ಬೆಳ್ಳಾರೆ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ

September 1, 2019
2:00 PM

ಬೆಳ್ಳಾರೆ: ಹಾಲಿ ಆರೋಗ್ಯ ಸಚಿವ ಶ್ರೀರಾಮುಲು ಕಳೆದ ಬಿಜೆಪಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿಯೇ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಅನುಷ್ಠಾನಗೊಂಡಿತ್ತು. ಆದರೆ ಇಂದಿಗೂ ಅದು ಜಾರಿಗೊಂಡಿಲ್ಲ. ಶುಕ್ರವಾರ ಸನ್ಮಾನ ಸ್ವೀಕರಿಸಲು ಹುಟ್ಟೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಬೆಳ್ಳಾರೆ ಮುಖಂಡರಿಂದ ಅನುಷ್ಠಾನಗೊಳಿಸಲು ಮತ್ತೊಮ್ಮೆ ಮನವಿಯನ್ನು ನೀಡಲಾಯಿತು.

ಬೆಳ್ಳಾರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಗಂಗಾಧರ್ ರೈ ಪುಡ್ಕಜೆ, ಜಿಲ್ಲಾ ಪಂಚಾಯತ್ ಸದಸ್ಯ ಎಸ್‍ಎನ್ ಮನ್ಮಥ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ನೆಟ್ಟಾರು ಹಾಲು ಉತ್ಪಾಕರ ಸಂಘದ ಅಧ್ಯಕ್ಷ ವೈಪಳ ರಾಮಣ್ಣ ರೈ, ಮುಕ್ಕೂರು ಹಾಲು ಉತ್ಪಾಕರ ಸಂಘದ ಅಧ್ಯಕ್ಷ ದಯಾಕರ ಆಳ್ವ, ಬಿಜೆಪಿ ಮುಖಂಡ ಪ್ರೇಮಚಂದ್ರ ಬೆಳ್ಳಾರೆ, ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀನಾಥ್ ಬಾಳಿಲ, ಬಿಜೆಪಿ ಯುವ ಮೋರ್ಚ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಮಹಿಳಾ ಮೋರ್ಚೆ ಸದಸ್ಯೆ ಗೀತಾ ಪ್ರೇಮ್, ದ.ಕ ಜಿಲ್ಲಾ ಜೇನು ವ್ಯವಸಾಯ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ದೇವರಕಾನ, ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಕೂರೋಡಿ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಪನ್ನೆಗುತ್ತು, ಬಿಜೆಪಿ ಮುಖಂಡರಾದ ಪ್ರೀತಮ್ ರೈ ಬೆಳ್ಳಾರೆ, ಸಾಯಿ ಗಿರಿಧರ್ ರೈ ಪನ್ನೆ, ಮಡ್ತಿಲ ಶೇಖರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ಯತೀಶ್ ನಾಗಮಜಲು, ಸಂತೋಷ್ ಕೊಡಿಯಾಲ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್‌ ಶಿಪ್‌ ಗೆ ಸಜ್ಜು – ಆಗಸ್ಟ್ 2 ರಿಂದ 8 ರವರೆಗೆ ದೇಶದ 600ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
July 25, 2026
7:44 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
July 24, 2026
9:05 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror