ಡಿ.21 ರಿಂದ ಜ.1 : ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ

November 21, 2019
9:16 AM

ಬಂಟ್ವಾಳ: ಡಿಸೆಂಬರ್ 21 ರಿಂದ ಜನವರಿ 1 ತನಕ  ಬಂಟ್ವಾಳದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಕರಾವಳಿ ಕಲೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಬಂಟ್ವಾಳದ ಗಾಣದಪಡ್ಪು ಮೈದಾನದಲ್ಲಿ ಕದ್ರಿ ಗೋಪಲನಾಥ ಕಲಾ ವೇದಿಕೆಯಲ್ಲಿ ಕರ್ನಾಟಕ ಸರಕಾರ ಕನ್ನಡ ಹಾಗೂ ಸಂಸೃತಿ ಇಲಾಖೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಜೋಡು ಮಾರ್ಗ ಉದ್ಯಾನವನದ ಬಳಿ ಕರಾವಳಿ ಕಲೋತ್ಸವ 2019-20 ಕಾರ್ಯಕ್ರಮ ನಡೆಯಲಿದೆ. ಮಕ್ಕಳ ಚಿಣ್ಣರೋತ್ಸವ ,ನಾಟಕೊತ್ಸವ,ಜಿಲ್ಲಾ ಮಟ್ಟದ ಸಿಂಗಾರಿ ಮೇಳ( ಚೆಂಡೆ ಸ್ಪರ್ಧೆ)ಜಾನಪದ ನೃತ್ಯ, ಭರತನಾಟ್ಯ,ಯಕ್ಷಗಾನ ಮೊದಲಾದ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ‌.

ಡಿಸೆಂಬರ್ 21 ರಂದು ಕರಾವಳಿ ಕಲೋತ್ಸವ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ವಿವಿಧ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ಪ್ರಮುಖ ಗಣ್ಯರು ನೇರೆವೆರಿಸಲಿದ್ದಾರೆ. ಬಳಿಕ ನಡೆಯುವ ಪ್ರಮುಖ ಸಮಾರಂಭದಲ್ಲಿ ಕರಾವಳಿ ಸೌರಭ ಪ್ರಶಸ್ತಿ ಹಾಗೂ ಚಿಣ್ಣರ ಪ್ರಶಸ್ತಿಯನ್ನು ನೀಡಿ ಅರ್ಹ ವ್ಯಕ್ತಿಗಳನ್ನು ಗೌರವಿಸಲಿದ್ದಾರೆ‌‌
ಅಲ್ಲದೆ ವಿವಿಧ ವಿಭಾಗದಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಮನರಂಜನೆಗಾಗಿ ಅಟೋಪಕರಣಗಳ ವಿಸ್ಮಯ ಲೋಕ, ಬೃಹತ್ ಅಮ್ಯೂಸ್ ಮೆಂಟ್ ಪಾರ್ಕ್ ,ಕರಾವಳಿ ಸಾರಥಿ ಎಕ್ಸ್ ಪೋ 2019ಯಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಗೃಹೋಪಯೋಗಿ ವಸ್ತುಗಳು ,ಮಹಿಳೆಯರ ಅಭರಣ ವಸ್ತುಗಳು ,ಮಕ್ಕಳ ಅಟಿಕೆ ಸಾಮಾನುಗಳು ಮಾರಾಟಕ್ಕಿವೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆಯಲು ಒಂದು ಉತ್ತಮ ವೇದಿಕೆಯಾಗಲಿದೆ. ಚಿಣ್ಣರಲೋಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಮೋಹನ್ ದಾಸ ಕೊಟ್ಟಾರಿ ಮೂನ್ನೂರು ನೇತೃತ್ವದ ತಂಡ ಈಗಾಗಲೇ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗಿದೆ.

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿನಲ್ಲಿ 2006 ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಮಾತ್ರವಲ್ಲದೆ ರಾಜ್ಯಾದ್ಯಂತ ಹೆಸರುಗಳಿಸಿದ ಈ ಸಂಸ್ಥೆಯು ಜಿಲ್ಲಾದ್ಯಾಂತ ಸುಮಾರು 43 ಶಾಖೆಯನ್ನು ಅರಂಭಿಸಿದೆ. ಇನ್ನೂ ಈ ಸಂಸ್ಥೆಯಲ್ಲಿ ಸರಿ ಸುಮಾರು 5300ಕ್ಕಿಂತ ಅಧಿಕ ಮಕ್ಕಳು
ಯಕ್ಷಗಾನ, ಸಂಗೀತ, ಜಾನಪದ ನೃತ್ಯ,ಚೆಂಡೆ,ನಾಟಕ ಕಲೆ ಇದೇ ತರಹ ಹಲವು ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ಪಡೆಯುತ್ತಿದ್ದಾರೆ.ಹಾಗೂ ಪ್ರದರ್ಶನ ನಡೆಸುತ್ತಿದ್ದಾರೆ ಹಲವಾರು ಯುವ ಪ್ರತಿಭೆಗಳನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿದ ಹೆಮ್ಮೆ ಈ ಸಂಸ್ಥೆಗಿದೆ.

ಬಂಟ್ವಾಳ ತಾಲ್ಲೂಕಿನಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತ, ಜಾನಪದ ಕಲೆ, ನೃತ್ಯ ಚಿತ್ರಕಲೆ ಹಾಗೂ ನಾಟಕ ತರಬೇತಿಯನ್ನು ಎಳೆಯರಿಗೆ ನೀಡಬೇಕು ಈ ಮೂಲಕ ಎಳೆಯ ಪ್ರತಿಭೆಗಳ ಸಾಮರ್ಥ್ಯ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ  ಸಮಾನ ಮನಸ್ಕ ಮಿತ್ರರೊಂದಿಗೆ ರೂಪುಗೊಂಡ ಸಂಸ್ಥೆ ಚಿಣ್ಣರಲೋಕ ಮೊಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ ಬಂಟ್ವಾಳ ಈ ಸಂಸ್ಥೆ ಈಗಾಗಲೇ ಹಲವು‌ಕಡೆ ಶಾಖೆಯನ್ನು ಹೊಂದಿದ್ದು ಕಲೆಯ ಅನುಸಾರವಾಗಿ ವಿವಿಧ ತಜ್ಞರಿಂದ ಎಳೆಯ ಮಕ್ಕಳಿಗೆ ತರಬೇತಿಯನ್ನು ನಡೆಸುತ್ತಾ ಬರುತ್ತಿದೆ.

Advertisement

 

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06.07.2025 | ಮುಂದಿನ 10 ದಿನಗಳ ಕಾಲ ಹೇಗಿರಬಹುದು ಹವಾಮಾನ?
July 6, 2025
5:10 PM
by: ಸಾಯಿಶೇಖರ್ ಕರಿಕಳ
2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group