ಕೊನೆಗೂ ಮನಸ್ಸು ಸೋತಿತು….. ಬುದ್ಧಿ ಗೆದ್ದಿತು….! : ಇದು “ಬರ್ಬರೀಕ” ನಾಟಕ

August 24, 2019
9:38 AM

ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಕ್ಷೇತ್ರದ ಸಿಬ್ಬಂದಿಗಳು “ಬರ್ಬರೀಕ” ಎಂಬ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಎಲ್ಲಾ ಪಾತ್ರಧಾರಿಗಳ ಪ್ರೌಢ ಅಭಿನಯ, ಮಾತಿನ ಕೌಶಲ, ಪ್ರಸಾಧನದ ಸೊಗಡು ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಮೆರುಗನ್ನು ನೀಡಿತು.

ಧರ್ಮರಾಯನ ಪಾತ್ರದಲ್ಲಿ ಸುಬ್ರಹ್ಮಣ್ಯ ಪ್ರಸಾದ್, ಭೀಮನ ಪಾತ್ರದಲ್ಲಿ ರಾಜೇಂದ್ರ ದಾಸ್, ಶ್ರೀಕೃಷ್ಣನ ಪಾತ್ರದಲ್ಲಿ ಸಂದೇಶ್, ಬರ್ಬರೀಕನ ಪಾತ್ರದಲ್ಲಿ ರಾಜೇಶ್ ಮತ್ತು ಜಗದೀಶ್, ಹಿಡಿಂಬೆಯ ಪಾತ್ರದಲ್ಲಿ ಮಂಜುಳಾ, ಮೌರ್ವಿಯ ಪಾತ್ರದಲ್ಲಿ ಪದ್ಮರೇಖಾ, ಚೆನ್ನಿಯ ಪಾತ್ರದಲ್ಲಿ ಮಮತಾ ಹಾಗೂ ಹೂವಿಯ ಪಾತ್ರದಲ್ಲಿ ಕು. ಸಾಧನ ಸಮರ್ಪಕವಾಗಿ ಅಭಿನಯಿಸಿ ಪ್ರೇಕ್ಷಕರ ಮುಕ್ತ ಪ್ರಶಂಸೆಗೆ ಪಾತ್ರರಾದರು.ಮನಸ್ಸು ಪ್ರತಿನಿಧಿಸಿದ ಶ್ರೀಕೃಷ್ಣ ಮತ್ತು ಬುದ್ಧಿಯ ಪಾತ್ರದಲ್ಲಿ ಅಭಿಷೇಕ್ ತಮ್ಮ ವಾಕ್ ಚಾತುರ್ಯದೊಂದಿಗೆ ವಾದವನ್ನು ಮಂಡಿಸಿ ಪ್ರೇಕ್ಷಕರಲ್ಲಿ ಚಿಂತನ-ಮಂಥನಕ್ಕೆ ಗ್ರಾಸವಾದರು.

ಕಥಾ ಸಾರಾಂಶ : ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿರುವ ಬುದ್ಧಿ ಮತ್ತು ಮನಸ್ಸು ಎಂಬ ಎರಡು ಕಾಲ್ಪನಿಕ ಪಾತ್ರಗಳೊಂದಿಗೆ ಬುದ್ಧಿ ಮತ್ತು ಮನಸ್ಸಿನ ಮಾತುಕತೆಯ ಮೇಲು-ಕೀಳು, ತಪ್ಪು-ಒಪ್ಪು ಎಂಬ ತರ್ಕದೊಂದಿಗೆ ಪುರಾಣ ಒಂದರ ಕಥಾವಸ್ತು ಬರ್ಬರೀಕನ ಜೀವನದೆಡೆಗೆ ತಿರುಗುತ್ತದೆ.
ಭೀಮ ಮತ್ತು ಹಿಡಿಂಬೆಯ ಮೊಮ್ಮಗ ಹಾಗೂ ಘಟೋತ್ಕಚನ ಮಗ ಬರ್ಬರೀಕ. ರಾಕ್ಷಸ ಕುಲದಲ್ಲಿ ಹುಟ್ಟಿ ಸಮರಾಭ್ಯಾಸ ಮಾಡಿ, ಪರಶಿವನ ಅನುಗ್ರಹದಿಂದ ಮಹಾ ಬಲಶಾಲಿಯಾಗಿ ಬೆಳೆಯುತ್ತಾನೆ. ಈತನ ಸುಪರ್ದಿಯಲ್ಲಿರುವ ಕಾಡಿನ ಕೊಳದಲ್ಲಿ ಭೀಮಸೇನ ಸ್ನಾನ ಮಾಡುವ ಸಂದರ್ಭ ಆತ ಯಾರೆಂದು ತಿಳಿಯದೆ, ಕೆಣಕಿ ಮಲ್ಲಯುದ್ಧ ಮಾಡಿ ಭೀಮಸೇನನನ್ನು ಸೋಲಿಸುತ್ತಾನೆ. ಕೊನೆಗೆ ಆತ ತನ್ನ ಅಜ್ಜನೆಂಬ ಸತ್ಯ ತಿಳಿದಾಗ ಆತನ ಕಾಲಿಗೆರಗುತ್ತಾನೆ.
ಮುಂದೆ ಮುನಿ ಶ್ರೇಷ್ಠ ವಿಜಯ ಮುನಿಯ ಮಹಾ ಯಜ್ಞದಲ್ಲಿ ರಾಕ್ಷಸರ ಉಪಟಳವನ್ನು ನಿವಾರಿಸಿದ ಬರ್ಬರೀಕನಿಗೆ ಯಾಗದ ಭಸ್ಮವನ್ನು ವರದಾನವಾಗಿ ಕೊಡುತ್ತಾನೆ. ಇದರ ಪರಿಣಾಮವಾಗಿ ಬರ್ಬರೀಕನ ಬಾಣಕ್ಕೆ ಶತ್ರುಗಳ ಮರ್ಮಾಸ್ಥಾನವನ್ನು ಅರಿಯುವ ಶಕ್ತಿ ಬರುತ್ತದೆ.
ಹಸ್ತಿನಾವತಿಯಲ್ಲಿ ಪಾಂಡವರು ವನವಾಸ ಮುಗಿಸಿ ಯುದ್ಧದ ಪೂರ್ವ ತಯಾರಿ ನಡೆಸುವ ಸಂದರ್ಭ ಭೀಮನ ಮೂಲಕ ಬರ್ಬರೀಕನ ಸಾಹಸ ಪಾಂಡವ ಸಮೂಹವನ್ನು ತಲುಪುತ್ತದೆ.
ಕೃಷ್ಣನ ದೂರಾಲೋಚನೆಯಿಂದ ಮಹಾಭಾರತ ಯುದ್ಧದಲ್ಲಿ ಭಾಗವಹಿಸಲು ಬರ್ಬರೀಕನಿಗೆ ಕರೆ ಹೋಗುತ್ತದೆ. ಅಜ್ಜಿ ಹಾಗೂ ತಾಯಿಯ ವಿರೋಧವನ್ನು ಲೆಕ್ಕಿಸದೆ ಬರ್ಬರೀಕ ಪಾಂಡವರೊಂದಿಗೆ ಯುದ್ಧಕ್ಕೆ ಸೇರಿಕೊಳ್ಳಲು ಹೋಗುತ್ತಾನೆ. ಬರ್ಬರೀಕನ ಶೌರ್ಯ ಪ್ರದರ್ಶನ ಕಂಡು ಕೃಷ್ಣ ಬೆರಗಾಗುತ್ತಾನೆ. ಬರ್ಬರೀಕನ ತಾಯಿಯ ಮೇಲಿನ ಪೂರ್ವದ್ವೇಶ ಮತ್ತು ಆತನಿಗಿರುವ ಮರ್ಮಸ್ಥಾನವನ್ನು ತಿಳಿಯುವ ಶಕ್ತಿ ಇದ್ದು ಪಾಂಡವರ ಸೋಲಿಗೆ ಕಾರಣವಾಗಬಹುದೆಂದು ತಿಳಿದು ಕೃಷ್ಣ ತನ್ನ ಚಕ್ರವನ್ನು ಬರ್ಬರೀಕನ ಮೇಲೆ ಪ್ರಯೋಗಿಸುತ್ತಾನೆ. ಆದರೆ ಬರ್ಬರೀಕನ ಕೊನೆಯ ಆಸೆಯಂತೆ ಇಡೀ ಕುರುಕ್ಷೇತ್ರ ಯುದ್ಧವನ್ನು ರಣಕಂಬದ ಮೇಲೆ ಬರೀ ರುಂಡ ಮಾತ್ರವಾಗಿ ನೋಡಲು ಅನುವು ಮಾಡಿಕೊಡುತ್ತಾನೆ. ಅಲ್ಲಿಗೆ ಬಂದ ಹಿಡಿಂಬೆ ಮತ್ತು ಮೌರ್ವಿಯ ರೋಧನ ಹಾಗೂ ಶಾಪದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಮನಸ್ಸೆಂಬ ಕುದುರೆಯ ಬೆನ್ನು ಹತ್ತಿದ ಬರ್ಬರೀಕನಿಗೆ ಶ್ರೀ ಕೃಷ್ಣನ ತಂತ್ರಗಾರಿಕೆಯ (ಬುದ್ಧಿಯ) ಅರಿವು ಇಲ್ಲದಾಯಿತು. ನಾಟಕ ಆರಂಭವಾಗುವುದೇ ಮನಸ್ಸು ಮತ್ತು ಬುದ್ಧಿಯ ತಾಕಲಾಟದೊಂದಿಗೆ. ಮನದ ಭಾವನೆಗಳನ್ನು ಗಾಳಿಗೆ ತೂರಿದ ಬುದ್ಧಿಯ ಸ್ವೇಚ್ಛಾಚಾರದಿಂದ ಉಂಟಾಗುವ ಅನಾಹುತವೇ ನಾಟಕದ ಕಥಾವಸ್ತು. ಅಂತೂ ಕೊನೆಗೂ ಮನಸ್ಸು ಸೋತಿತು, ಬುದ್ಧಿ ಗೆದ್ದಿತು.

Advertisement

ಮಾರ್ಗದರ್ಶನ : ಹೇಮಾವತಿ ವಿ. ಹೆಗ್ಗಡೆಯವರು. ನಾಟಕದ ಪರಿಕಲ್ಪನೆ ಮತ್ತು ನಾಟಕ ರಚನೆ : ಶಶಿರಾಜ್ ರಾವ್, ಕಾವೂರು, ವಿನ್ಯಾಸ ಮತ್ತು ಪರಿಕಲ್ಪನೆ : ಸುನಿಲ್ ಶೆಟ್ಟಿ, ಕಲ್ಕೊಪ್ಪ, ಬಿ. ಭುಜಬಲಿ ಮತ್ತು ರತ್ನವರ್ಮ ಜೈನ್ ಸಂಯೋಜಕರಾಗಿ ಸಹಕರಿಸಿದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಹಾಲಯ ಅಮಾವಾಸ್ಯೆ | ಪರಂಪರೆ, ತತ್ತ್ವ ಮತ್ತು ಆಧುನಿಕ ಜೀವನದ ಸೇತುವೆ
September 21, 2025
8:12 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮುಂಗಾರು ಪರಿಣಾಮದಿಂದ ಹಿಮಾಚಲ ಪ್ರದೇಶದಲ್ಲಿ 424 ಮಂದಿಯ ಪ್ರಾಣ ಬಲಿ – 146 ಭೂಕುಸಿತ, 46 ಮೇಘಸ್ಫೋಟ
September 21, 2025
7:47 AM
by: The Rural Mirror ಸುದ್ದಿಜಾಲ
ಸುಳ್ಯದ ಕೃಷಿ ಸಖಿಯರಿಗೆ ಬೆಂಗಳೂರಿನಲ್ಲಿ ICAR-IIHR ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ | ಮೊದಲ ಬಾರಿಗೆ ಕೃಷಿಯಲ್ಲಿ ಹೊಸ ಹೆಜ್ಜೆ |
September 19, 2025
9:41 PM
by: The Rural Mirror ಸುದ್ದಿಜಾಲ
ಕೃಷಿ ಯಂತ್ರೋಪಕರಣಗಳ ಮೇಲೆ ಜಿಎಸ್‌ಟಿ ದರ ಕಡಿತ ಹಿನ್ನೆಲೆ | ಕೇಂದ್ರ ಸಚಿವ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಭೆ
September 19, 2025
9:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group