ಯೋಗದ ಮೂಲಕ ಕಾರ್ಗಿಲ್ ವಿಜಯ್‌ ದಿವಸ್‌ | ಸುಳ್ಯದ ಯೋಗೇನ ಚಿತ್ತಸ್ಯ ತಂಡದಿಂದ ವಿಶೇಷ ರೀತಿಯಲ್ಲಿ ಯೋಧರಿಗೆ ನಮನ |

July 26, 2020
2:30 PM

ಸುಳ್ಯ: ಕಾರ್ಗಿಲ್‌ ವಿಜಯ ದಿವಸ್.‌ ಈ ದಿನವನ್ನು ವಿವಿದೆಡೆ ವಿವಿಧ ಮಾದರಿಯಲ್ಲಿ  ಆಚರಿಸಲಾಗುತ್ತದೆ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡದಿಂದ ಯೋಗಗುರು ಸಂತೋಷ್‌ ಮುಂಡಕಜೆ ನೇತೃತ್ವದಲ್ಲಿ  ವಿಶೇಷ ರೀತಿಯಲ್ಲಿ ಈ ದಿನವನ್ನು  ಆಚರಿಸಲಾಯಿತು. ಈ ತಂಡದ ಮಕ್ಕಳು ಒಂದು ಆಸನವನ್ನು  ಮಾಡುವ ಮೂಲಕ ಯೋಧರಿಗೆ ಸಮರ್ಪಿಸಿದರು. ಈ ಮೂಲಕ ಕಾರ್ಗಿಲ್‌ ದಿನವನ್ನು ಮಕ್ಕಳು ನೆನಪಿಸುವಂತೆ ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡ ಮಾಡಿತು.

 

ಸುಳ್ಯದ ಯೋಗಗುರು ಸಂತೋಷ್‌ ಮುಂಡಕಜೆ ಅವರು ಯೋಗೇನ ಚಿತ್ತಸ್ಯ ಯೋಗಾ ಯೋಗಾ  ಎಂಬ ತಂಡದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸುಳ್ಯದಲ್ಲಿ  ಯೋಗ ತರಬೇತಿ ನೀಡುತ್ತಿದ್ದರು. ಲಾಕ್ಡೌನ್‌ ಕಾರಣದಿಂದ ಸುಳ್ಯದಲ್ಲಿ  ಯೋಗ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಆನ್‌ ಲೈನ್‌ ಮೂಲಕ ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರತೀ ದಿನ ಕೂಡಾ ವಿನೂತನ ರೀತಿಯಲ್ಲಿ  ಯೋಗದ ತರಬೇತಿ ನೀಡುವ ಸಂತೋಷ್‌ ಮುಂಡಕಜೆ ಅವರು ಕಾರ್ಗಿಲ್‌ ವಿಜಯ ದಿವಸದಂದು ಮಕ್ಕಳಿಗೆ ಕಾರ್ಗಿಲ್‌ ದಿನದ ಬಗ್ಗೆ ತಿಳಿಯುವ ಉದ್ದೇಶದಿಂದ ಕಾರ್ಗಿಲ್‌ ಯೋಧರಿಗಾಗಿ ಒಂದು ಆಸನವನ್ನು  ಮಾಡಿ ವಿಡಿಯೋವನ್ನು  ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ಪೇಸ್‌ ಬುಕ್‌ ಪೇಜ್‌ ಗೆ ಅಪ್ಲೋಡ್‌ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲೂ ಯೋಗದ ಜಾಗೃತಿ ಜೊತೆಗೆ ಕಾರ್ಗಿಲ್‌ ದಿನವನ್ನು  ನೆನಪಿಸಿದ್ದಾರೆ. ಈ ಹಿಂದೆಯೂ ಯೋಗ ಹಾಗೂ ರಾಷ್ಟ್ರದ ಬಗ್ಗೆ ಸಂತೋಷ್‌ ಮುಂಡಕಜೆ ನೇತೃತ್ವದಲ್ಲಿ ಜಾಗೃತಿ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿದ್ದರು.

ಯೋಗಾ ಯೋಗಾ ಪೇಸ್‌ ಬುಕ್‌ ಪೇಜ್‌

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ
July 23, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror