ಭಾನುವಾರ ರಾಜ್ಯದಲ್ಲಿ 6 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢ | ಮುಂದುವರಿದ ಲಾಕ್ಡೌನ್ |

April 19, 2020
9:17 PM

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಟ್ಟು 6 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢ ಪಟ್ಟಿದೆ.  ಬೆಳಗ್ಗೆಯವರೆಗೆ 4 ಪ್ರಕರಣಗಳು ಮಾತ್ರವೇ ಕಂಡುಬಂದಿದ್ದರೆ ಸಂಜೆಯ ವೇಳೆಗೆ 2 ಪ್ರಕರಣಗಳು ಪತ್ತೆಯಾಗಿ ಒಟ್ಟು 6 ಪ್ರಕರಣಗಳು ಬೆಳಕಿಗೆ ಬಂದಿದೆ. ಇಂದಿನ ಪ್ರಕರಣದಲ್ಲಿ  4 ಪ್ರಕರಣಗಳು ಮೈಸೂರು ಹಾಗೂ 2 ಪ್ರಕರಣ ದ ಕ ಜಿಲ್ಲೆಯಲ್ಲಿ  ಕಂಡುಬಂದಿದೆ. ಈ ಮೂಲಕ ರಾಜ್ಯದಲ್ಲಿ  ಒಟ್ಟು 390 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಇದರ ಜೊತೆಗೆ ಲಾಕ್ಡೌನ್ ಮೇ.3 ರವರೆಗೆ ವಿಸ್ತರಣೆ ಮಾಡಿ ಆದೇಶವನ್ನು ಸರಕಾರ ಮಾಡಿದೆ.

ಕೇರಳದಲ್ಲಿ  ಭಾನುವಾರ 2 ಹೊಸ ಪ್ರಕರಣ ಪತ್ತೆಯಾಗಿದೆ. ಕಾಸರಗೋಡು ಹಾಗೂ ಕಣ್ಣೂರಿನಲ್ಲಿ  ಭಾನುವಾರ ಪತ್ತೆಯಾದ ಪ್ರಕರಣವಾಗಿದೆ. ಈ ಮೂಲಕ ಕೇರಳದಲ್ಲಿ  ಒಟ್ಟು 402 ಕೊರೊನಾ ವೈರಸ್ ಸೋಂಕಿತರು ಕಂಡುಬಂದಿದ್ದಾರೆ. ಕೇರಳದಲ್ಲಿ  ಎ.20 ರಿಂದ ಕೆಲವು ಪ್ರದೇಶಗಳಲ್ಲಿ  ಲಾಕ್ಡೌನ್ ಸಡಿಲವಾಗಲಿದೆ.

ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ  1324 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 16,116 ಕ್ಕೆ ಏರಿಕೆಯಾಗಿದೆ. ಭಾನುವಾರ ಒಟ್ಟು 31 ಮಂದಿ ಮೃತಪಟ್ಟಿದ್ದಾರೆ.  ದೇಶದಲ್ಲಿ  ಇದುವರೆಗೆ ಒಟ್ಟು 519 ಮಂದಿ ಮೃತಪಟ್ಟಿದ್ದು  ಒಟ್ಟು 2302 ಮಂದಿ ಚೇತರಿಕೆ ಕಂಡುಬಂದಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 22, 2025
7:04 PM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಇಂದಿನಿಂದ ‘ನವರಾತ್ರ ನಮಸ್ಯಾ’ | ವೈಭವದೊಂದಿಗೆ ಸಂಪನ್ನವಾದ ರಾಘವೇಶ್ವರ ಶ್ರೀಗಳ ಪುರಪುವೇಶ ಮೆರವಣಿಗೆ
September 22, 2025
7:26 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-09-2025 | ಸೆ.29 ರವರೆಗೆ ಅಲ್ಲಲ್ಲಿ ಮಳೆ ನಿರೀಕ್ಷೆ | ವಾಯುಭಾರ ಕುಸಿತದ ಪರಿಣಾಮ ಏನು..?
September 21, 2025
9:24 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group