ಸುಳ್ಯ: ಯಾವುದೇ ಆಸೆ, ನಿರೀಕ್ಷೆಯನ್ನು ಇಟ್ಟು ರಾಜಕಾರಣಕ್ಕೆ ಬಂದಿಲ್ಲ. ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಅಸ್ಟೇ. ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಯಾವುದೇ ಸಚಿವ ಸ್ಥಾನಗಳು ಬೇಡ, ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನೀಡಿ ಎಂದು ನರೇಂದ್ರ ಮೋದಿಯವರಲ್ಲಿ ಕೇಳುತ್ತೇನೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ 10 ವರ್ಷದಲ್ಲಿ ಆದರ್ಶ ರಾಜಕಾರಣ ಮಾಡಿದ್ದೇನೆ ಅದನ್ನು ಮೆಚ್ಚಿ ಜನತೆ ಮತ್ತೆ ಬಹುಮತದಿಂದ ಆರಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ. ದುರಂಹಕಾರದ, ದ್ವೇಷದ ಮತ್ತು ಸ್ವಾರ್ಥ ರಾಜಕಾರಣ, ಜಾತಿ ರಾಜಕಾರಣ ಎಂದೂ ಮಾಡುವುದಿಲ್ಲ. ಜನರ ಸೇವೆಯೇ ಧ್ಯೇಯ ಎಂದು ನಳಿನ್‍ಕುಮಾರ್ ಪುನರುಚ್ಚರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel