ಧರ್ಮಸ್ಥಳದಲ್ಲಿ ಸಮವಸರಣ ಪೂಜೆ

November 28, 2019
6:50 PM

ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.

Advertisement
Advertisement

Advertisement

ಹೆಗ್ಗಡೆಯವರ ನಿವಾಸದಿಂದ (ಬೀಡಿನಿಂದ) ಸಂಜೆ ಏಳು ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚ ನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣ ಆದ ಮೇಲೆ ಶ್ರಾವಕ-ಶ್ರಾವಿಕೆಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು.

Advertisement

ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತು ಅಭಿಜ್ಞಾ ಹಾಗೂ ಬಳಗದವರು ಪೂಜಾ ಮಂತ್ರ ಪಠಣ ಮಾಡಿದರು. ಕ್ಷುಲ್ಲಕ 105 ಶ್ರೀ ನಿರ್ಮಲ ಸಾಗರ್ಜಿ ಉಪಸ್ಥಿತರಿದ್ದರು.
ಶಿಶಿರ್ ಇಂದ್ರರ ನೇತೃತ್ವದಲ್ಲಿ ನಡೆದ ಅಷ್ಟವಿಧಾರ್ಚನೆ ಸಂಗೀತ ಪೂಜಾ ಮಂತ್ರ ಪಠಣದಲ್ಲಿ ಮಲ್ಲಿನಾಥ್‍ಜೈನ್, ಸೌಮ್ಯಎಸ್. ರಾಜ್, ಅಭಿಜ್ಞಾ ಬಳ್ಳಾಲ್, ಮಂಜುಳಾ, ಎಂ.ಸಾವಿತ್ರಿ ಪುಷ್ಪದಂತ ಹಾಗೂ ಹಿಮ್ಮೇಳದಲ್ಲಿ ಭಗೀರಥ ಮತ್ತು ಶೋಧನ್ ಸಹಕರಿಸಿದರು.

Advertisement

 

 

Advertisement

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು. ಪಾಕ ಪರಿಣತರಾದ ಕನ್ನಡಿಕಟ್ಟೆಯ ರತ್ನರಾಜ ಮತ್ತು ಇರ್ವತ್ತೂರು ಜಯಕೀರ್ತಿ ಜೈನ್‍ ಅವರನ್ನು ಸನ್ಮಾನಿಸಲಾಯಿತು.

Advertisement

ಮಹಾ ಮಂಗಳಾರತಿ ನಂತರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ತರಲಾಯಿತು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!
April 30, 2024
9:03 PM
by: ಕುಮಾರ್ ಪೆರ್ನಾಜೆ
ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!
April 30, 2024
7:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಳಿಕೃಷ್ಣ ಕೆ ಜಿ
Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror