ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯ ಆರೋಗ್ಯ ವಿಚಾರಣೆ | ಆರೋಗ್ಯ ವಿಚಾರಣೆಗೆ ಹೋದ ಕುಟುಂಬ ಕ್ವಾರಂಟೇನ್ ಗೆ | ರಜೆ ಮುಗಿಸಿ ಬಂದ ಮೆಸ್ಕಾಂ ಸಿಬಂದಿ 14 ದಿನ ಮನೆಯಲ್ಲೇ |

April 25, 2020
1:24 PM

ಗುತ್ತಿಗಾರು: ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ  ಚಿಕಿತ್ಸೆ ಪಡೆದ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕುಟುಂಬದ ಸದಸ್ಯನ ಆರೋಗ್ಯ ವಿಚಾರಿಸಲು ಹೋದ ಗುತ್ತಿಗಾರು ಗ್ರಾಮದ ಕಮಿಲ ಕುಟುಂಬವೊಂದರ ಸದಸ್ಯರನ್ನು  ಹೋಂ ಕ್ವಾರಂಟೇನ್ ಗೆ ಗುತ್ತಿಗಾರು ಗ್ರಾ ಪಂ ಪಿಡಿಒ ಹಾಗೂ ಆಡಳಿತವು ತಿಳಿಸಿದೆ.

ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅದೇ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ವ್ಯಕ್ತಿಯೋರ್ವರು ಚಿಕಿತ್ಸೆ ಪಡೆದು ಬಂದಿದ್ದರು. ಇವರನ್ನು ಗುತ್ತಿಗಾರು ಗ್ರಾಮದ ಕಮಿಲದ ಸಂಬಂಧಿ ಕುಟುಂಬ ಮಾತನಾಡಿಸಲು ಹೋಗಿತ್ತು. ಈ ಸಂಗತಿ ಆರೋಗ್ಯ ಇಲಾಖೆ ಗಮನಕ್ಕೆ ಬಂದ ತಕ್ಷಣವೇ ಕ್ವಾರಂಟೇನ್ ನಲ್ಲಿರಲು ಸೂಚಿಸಲಾಗಿದೆ. ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ. ಗ್ರಾಪಂ ಆಡಳಿತವು ಮನೆಗೆ ಭೇಟಿ ನೀಡಿದೆ.

ಇದೇ ಸಂದರ್ಭ ಗುತ್ತಿಗಾರು ಮೆಸ್ಕಾಂ ವಿಭಾಗದಲ್ಲಿ ಲೈನ್ ಮೇನ್ ಆಗಿದ್ದ ವ್ಯಕ್ತಿ ಬೆಳಗಾಂನಿಂದ ವಾಪಾಸು ಬಂದಿದ್ದರು. ಅವರನ್ನು ಕೂಡಾ 14 ದಿನಗಳ ಕ್ವಾರಂಟೇನ್ ಗೆ ಸೂಚಿಸಲಾಗಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ
August 19, 2026
8:05 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಉದ್ಯೋಗಾವಕಾಶ : ಆ.20 ಮತ್ತು 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
August 19, 2026
7:49 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ
August 18, 2026
4:16 PM
by: ಸಾಯಿಶೇಖರ್ ಕರಿಕಳ
ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು
August 18, 2026
7:33 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror