ಮಂಡೆಕೋಲು : ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಮತ್ತೆ ಆನೆ ಹಾವಳಿ ಹೆಚ್ಚಾಗಿದೆ. ಭಾನುವಾರ ರಾತ್ರಿ ಆನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ.
ಮಂಡೆಕೋಲು ಗ್ರಾಮದ ಬೊಳುಗಲ್ಲು ಪ್ರದೇಶದಲ್ಲಿ ಅರಣ್ಯ ಇಲಾಖೆಯು ಆನೆ ತಡೆಗೆ ನಿರ್ಮಿಸಿದ ತಡೆ ಬೇಲಿ ಭೇದಿಸಿ ಬಂದ ಆನೆಗಳು ಶ್ರೀಶ ಶರ್ಮ ಅವರ ತೋಟಕ್ಕೆ ಹಾನಿ ಮಾಡಿದೆ. ಬಾಳೆ, ಅಡಿಕೆ, ತೆಂಗು ಗಿಡಗಳನ್ನು ಹಾನಿ ಮಾಡಿದೆ. ಹೀಗಾಗಿ ಅಪಾರ ನಷ್ಟ ಉಂಟಾಗಿದೆ. ಆನೆಗಳು ಹಿಂಡು ದಾಳಿ ಮಾಡುವ ವೇಳೆ ಸಮೀಪದ ತೋಟದವರಿಗೆ ಮಾಹಿತಿ ನೀಡಲು ಈಗ ಮೊಬೈಲ್ ಸಹಿತ ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೆ ಇಲ್ಲಿ ಜನತೆ ಕಂಗಾಲಾಗಿದ್ದಾರೆ.
ಇದೀಗ ಆನೆ ಹಿಂಡಿನಲ್ಲಿ ಮರಿ ಆನೆ ಕೂಡಾ ಇದ್ದು ಅಪಾಯ ಇದೆ. ಮರಿ ಆನೆ ಇದ್ದಾಗ ಆನೆಗಳು ಹೆಚ್ಚಾಗಿ ಮನುಷ್ಯರ ಮೇಲೂ ದಾಳಿ ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಹೀಗಾಗಿ ಸಂಪರ್ಕ ವ್ಯವಸ್ಥೆಯೂ ಇಲ್ಲಿ ಸರಿಯಾಗಬೇಕಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel