ಸುಳ್ಯ: ತಾಲೂಕಿನ ಪ್ರಮುಖ ಪೇಟೆ ಎನಿಸಿಕೊಂಡ ಬೆಳ್ಳಾರೆಯ ರಸ್ತೆಯ ಮಳೆಗಾಲದ ಪರಿಸ್ಥಿತಿ ಇಲ್ಲಿದೆ. ಇಡೀ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಸಾಕಷ್ಟು ಬಾರಿ ಸಾರ್ವಜನಿಕರು ಮನವಿ ಮಾಡಿದರು ಪ್ರಯೋಜನ ಆಗಿಲ್ಲ.
Advertisement
ಬೆಳ್ಳಾರೆಯಲ್ಲಿ ಹದಿನೈದು ನಿಮಿಷ ಮಳೆ ಸುರಿದರೆ ಸಾಕು , ನೀರು ಹರಿದು ಹೋಗಲು ಇಲ್ಲಿನ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಮಳೆನೀರೆಲ್ಲ ರಸ್ತೆಯಲ್ಲಿ ಹರಿದು ಹೋಗುತ್ತದೆ. ಸಾರ್ವಜನಿಕರಿಗೆ, ವಾಹನ ಸವಾರರಿಗೆ ವರ್ತಕರಿಗಂತು, ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಬೆಳ್ಳಾರೆ ಮೇಲಿನ ಪೇಟೆಯಲ್ಲಿನ ಸಮಸ್ಯೆ ವಿಪರಿತ, ಇದಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆಯೇ ಮುಖ್ಯ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ , ಸೂಕ್ತ ಕ್ರಮ ಕೈಗೊಳ್ಳುವರೇ ಎಂದು ಸಾರ್ವಜನಿಕರು ಮತ್ತೆ ಮನವಿ ಮಾಡುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement