ಅರಂತೋಡು: ತೊಡಿಕಾನ ಬಿ.ಎಸ್.ಎನ್.ಎಲ್ ಟವರ್ ಆಗಾಗ ಸ್ತಬ್ದವಾಗುತ್ತಿದೆ. ಹೀಗಾಗಿ ಗ್ರಾಹಕರು ಬದಲಿ ವ್ಯವಸ್ಥೆಗಳಿಲ್ಲದೆ ಸಮಸ್ಯೆಗೊಳಗಾಗಿದ್ದಾರೆ.
ಈಚೆಗೆ ನಿರಂತರವಾಗಿ ನಾಲ್ಕು ದಿವಸಗಳಿಂದ ತೊಡಿಕಾನ ಬಿ.ಎಸ್.ಎನ್.ಎಲ್ ನಿಷ್ಕ್ರಿಯಗೊಂಡಿತ್ತು.ಇದರಿಂದ ಬಿ.ಎಸ್.ಎನ್‍ಎಲ್‍ಗೆ ಗ್ರಾಹಕರು ಹಿಡಿಶಾಪ ಹಾಕುವಂತಾಗಿದೆ.ಈ ಟವರ್ ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಟವರ್ ಅನೇಕ ವರ್ಷಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.ಮೊದಲು ವಿದ್ಯುತ್ ಇರುವ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿತ್ತು.ವಿದ್ಯುತ್ ಇಲ್ಲದ ಸಂದರ್ಭ ಟವರ್ ಕೈ ಕೊಡುತ್ತಿತ್ತು.ಈಚೆಗೆ ನಾಲ್ಕು ದಿವಸಗಳ ಕಾಲ ಟವರ್ ಸ್ತಬ್ದಗೊಂಡಿರುವುದರಿಂದ ಜನರು ಇನ್ನಷ್ಟು ಸಮಸ್ಯೆಗೆ ಒಳಗಾಗಿದ್ದಾರೆ.
ಬದಲಿ ವ್ಯವಸ್ಥೆ ಇಲ್ಲ: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ವ್ಯಾಪ್ತಿಯಲ್ಲಿ ಬಿ.ಎಸ್.ಎನ್ ಎಲ್ ಟವರ್ ಹೊರತು ಪಡಿಸಿ ಯಾವುದೇ ಖಾಸಗಿ ಪೋನ್ ಟವರ್ ಗಳಿಲ್ಲ.ಅಲ್ಲದೆ ಈ ಟವರ್ ಇತರ ಖಾಸಗಿ ಪೋನ್ ಸಂಪರ್ಕವಾಗಿಲ್ಲ. ತೊಡಿಕಾನದಲ್ಲಿ ಅತೀ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಯವಿದ್ದು ಇಲ್ಲಿಗೆ ಅನೇಕ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ದೇವಾಲಯಗಳಿಗೆ ಬರುವ ಭಕ್ತಾಧಿಗಳಿಗೆ ಮೊಬೈಲ್ ಸಂಪರ್ಕ ಸಾಧ್ಯವಾಗದ ಹಿನ್ನಲೆಯಲ್ಲಿ ಭಕ್ತಾಧಿಗಳಿಗೂ ಸಮಸ್ಯೆಯಾಗಿ ಪರಿಣಮಿಸಿದೆ.