ನ.ಪಂ‌.ಚುನಾವಣೆ: ಮೇ.12 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

May 9, 2019
10:38 PM

ಸುಳ್: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮೆ.12ಕ್ಕೆ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿದೆ.

20 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇವರಲ್ಲಿ ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ದಾಖಲೆಯನ್ನು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಉಳಿದ ವಾರ್ಡ್ ಗಳಲ್ಲಿ 12ರಂದು ಜಿಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

5 ವಾರ್ಡ್ ಗಳಲ್ಲಿ ಆಯ್ಕೆ ಬಿಕ್ಕಟ್ಟು:

ಬಹುತೇಕ ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸುಲಲಿತವಾಗಿ ನಡೆದಿದ್ದರೂ ನಗರದ ಐದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಕೆರೆಮೂಲೆ, ಬೂಡು, ನಾವೂರು, ಬೋರುಗುಡ್ಡೆ ಮತ್ತು ಬೀರಮಂಗಲ ವಾರ್ಡ್ ಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ಉದ್ದ ಇರುವ ಕಾರಣ ಆಯ್ಕೆ ಅಂತಿಮಗೊಳಿಸಿಲ್ಲ.

ಕೆರೆಮೂಲೆ ವಾರ್ಡ್ ನಲ್ಲಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು, ಬೂಡು ವಾರ್ಡ್ ನಲ್ಲಿ ಕೆ.ಗೋಕುಲ್ ದಾಸ್. ರಿಯಾಝ್ ಕಟ್ಟೆಕ್ಕಾರ್, ಲಕ್ಷ್ಮಣ ಶೆಣೈ, ಬೀರಮಂಗಲ ವಾರ್ಡ್ ನಲ್ಲಿ ಎಂ.ವೆಂಕಪ್ಪ ಗೌಡ, ಧೀರಾ ಕ್ರಾಸ್ತಾ, ನಾವೂರು ವಾರ್ಡ್ ನಲ್ಲಿ ಕೆ.ಎಂ.ಮುಸ್ತಫಾ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಆರ್.ಕೆ.ಮಹಮ್ಮದ್,
ಬೋರುಗುಡ್ಡೆ ವಾರ್ಡ್‌ ನಲ್ಲಿ ಕೆ.ಎಂ.ಮುಸ್ತಫಾ, ಆರ್.ಕೆ.ಮಹಮ್ಮದ್, ಸಿದ್ದಿಕ್, ರಫೀಕ್ ಪಡು ಮತ್ತಿತರ ಹೆಸರುಗಳು ಕೇಳಿ ಬರುತಿವೆ. ಐದು ವಾರ್ಡ್‌ ಗಳ ಪೈಕಿ ನಾವೂರು, ಬೋರುಗುಡ್ಡೆ, ಬೂಡು ವಾರ್ಡ್ ಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಆಯ್ಕೆ ಕ್ಲಿಷ್ಟಕರವಾಗಿದೆ. ಪಕ್ಷದಿಂದ ಸೀಟ್ ಸಿಗದಿದ್ದರೆ ಪಕ್ಷೇತರನಾಗಿ ನಾಮ ಪತ್ರ ಸಲ್ಲಿಸುವುದು ಖಚಿತ ಎಂದು ಕೆಲವು ಯುವ ಕಾಂಗ್ರೆಸ್ ಮುಖಂಡರು ಈಗಾಗಲೇ ಹೇಳಿಕೊಂಡಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ
May 28, 2026
7:20 AM
by: ದ ರೂರಲ್ ಮಿರರ್.ಕಾಂ
ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!
May 27, 2026
8:51 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ
May 27, 2026
8:15 PM
by: ಮಿರರ್‌ ಡೆಸ್ಕ್
ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
May 27, 2026
8:07 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror