ಮಹಾರಾಷ್ಟ್ರದಲ್ಲಿ ಪೊಲೀಸರ ಎದುರೇ ಇಬ್ಬರು ಸಂತರ ಬರ್ಬರವಾಗಿ ಹತ್ಯೆ | ಹಿಂದೂ ಜನಜಾಗೃತಿ ಸಮಿತಿ ಖಂಡನೆ | ಅಪರಾಧಿಗಳ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯ

April 20, 2020
11:04 PM

ಮಂಗಳೂರು: ಮಹಾರಾಷ್ಟ್ರದ  ಪಾಲಘರದಲ್ಲಿ ‘ಶ್ರೀ ಪಂಚ ದಶನಾಮ ಜುನಾ ಆಖಾಡಾ’ದ ಸಂತ ಕಲ್ಪವೃಕ್ಷಗಿರಿ ಮಹಾರಾಜ ಹಾಗೂ ಸುಶೀಲಗಿರಿ ಮಹಾರಾಜ  ಹಾಗೂ ಅವರ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ  ಪೊಲೀಸರ ಎದುರೇ ತೀವ್ರವಾಗಿ ಥಳಿಸಿ ಸಂತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಖಂಡನೀಯವಾಗಿದ್ದು ತಕ್ಷಣವೇ ಪೊಲೀಸರ ಸಹಿತ ಅಪರಾಧಿಗಳ ಮೇಲೆ ಸೂಕ್ತ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಒತ್ತಾಯಿಸಿದ್ದಾರೆ.

Advertisement

ಹಲ್ಲೆಯ ವಿಡಿಯೋ ಬಹಿರಂಗಗೊಂಡಿದ್ದು ಅದರಲ್ಲಿ ಒಂದು ವಿಡಿಯೋದಲ್ಲಿ ಪೊಲೀಸರೇ ಆ ವೃದ್ಧ ಸಂತರನ್ನು ಹಿಂಸಾತ್ಮಕ ಸಮೂಹದವರಿಗೆ ಒಪ್ಪಿಸುತ್ತಿರುವ ಹಾಗೂ ಪೊಲೀಸರ ಎದುರೇ ಅವರ ಬರ್ಬರವಾಗಿ ಹತ್ಯೆಯಾಗುತ್ತಿರುವ ಭಯಾನಕ ಸತ್ಯವು ಬಹಿರಂಗವಾಗಿದೆ.  ಈ ಹಿಂದೆಯೂ ಮಹಾರಾಷ್ಟ್ರದ ಠಾಣೆ ಎಂಬಲ್ಲಿ ಪೊಲೀಸರು ಓರ್ವ ಹಿಂದುತ್ವವಾದಿಯನ್ನು ಆತನ ಮನೆಯಿಂದ ಕರೆದೊಯ್ದು ಮಂತ್ರಿಯ ಬಂಗಲೆಯಲ್ಲಿ ಅಮಾನುಷವಾಗಿ ಥಳಿಸಿದ ಬಗ್ಗೆ ಬಹಿರಂಗವಾಗಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ.  ಈ ಘಟನೆಯು ಸಂತರ ಭೂಮಿ ಎಂದೇ ಹೇಳಲಾಗುವ ಮಹಾರಾಷ್ಟ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಪದೇ ಪದೇ ಹಿಂದೂಗಳನ್ನು ಗುರಿಯಾಗಿಸುವ ಹಿಂಸಾತ್ಮಕ ಘಟನೆಯನ್ನು ತಡೆಗಟ್ಟಲು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಪಾಲಘರ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಮಾಡಿ ಆರೋಪಿಯಾಗಿರುವ ಹಿಂಸಾತ್ಮಕ ಸಮೂಹ ಸಹಿತ ಸಂಬಂಧಪಟ್ಟ ಪೊಲೀಸರ ಮೇಲೆಯೂ  ಅಪರಾಧವನ್ನು ದಾಖಲಿಸಬೇಕು, ಅದೇರೀತಿ ದೋಷಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು, ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group