ದೆಹಲಿ ಪೊಲೀಸ್ ಕಮಿಷನರ್ ಆಗಿ ಶ್ರೀವಾತ್ಸವ್ ನೇಮಕ

February 28, 2020
12:31 PM

ನವದೆಹಲಿ: ಸಿಎಎ ದಂಗೆಯಿಂದಾಗಿ ರಾಜಧಾನಿ ನವದೆಹಲಿ ಅಕ್ಷರಶ: ಹೊತ್ತಿ ಉರಿಯುತ್ತಿದೆ. ಸಿಎಎ ಪರ ಹಾಗೂ ವಿರೋಧಿ ಗುಂಪುಗಳು ನಡೆಸಿರುವ ಗಲಭೆಯಿಂದ ದೆಹಲಿ ಜನತೆ ತತ್ತರಿಸಿ ಹೋಗಿದ್ದಾರೆ. ದಂಗೆಕೋರರ ದಾಳಿಗೆ ಇದುವರೆಗೂ 38 ಜೀವಗಳು ಬಲಿಯಾಗಿವೆ.

ಹಗಲಿರುಳು ಶ್ರಮಿಸುತ್ತಿರುವ  ದೆಹಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ದೆಹಲಿ ಪೊಲೀಸ್ ಕಮಿಷನರ್ ಅಮುಲ್ಯಾ ಪಟ್ನಾಯಕ್ ಫೆ.29ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಅವರ ಜಾಗಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಮಿಷನರ್ ಎಸ್. ಎನ್. ಶ್ರೀವಾತ್ಸವ್ ಅವರನ್ನು ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ.

ಕೇಂದ್ರ ಗೃಹ ಇಲಾಖೆ, ಎಸ್.ಎನ್. ಶ್ರೀವಾತ್ಸವ್ ನಾಳೆಯಿಂದಲೇ ದೆಹಲಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಎಸ್​ಎನ್​ ಶ್ರೀವಾಸ್ತವ್​ ಅವರು 1985ರ ಅರುಣಾಚಲ್​ ಪ್ರದೇಶ-ಗೋವಾ-ಮಿಜೋರಾಂನ ಬ್ಯಾಚ್​ಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರಾಡಳಿತ ಪ್ರದೇಶದ ಕೇಡರ್​ ಅಧಿಕಾರಿಯಾಗಿಯೂ ಸೇವ ಸಲ್ಲಿಸಿದ್ದಾರೆ. ಸಿಪಿಆರ್​ಎಫ್​ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ಇವರು ದೆಹಲಿಯಲ್ಲಿ ಅನೇಕ ಪೊಲೀಸ್​ ಯುನಿಟ್​ಗಳ ಜತೆ ಕಾರ್ಯಾಚರಣೆ ಮಾಡಿದ್ದಾರೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು
August 2, 2026
8:39 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟಕ್ಕೆ ಮತ್ತೆ ಕೇಂದ್ರದ ಹೊಸ ನೋಟಿಫಿಕೇಶನ್ – ಕರ್ನಾಟಕದ ಸಾವಿರಾರು ಗ್ರಾಮಗಳ ಮೇಲೆ ಪರಿಣಾಮವೇ?
August 1, 2026
8:00 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್
July 31, 2026
10:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror