ಮಂಗಳೂರು ಬಾಂಬ್ ಪ್ರಕರಣ : ಇದು ಬಾಂಬ್ ಅಲ್ಲ ಪಟಾಕಿ ಎಂದು ಎಚ್ ಡಿ ಕೆ

January 21, 2020
8:28 PM

ಮಂಗಳೂರು:  ಮಂಗಳೂರು ವಿಮಾನ ನಿಲ್ದಾಣದಲ್ಲಿ  ಸೋಮವಾರ ಪತ್ತೆಯಾದ ಬಾಂಬ್ ಬಗ್ಗೆ ನನಗೆ ಇನ್ನೂ ಪೊಲೀಸರ ಮೇಲೆ ಅನುಮಾನವಿದೆ. ಇದರ ಹಿಂದೆ ಏನೋ ಉದ್ದೇಶ ಇದ್ದಂತೆ ಕಾಣುತ್ತದೆ. ಹೀಗಾಗಿ ಘಟನೆಯ ಸಿಸಿಟಿವಿ ವಿಡಿಯೋ ಹಾಗೂ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ಜನರ ಮುಂದೆ ಸಮಗ್ರ ಮಾಹಿತಿ ಇಡಬೇಕು ಎಂದು ಶೃಂಗೇರಿಯಲ್ಲಿ ಸೋಮವಾರ  ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಗಳವಾರ ಮತ್ತೆ ಪ್ರತಿಕ್ರಿಯೆ ನೀಡಿ ಇದು ಪೊಲೀಸರು ಜಾಗೃತಿಗಾಗಿ ಮಾಡಿಸುವ ಅಣಕು ಪ್ರದರ್ಶನ‌ದಂತೆ ಕಾಣುತ್ತದೆ, ಇದು ಬಾಂಬ್ ಅಲ್ಲ ಪಟಾಕಿ ಎಂದು ವ್ಯಂಗ್ಯವಾಡಿದ್ದಾರೆ. ಇಂತಹ ವಿಷಯದಲ್ಲಿ ಸರ್ಕಾರ ಘನತೆ ಮತ್ತು ಗಂಭೀರತೆಯಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.

Advertisement
Advertisement

ಮಂಗಳೂರಿನಲ್ಲಿ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶ. ಕಳೆದ ಎರಡು ವಾರದ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ  ನಡೆದ ಹಿಂಸಾಚಾರದಲ್ಲೂ ಪೊಲೀಸರ ಪಾತ್ರ ಇತ್ತು ಎಂದು ಹೇಳಲಾಗಿದೆ. ಹೀಗಾಗಿ ಈಗ ಪತ್ತೆಯಾದ ಬಾಂಬ್ ಹಿಂದೆಯೂ ಅಂತಹದ್ದೇ ಕೈವಾಡ ಏಕಿರಬಾರದು ಎಂದು ಪ್ರಶ್ನಿಸಿದ್ದಾರೆ. ಈ ಸಂದೇಹ ದೂರವಾಗಲು ಪೊಲೀಸರು ಸತ್ಯಾಸತ್ಯತೆಯನ್ನು  ತೆರೆದಿಡಬೇಕು ಎಂದು ಹೇಳಿದರು. ಇಲ್ಲಿ ಆರ್‌ಎಸ್‌ಎಸ್  ಅಣತಿಯಂತೆ  ಸರಕಾರ ನಡೆಸಬಾರದು. ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು  ಟೀಕಿಸಿದರು. ಘಟನೆಯ ಬಗ್ಗೆ ಮಂಗಳೂರು ಕಮೀಶನರ್ ಜೊತೆ ಮಾತನಾಡಿದ್ದೇನೆ, ಅವರ ಮಾಹಿತಿಯನ್ನು  ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

 

 

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೀವಕ್ಕೇ ಅಮೃತ – ಜೀವಾಮೃತ : ಗಿಡ/ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚುತ್ತೆ..
May 1, 2024
5:44 PM
by: The Rural Mirror ಸುದ್ದಿಜಾಲ
ಕಾಳಜಿ – ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ : ಬಿಸ್ಲು ಜಾಸ್ತಿಯಾಯ್ತು ಅಂತಾ ಜಗಲಿ ಕಟ್ಟೆ ಮೇಲೆ ಕೂತು ಮಾತಾಡಿ ಜ್ಯೂಸ್, ಎಳನೀರು ಕುಡಿದರೆ ಉಪಯೋಗವಿಲ್ಲ
May 1, 2024
5:22 PM
by: The Rural Mirror ಸುದ್ದಿಜಾಲ
ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ : ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ : ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ
May 1, 2024
4:55 PM
by: The Rural Mirror ಸುದ್ದಿಜಾಲ
ಬಹಳ ದಿನಗಳ ನಂತರ ಗ್ರಾಹಕರಿಗೆ ಸಿಹಿ ಸುದ್ದಿ : ಚಿನ್ನದ ದರದಲ್ಲಿ ಭಾರಿ ಇಳಿಕೆ : ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ!
May 1, 2024
4:10 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror