ಜನವರಿ 4 ಮತ್ತು 5 : ಪುತ್ತೂರಿನಲ್ಲಿ ನಡೆಯಲಿರುವ ಸಾವಯವ ಹಬ್ಬದ ಆಮಂತ್ರಣ ಬಿಡುಗಡೆ

December 25, 2019
9:38 AM

ಪುತ್ತೂರು: “ಉಣ್ಣುವ ಆಹಾರಗಳು ಅನ್ಯಾನ್ಯ ಕಾರಣಗಳಿಂದಾಗಿ ವಿಷಮಯವಾಗುತ್ತಿದ್ದು ಅದರಿಂದ ಹೊರಗೆ ಬರಲು ಸಾವಯವ ಆಹಾರದ ಸೇವನೆ ಒಂದೇ ಹಾದಿ. ಈ ಹಿನ್ನೆಲೆಯಲ್ಲಿ ಸಾವಯವ ಹಬ್ಬವು ಜನರಲ್ಲಿ ಅರಿವನ್ನು ಮೂಡಿಸಲು ನೆರವಾಗಬೇಕು.” ಎಂದು ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಅಭಿಪ್ರಾಯಪಟ್ಟರು.

Advertisement
Advertisement
Advertisement

ಅವರು ಸುದಾನ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ 2020ರ ಜನವರಿ 4 ಮತ್ತು 5ರಂದು ಪುತ್ತೂರಿನ ‘ಶ್ರೀ ಮಹಾಲಿಂಗೇಶ್ವರ ಸಭಾಭವನ’ದಲ್ಲಿ ನಡೆಯಲಿರುವ ಸಾವಯವ ಹಬ್ಬದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಜಯ ಹಾರ್ವಿನ್ ಅವರು ಹಬ್ಬದ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಈ ವರೆಗೆ ಆದಂತಹ ಹಬ್ಬದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

Advertisement

ನವಚೇತನ ಸ್ನೇಹ ಸಂಗಮ ಮತ್ತು ಜೆ.ಸಿ.ಐ.ಪುತ್ತೂರು ಇವರು ಆಯೋಜಿಸುವ ಸಾವಯವ ಹಬ್ಬದ ಕುರಿತು ಮತ್ತು ಅಂದು ನಡೆಯುವ ಕಲಾಪಗಳ ಕುರಿತು ಸಂಗಮದ ಕಾರ್ಯದರ್ಶಿ ಸುಹಾಸ್ ಮರಿಕೆ ವಿವರ ನೀಡಿದರು. ಅಧ್ಯಕ್ಷ ಅನಂತಕೃಷ್ಣ ನೈತ್ತಡ್ಕ ಅಂದು ಪ್ರದರ್ಶಿತವಾಗಲಿರುವ ಉದ್ದೇಶಿತ ಮೌಲ್ಯವರ್ಧಿತ ಉತ್ಪನ್ನಗಳ ವಿವರಗಳನ್ನು ನೀಡಿದರು.
ಸಭೆಯಲ್ಲಿ ಜೆಸಿಐ ಅಧ್ಯಕ್ಷ ಜೇಸಿ ಎಸ್.ಜೆ.ವೇಣುಗೋಪಾಲ್, ಕಾರ್ಯದರ್ಶಿ ಜೇಸಿ ಪ್ರಮಿತ ಸಿ.ಹಾಸ್, ಜೇಸಿ ರಘು ಶೆಟ್ಟಿ, ಜೇಸಿ ಶಶಿರಾಜ್, ಜೇಸಿ ಗೌತಮ್ ರೈ, ಪಾಂಡುರಂಗ ಭಟ್, ಪ್ರಕಾಶ್ ಕುಮಾರ್ ಕೊಡೆಂಕಿರಿ, ಆದಿತ್ಯ ಕೊಡೆಂಕಿರಿ, ಗಣರಾಜ್ ಭಟ್, ಶಂಕರಿ ಶರ್ಮ ಮೊದಲಾದವರು ಭಾಗವಹಿಸಿದರು.

ಸುಹಾಸ್ ಸ್ವಾಗತಿಸಿದರು. ಪ್ರಮಿತ ಸಿ. ಹಾಸ್ ವಂದಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೊಟ್ಟಿಗೆಯಲಿ ತುಂಬಿ ತುಳುಕುವ ಹಸು ಕರುಗಳು : ವೃದ್ಧಾಪ್ಯದಲ್ಲೂ ಮಲೆನಾಡು ಗಿಡ್ಡ ತಳಿ ಹಸು ಸಾಕುತ್ತಿರುವ ಅಜ್ಜಿ : ಬತ್ತದ ಜೀವನ ಉತ್ಸಾಹ
May 5, 2024
8:45 PM
by: The Rural Mirror ಸುದ್ದಿಜಾಲ
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳಗೊಂಡ ರಬ್ಬರ್‌ ಬಳಕೆ | ಬೆಳೆಗಾರರಿಗೆ ಧಾರಣೆ ಏರಿಕೆಯ ನಿರೀಕ್ಷೆ |
March 25, 2024
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror