ವಸ್ತುಗಳು ಬೇಕು.ಟ್ರಕ್ಕಿಂಗ್ ಗೈಡ್ ಪೂರ್ವ ಸಿದ್ಧತೆ ಬಗ್ಗೆ ತಿಳಿಸುತ್ತಾರೆ. ಇದರ ಜೊತೆಗೆ ಅತೀ ಮುಖ್ಯವಾಗಿ ಟ್ರಕ್ಕಿಂಕ್ ವೇಳೆ ದಾರಿ ತಪ್ಪಿದರೆ ಹೇಗೆ ವಾಪಾಸ್ ನಗರಕ್ಕೆ ಬರಬೇಕು ಎಂಬುದೂ ಟ್ರಕ್ಕಿಂಗ್ ಮಾಡುವವರಿಗೆ ತಿಳಿದಿರಬೇಕಾದ್ದು ಅಗತ್ಯ.

( ಆನ್ ಲೈನ್ ಮಾಹಿತಿಗಳು )

ಕುಮಾರಪರ್ವತದ ಚಾರಣ ಮಾಡಿದ ಮಂದಿಗೂ ಆದದ್ದು ಇದೇ ಸಮಸ್ಯೆ. ಟ್ರಕ್ಕಿಂಗ್ ಮಾಡಿದ ಖುಷಿಗಿಂತಲೂ ಜೊತೆಗಾರ ನಾಪತ್ತೆಯಾದ್ದೇ ದೊಡ್ಡ ತಲೆನೋವಾಯಿತು. ಕೊನೆಗೆ ಸುರಕ್ಷಿತವಾಗಿ ನಾಡು ಸೇರಿದಾಗ ಖುಷಿಯೂ ಆಗಿತ್ತು. ಕುಮಾರಪರ್ವತ ಚಾರಣ ಈ ಸಮಯದಲ್ಲಿ  ಅಷ್ಟೊಂದು ಸೂಕ್ತವಲ್ಲ. ಮಳೆ ಜೋರಾದ ಸಂದರ್ಭ ಗಿರಿಗದ್ದೆ ನಂತರದ ಪ್ರದೇಶದಲ್ಲಿ ಸರಿಯಾದ ದಾರಿಗಳು ಸಿಗುವುದು ಕಷ್ಟ. ಕಾಡು ಬೆಳೆದಿರುತ್ತದೆ, ಹಾವುಗಳಿಂದ ತೊಡಗಿ ಕೀಟಗಳು ಹೆಚ್ಚಾಗಿ ಇರುತ್ತದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಈಗ ಭಾರೀ ಮಳೆಯ ಕಾರಣದಿಂದ ಗುಡ್ಡ ಕುಸಿತದಂತಹ ಘಟನೆಗಳು ನಡೆಯುತ್ತಿರುತ್ತದೆ. ಹೀಗಾಗಿ ಸುರಕ್ಷತೆಯ ಕಾರಣದಿಂದ ನವೆಂಬರ್ ನಂತರವೇ ಕುಮಾರಪರ್ವತ ಚಾರಣ ಸೂಕ್ತವಾಗಿದೆ. ಗಿರಿಗದ್ದೆಯವರೆಗೆ ಯಾವುದೇ ಸಮಸ್ಯೆ ಇಲ್ಲ. ಆ ನಂತರದ ದಾರಿ ಕ್ಲಿಷ್ಟವಾಗಿದೆ.

Advertisement

ಕೆಲವು ಸಂಸ್ಥೆಗಳೂ ಕುಮಾರಪರ್ವತ ಟ್ರಕ್ಕಿಂಗ್ ಆಯೋಜನೆ ಮಾಡುತ್ತವೆ. ಅವುಗಳು ಜೂನ್ ತಿಂಗಳಿನಿಂದ ಸೆಪ್ಟಂಬರ್ ವರೆಗೆ ಸೂಕ್ತ ಸಮಯ ಎಂದು ಹೇಳುತ್ತವೆ. ಹೀಗಾಗಿ ಇದನ್ನೇ ನಂಬಿ ಕೆಲವು ತಾವೇ ತಂಡ ಮಾಡಿಕೊಂಡು ಇದೇ ಸಮಯದಲ್ಲಿ ಬಂದು ಸಿಕ್ಕಿಹಾಕಿಕೊಳ್ಳುತ್ತಾರೆ. ಮೊನ್ನೆ ಕುಮಾರಪರ್ವತ ಚಾರಣ ಮಾಡಿರುವ ಮಂದಿ ಯಾವುದೇ ಅಡ್ಡಿ ಇಲ್ಲದೆ ಚಾರಣ ಮಾಡಿ ಬಂದಿದ್ದಾರೆ. ಆದರೆ ಗಿರಿಗದ್ದೆ ಬಳಿಕ ಬೆಟ್ಟ ಇಳಿಯುವ ಸಂದರ್ಭ ಭಾರೀ ಮಳೆ ಸುರಿಯಿತು. ಹೀಗಾಗಿ  ಜಾಕೆಟ್ ಬದಲಾವಣೆ ಮಾಡುವ ವೇಳೆ ಸ್ವಲ್ಪ ಹಿಂದೆಯಾದ ಯುವಕ ದಾರಿಯಲ್ಲಿ ಬರುವಾಗ ಎರಡು ದಾರಿ ಕಂಡಿತು. ಒಂದು ಚೆನ್ನಾದ ದಾರಿಯಾಗಿತ್ತು ಇನ್ನೊಂದು ಸವೆಯದ ದಾರಿ ಇತ್ತು. ಯುವಕ ಸವೆದ ದಾರಿಯಲ್ಲಿ ಬಂದಾಗ ಮರಬಿದ್ದಿತ್ತು ಎಂದು ಹಿಂದೆ ಹೋಗಿ ಮತ್ತೊಂದು ದಾರಿಯಲ್ಲಿ ಹೋದಾಗ ದಾರಿ ತಪ್ಪಿ ಬೇರೆ ಕಡೆಗೆ ಇಳಿಯಬೇಕಾಯಿತು. ಬಂಡೆಕಲ್ಲುಗಳ ಮೇಲೆ ರಾತ್ರಿ ಕಳೆದು ನೀರಿನ ಮೂಲ ಹಿಡಿದು ಅದೇ ದಾರಿಯಲ್ಲಿ ಬಂದು ಸುಬ್ರಹ್ಮಣ್ಯ ತಲಪಿದ. ಆಹಾರದ ಬದಲಿಗೆ ನೀರು ಕುಡಿಯಲು ಸಾಧ್ಯವಾಯಿತು. ಇಲ್ಲಿ ಮಳೆಯ ಕಾರಣದಿಂದ ದಾರಿ ತಪ್ಪಲು ಕಾರಣವಾಯಿತು. ಈ ಕಾರಣದಿಂದ ಮುಂದೆ ಚಾರಣಿಗರಿಗೆ ಕುಮಾರಪರ್ವತ ಏರಲು ಸೂಕ್ತ ಸಮಯ ಯಾವುದು ಎಂಬುದರ ಬಗ್ಗೆ ಮಾಹಿತಿ ನೀಡಿದರೆ ಉತ್ತಮವಾಗಿರುತ್ತದೆ. ಸಂಕಷ್ಟಗಳು, ಆತಂಕಗಗಳು ದೂರವಾಗುತ್ತವೆ.

Advertisement

 

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror