ಭಾರತದ ಮೊದಲ ಮಂತ್ರವೇ ಆತ್ಮನಿರ್ಭರ -ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ

August 15, 2020
10:54 AM

ನವದೆಹಲಿ :ಯುವಶಕ್ತಿಯನ್ನು ಹೊಂದಿರುವ ಭಾರತದ ಮೊದಲ ಮಂತ್ರ ಆತ್ಮನಿರ್ಭರ ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement
Advertisement

ಕೆಂಪುಕೋಟೆಯಲ್ಲಿ  74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.  ಭಾರತ ಸಾಮೂಹಿಕ ಶಕ್ತಿಯನ್ನು  ಹೊಂದಿದೆ. ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ಸಂಗತಿಗಳಲ್ಲೂ ಭಾರತದ ಸಮೂಹ ಶಕ್ತಿ ಜಾಗೃತಗೊಳಿಸಿದೆ.  ಕೊರೋನಾ ವಿರುದ್ಧ ಸಾಮೂಹಿಕ ಶಕ್ತಿ ತೋರಿದೆ. ಪ್ರತಿಯೊಬ್ಬ ಭಾರತೀಯರು ಕೊರೋನಾ ಸಂದರ್ಭದಲ್ಲಿ ಆತ್ಮ ನಿರ್ಭರ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಭಾರತ ಒಂದು ಬಾರಿ ನಿರ್ಧಾರ ಕೈಗೊಂಡರೇ, ಅದನ್ನು ಸಾಧಿಸಿಯೇ ತೀರುತ್ತದೆ ಎಂದು  ಹೇಳಿದರು.ಆತ್ಮನಿರ್ಭರ ಭಾರತ ನಮಗೆಲ್ಲರಿಗೂ ದೃಢ ಸಂಕಲ್ಪವಾಗಬೇಕು. ಆತ್ಮನಿರ್ಭರ ಭಾರತವನ್ನು ನಮ್ಮ ರೈತರು ಸಾಬೀತುಪಡಿಸಿದ್ದಾರೆ ಎಂದು ಪ್ರಧಾನಿಗಳು ಕೊಂಡಾಡಿದರು.

Advertisement

ಕೊರೋನಾ ಸಂಕಷ್ಟ  ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೊರೋನಾ ವಾರಿಯರ್ಸ್ ಸೇವೆ ಬಹುಮುಖ್ಯವಾಗಿದೆ ಎಂದು ವಾರಿಯರ್ಸ್ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿದರು.

ಚೀನೀ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಇತರ ದೇಶಗಳಿಂದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇನ್ನು ಮುಂದೆ ನಾವು ನಮ್ಮ ಸ್ವಂತ ಸರಕುಗಳನ್ನು ನಾವೇ ತಯಾರಿಸಿಕೊಳ್ಳೋಣ. ಭಾರತವು ಗುಣಮಟ್ಟದ ಸರಕುಗಳ ಆಶ್ರಯ ತಾಣವೆಂದು ಮತ್ತೊಮ್ಮೆ ಸಾಬೀತುಪಡಿಸೋಣ. ಒಂದು ಕಾಲದಲ್ಲಿ ಭಾರತೀಯ ಸರಕುಗಳನ್ನು ಪ್ರಪಂಚದಾದ್ಯಂತ ಗುಣಮಟ್ಟದ ವಸ್ತುಗಳೆಂದು ಪೂಜಿಸಲಾಗುತ್ತಿತ್ತು. ಭಾರತೀಯ ಸರಕುಗಳಿಗೆ ಹಿಂದಿನ ವೈಭವವನ್ನು ತರಲು ನಾವು ಮತ್ತೆ ಪ್ರಯತ್ನಿಸೋಣ. ಕೊರೋನಾ ಕಷ್ಟದ ಸಮಯದಲ್ಲೂ ಹೊಸ ಹಾದಿಯನ್ನು ಹುಡುಕೋಣ ಎಂದರು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror