ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಇಂಜಿನಿಯರಿಂಗ್ ನಲ್ಲಿ 9ನೇ ರ್ಯಾಂಕ್ ಮತ್ತು ಫಾರ್ಮಾದಲ್ಲಿ 10 ನೇ ರ್ಯಾಂಕ್ ಗಳಿಸಿದ ಗೌರೀಶ್ ಕಜಂಪಾಡಿ, ಇಂಜಿನಿಯರಿಂಗ್ ನಲ್ಲಿ 1226ನೇ ರ್ಯಾಂಕ್ ಗಳಿಸಿದ ನಿಶಾ ಎಂ.ಎಸ್, ಇಂಜಿನಿಯರಿಂಗ್ ನಲ್ಲಿ 1356ನೇ ರ್ಯಾಂಕ್ ಗಳಿಸಿದ ಸಾಕ್ಷಾತ್ ಎಸ್ ಎಂ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ನೇ ರ್ಯಾಂಕ್, ವೆಟರ್ನರಿಯಲ್ಲಿ 127ನೇ ರ್ಯಾಂಕ್, ಫಾರ್ಮಾದಲ್ಲಿ 217ನೇ ರ್ಯಾಂಕ್, ನ್ಯಾಚುರೋಪತಿ ವಿಭಾಗದಲ್ಲಿ 63ನೇ ರ್ಯಾಂಕ್ ಮತ್ತುಇಂಜಿನಿಯರಿಂಗ್ ನಲ್ಲಿ 364ನೇ ರ್ಯಾಂಕ್ ಗಳಿಸಿದ ಅಕ್ಷಯ್ ಪಾಂಗಾಳ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1033 ನೇ ರ್ಯಾಂಕ್ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 1220ನೇ ರ್ಯಾಂಕ್ ಗಳಿಸಿದ ಶಮಾ ಕೆ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 895 ನೇ ರ್ಯಾಂಕ್ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 1454ನೇ ರ್ಯಾಂಕ್ ಗಳಿಸಿದ ಬಿ. ಎನ್. ಈಶ್ವರ ಪ್ರಸನ್ನ, ನ್ಯಾಚುರೋಪತಿ ವಿಭಾಗದಲ್ಲಿ 1082ನೇ ರ್ಯಾಂಕ್ ಗಳಿಸಿದ ವಿಜಿತ್ ಕೃಷ್ಣ ಇವರನ್ನು ಶಾಲು ಹೊದಿಸಿ, ಪುಸ್ತಕ ಮತ್ತು ಸಿಹಿ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಅಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯರಾದ ಕೇಶವ ಮೂರ್ತಿ, ಸಚಿನ್ ಶೆಣೈ, ವತ್ಸಲಾರಾಜ್ಞಿ, ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಉಪನ್ಯಾಸಕರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.