ದೇಶದಲ್ಲಿ ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ…….
ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು,
ಗೆಲುವೆಂದರೆ ಪರಿಶ್ರಮ, ಗೆಲುವೆಂದರೆ ಕೆಲಸ,
ಗೆಲುವೆಂದರೆ ಜಾಣ್ಮೆ, ಗೆಲುವೆಂದರೆ ಅದೃಷ್ಟ.
ಗೆದ್ದರೆ ಹೀಗೆ ಗೆಲ್ಲಬೇಕು,
ಮತ್ತೆ ಮತ್ತೆ ಬೆನ್ನು ತಟ್ಟುವಂತಿರಬೇಕು,
ಕೊಟ್ಟ ಏಟುಗಳು ಒಂದೇ ಎರಡೇ ,ಯಾವುದಕ್ಕೂ ಲೆಕ್ಕವಿಲ್ಲ
ಕೆಲಸವೊಂದೇ ತನ್ನ ಗುರಿ, ಭಾರತಾದಂಬೆಯ
ಸೇವೆಗೇ ತನ್ನ ಬಾಳು ಸಮರ್ಪಿತ ಎಂದ ನಾಯಕನಿಗೇ ಒಮ್ಮತದ ಗೆಲುವು
ಈ ಗೆಲುವು ಮೋದಿಯ ಗೆಲುವು,
ಈ ಗೆಲುವು ದೇಶ ಪ್ರೇಮದ ಗೆಲುವು
ಈ ಗೆಲುವು ಬದ್ಧತೆಗೆ ಸಿಕ್ಕ ಗೆಲುವು
ಜಗದಗಲಕೆ ಹರಡಲಿ ಭಾರತದ ಕೀರ್ತಿ
ಇರಲಿ ಮೋದಿಗೆ ಪೂರ್ಣ ಸಹಕಾರ
ಭಾರತದ ಹೆಮ್ಮೆಯ ಪುತ್ರನಿಗೊಂದು ಅಭಿನಂದನೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel