ಭಾರೀ ಮಳೆ : ಜಿಲ್ಲಾಡಳಿತ ಕೈಗೊಂಡ ತುರ್ತು ಮುಂಜಾಗ್ರತಾ ಕ್ರಮಗಳು ಹೀಗಿದೆ…

August 6, 2019
6:14 PM

ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು  ಮಲೆನಾಡು ಭಾಗಗಳಲ್ಲಿ  ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು  ಸರ್ವ ಸನ್ನದ್ಧವಾಗಿರಬೇಕು ಎಂದು ಸೂಚನೆ ನೀಡಿದೆ. ಇಲಾಖೆ ಮಾತ್ರವಲ್ಲ ಸಾರ್ವಜನಿಕರದ್ದೂ ಇಲ್ಲಿ ಮುಂಜಾಗ್ರತೆಯ ಬಹುಪಾಲು ಜವಾಬ್ದಾರಿ ಇದೆ.

ಜಿಲ್ಲೆಯ ಪದವಿಯವರೆಗಿನ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡುವುದು , ನೀರು ಅಥವಾ ತಗ್ಗು ಪ್ರದೇಶಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸುವುದು, ಮೀನುಗಾರರು 3 ದಿನಗಳ ಕಾಲ ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯುವುದು  ನಿಷೇಧ, ಸಾರ್ವಜನಿಕ ದೂರುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವುದು , ಪ್ರವಾಸಿಗರು ಹಾಗೂ ಸಾರ್ವಜನಿಕರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸುವುದು  ಅಗತ್ಯವಾಗಿದೆ.

ಯಾವುದಾದರೂ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ತುರ್ತು ಸಂಪರ್ಕ ಸಂಖ್ಯೆಗೆ ಸಂಪರ್ಕಿಸಲು ಇದೇ ವೇಳೆ ಕೋರಲಾಗಿದೆ. 24 ಗಂಟೆಯೂ ಚಾಲೂ ಇರುವ ಕಂಟ್ರೋಲ್ ರೂಂ 1077 ಗೆ ಕರೆ ಮಾಡಬಹುದು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಬೆಳೆ ಸಮೀಕ್ಷೆ ಆರಂಭ | ರೈತರೇ ಮೊಬೈಲ್‌ ಮೂಲಕ ಬೆಳೆ ವಿವರ ದಾಖಲಿಸಿ – ಕೃಷಿ ಇಲಾಖೆ ಮನವಿ
July 7, 2026
8:41 PM
by: ಮಿರರ್‌ ಡೆಸ್ಕ್‌
ಮಾಣಿ–ಸಂಪಾಜೆ ರಸ್ತೆ ದುರಸ್ತಿಗೆ ₹49.22 ಕೋಟಿ ಮಂಜೂರು | ಚತುಷ್ಪಥ ಯೋಜನೆಗೆ ವೇಗ
July 7, 2026
8:33 PM
by: ಮಿರರ್‌ ಡೆಸ್ಕ್
ಭೂಕುಸಿತದ ಬಗ್ಗೆ ಎಚ್ಚರಿಕೆ – ಜುಲೈ 7 ರಿಂದ 11 ರವರೆಗೆ ಪಶ್ಚಿಮಘಟ್ಟದಲ್ಲಿ ಭಾರೀ ಮಳೆ ಸಾಧ್ಯತೆ
July 7, 2026
8:07 PM
by: ಮಿರರ್‌ ಡೆಸ್ಕ್
ವಯನಾಡಿನಲ್ಲಿ ಭೂಕುಸಿತದ ದುರಂತ | ಒಂದು ಬಲಿ , 7 ಮಂದಿ ನಾಪತ್ತೆ | ಇದು ಮಾನವ ನಿರ್ಮಿತ ದುರಂತ ಎಂದ ಸಚಿವ
July 7, 2026
3:44 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror