ಮಡಪ್ಪಾಡಿ ಸಹಕಾರಿ ಬ್ಯಾಂಕ್ ಮಹಾಸಭೆ : ಶೇ 8.5 ಡಿವಿಡೆಂಡ್ ಘೋಷಣೆ

September 22, 2019
3:28 PM

ಮಡಪ್ಪಾಡಿ : ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಮಹಾಸಭೆ ಭಾನುವಾರ ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪಿಸಿ ಜಯರಾಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 24.15 ಲಕ್ಷ ಲಾಭ ಹೊಂದಿದ್ದು ಸದಸ್ಯರಿಗೆ ಶೇ.8.5 ಡಿವಿಡೆಂಡ್ ಘೋಷಿಸಲಾಗಿದೆ.

ಸಭೆಯಲ್ಲಿ  ರೈತರ ಸಾಲಮನ್ನಾ ಬಾರದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮಡಪ್ಪಾಡಿಯಲ್ಲಿ 5 ಜನಕ್ಕೆ ಮಾತ್ರ ಸಾಲಮನ್ನಾ ಬಂದಿದೆ. ಈ ಬಗ್ಗೆ ರೈತರು ಸೇರಿ ತಾಲೂಕು ಕಚೇರಿ ಅಥವಾ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಲಮನ್ನಾ ಸೆಪ್ಟೆಂಬರ್ ಒಳಗೆ ಬಾರದಿದ್ದರೇ ಹೋರಾಟಕ್ಕೆ ಸಿದ್ಧತೆ ನಡೆಸೋಣ ಎಂದು ಅಧ್ಯಕ್ಷ ಪಿಸಿ ಜಯರಾಮ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ, ನಿರ್ದೇಶಕರಾದ ಸೋಮಶೇಖರ ಕೇವಳ, ಭವಾನಿಶಂಕರ ಬಾಳಿಕಳ, ಜಯರಾಮ ಹಾಡಿಕಲ್ಲು, ಅಜಯ್ ವಾಲ್ತಾಜೆ,ರಾಜಕುಮಾರ ಪೂಂಬಾಡಿ,ತಾರಾ ಜಿಸಿ, ಪ್ರವೀಣ ಯತೀಂದ್ರನಾಥ್, ಮೋಹನದಾಸ್ ಹಾಡಿಕಲ್ಲು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ವರದಿ ವಾಚಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ – ಗೋಮಯ ಗೊಬ್ಬರದತ್ತ ಭಾರತದ ರೈತರು – ರಾಸಾಯನಿಕ ಗೊಬ್ಬರ ಕೊರತೆ ಭೀತಿ..!
June 19, 2026
10:43 AM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಕೊಬ್ಬರಿ ಬೆಲೆ MSP ಗಿಂತಲೂ ಕಡಿಮೆ – ₹130 ಕನಿಷ್ಠ ಬೆಂಬಲ ಬೆಲೆಗೆ ರೈತರ ಆಗ್ರಹ
June 19, 2026
9:58 AM
by: ದ ರೂರಲ್ ಮಿರರ್.ಕಾಂ
ಎಲ್‌ ನಿನೋ ಈಗ ಮತ್ತಷ್ಟು ನಿಗೂಢ…! ಹವಾಮಾನ ಬದಲಾವಣೆ ಮಳೆ ಮುನ್ಸೂಚನೆಗಳನ್ನೇ ಗೊಂದಲಗೊಳಿಸುತ್ತಿದೆಯೇ..?
June 19, 2026
7:21 AM
by: ದ ರೂರಲ್ ಮಿರರ್.ಕಾಂ
ಪ್ರತಿ ಜಿಲ್ಲೆಯಲ್ಲಿ ಒಂದು ಗೋಆಧಾರಿತ ಉದ್ಯಮ – ಉತ್ತರ ಪ್ರದೇಶದ ಹೊಸ ಮಾದರಿ ದೇಶದ ಗಮನ ಸೆಳೆಯುತ್ತಿದೆ
June 19, 2026
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror