ಸತತ ನಾಲ್ಕನೇ ದಿನವೂ 100 ಮಿಮೀ ದಾಟಿದ ಮಳೆ : ಮಳೆ ಅವಾಂತರಕ್ಕೆ ನೆರವಾದರು ಹಲವಾರು ಮಂದಿ

August 9, 2019
9:35 AM

ಸತತ 4 ನೇ ದಿನವೂ 100 ಮಿಮೀ ಮಳೆ ದಾಟಿದೆ. ಇಷ್ಟು ದಿನವೂ ರೆಡ್ ಅಲರ್ಟ್..!. ಹಲವು ಕಡೆ ಸಂಕಷ್ಟ, ಇನ್ನೂ ಹಲವರಿಗೆ ಸಮಸ್ಯೆ…! .‌ಈ ನಡುವೆ ಸಹಾಯಕ್ಕೆ ಬಂದವರು ಹಲವರು. ಅಧಿಕಾರಿಗಳು ಎಲ್ಲೆಲ್ಲಾ ಓಡಾಡಿದರು, ಊಟ ಸವಿದರು. ಜನಪ್ರತಿನಿಧಿಗಳಿಗೆ ಕೆಲಸವೇ ಇಲ್ಲವಾಯಿತು….! ಈ ಕಡೆಗೆ ಫೋಕಸ್..

Advertisement
Advertisement

ಮಳೆಯ ರುದ್ರ ನರ್ತನ ಮುಂದುವರಿದಿದೆ. ಸುಳ್ಯ ತಾಲೂಕಿನ ಕಲ್ಮಕಾರು ,ಬಾಳುಗೋಡು, ಸುಬ್ರಹ್ಮಣ್ಯ, ಸಂಪಾಜೆ ಮುಂತಾದ ಗ್ರಾಮಗಳಲ್ಲಿ ಮಳೆಯು ತನ್ನ ಭೀಕರತೆಯನ್ನು ಪ್ರದರ್ಶಿಸಿದೆ. ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

Advertisement

ಹಲವು ಮನೆಗಳಿಗೆ ನೀರು ನುಗ್ಗಿ ಅವರು ಗಂಜೀ ಕೇಂದ್ರಗಳಲ್ಲಿ ವಾಸಿಸುವಂತೆ ಆಗಿದೆ. ಜಿಲ್ಲಾಡಳಿತವೂ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದೆ.

ಕಲ್ಮಕಾರಿನಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸುಳ್ಯ ತಹಶೀಲ್ದಾರ್ ಭೇಟಿ ನೀಡಿದರು.

Advertisement

ಮಳೆ ಪೀಡಿತ ಕಲ್ಮಕಾರು ಗಂಜಿ ಕೇಂದ್ರಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದೆ. ಶ್ರೀ ದೇವರ ಅನ್ನ ಪ್ರಸಾದವನ್ನು ಒದಗಿಸಲಾಗುತ್ತಿದೆ. ಅಲ್ಲದೇ ದೇವಾಲಯದಿಂದ ಚಾಪೆ,ಹೊದಿಕೆಗಳನ್ನು ಉಚಿತವಾಗಿ ನೀಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಯುವಕರ ತಂಡವೂ ಅಹಾರವನ್ನು ಗಂಜಿ ಕೇಂದ್ರಕ್ಕೆ ಒದಗಿಸುವ ಕಾರ್ಯವನ್ನು ನಿರಂತರವಾಗಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ ಹಾಗೂ ಇತರರು ತಮ್ಮ ಕಾರಿನಲ್ಲಿ ಸುಮಾರು 25 ಕಿಮೀ ದೂರದ ಕಲ್ಮಕಾರಿಗೆ ತಲಪಿಸಿ   ಮಾನವೀಯ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

Advertisement

 

Advertisement

ಶಾಲೆಯಲ್ಲಿ ತೆರೆಯಲಾದ ಕಲ್ಮಕಾರು ಗಂಜಿ ಕೇಂದ್ರದಲ್ಲಿ 10 ಕುಟುಂಬದ 26 ಮಂದಿ ಅಶ್ರಯ ಪಡೆದಿದ್ದಾರೆ.

ಪ್ಲಡ್ ರೆಸ್ಕ್ಯೂ ವಾಲಿಂಟಿಯರ್ ಗ್ರೂಪ್‌ ನ ಸದಸ್ಯರೂ ಕೇಂದ್ರಕ್ಕೆ ಭೇಟಿ ನೀಡಿದರು.

Advertisement

ಮಳೆ ಕಡಿಮೆಯಾಗದಿದ್ದಾರೆ , ಸುಬ್ರಹ್ಮಣ್ಯ ಹಾಗೂ ಕಲ್ಮಕಾರು ನಡುವಿನ ರಸ್ತೆ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಗಂಜಿ ಕೇಂದ್ರದಲ್ಲೆ ಆಹಾರ ತಯಾರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆದಿದೆ.

ಕೆಲವು ಕಡೆ‌ ಮೂರ್ನಾಕು‌ ದಿನಗಳಿಂದ‌ ವಿದ್ಯುತ್ ವ್ಯವಸ್ಥೆ ಇಲ್ಲವಾಗಿದೆ. ಗಾಳಿಗೆ ಮರ ಬಿದ್ದು ಹಾನಿಯಾಗಿದೆ. ಹೀಗಾಗಿ ಜನರೇ ಗಡಿಬಿಡಿ ಇಲ್ಲ ಎನ್ನುತ್ತಾ ಹೀಗೊಂದು‌ ಸಂದೇಶ ನೀಡಿದ್ದಾರೆ,

Advertisement

ಪ್ರೀತಿಯ ಲೈನ್ ಮೆನ್ ಅವರುಗಳಿಗೆ
ಮಳೆಯ ಆರ್ಭಟ ನಿಲ್ಲುವವರೆಗೂ ಕರೆಂಟ್ ಇಲ್ಲ ಅಂದ್ರು ಪರವಾಗಿಲ್ಲ. ನಾವು ನಿಮಗೆ ಬೈಯೊಲ್ಲ, ಕಿರಿಕಿರಿ ಮಾಡಲ್ಲ, ಒತ್ತಡ ಹೇರಲ್ಲ. ಧಾರಾಕಾರ ಮಳೆ-ಗಾಳಿ ಇದೆ. ಕಂಬಗಳು ಜಾರುತ್ತವೆ- ಬಾಗುತ್ತವೆ. ಮಣ್ಣು ಸಡಿಲವಾಗಿ ಮರಗಳು ತಂತಿಮೇಲೆ ಉರುಳಿ ಕಂಬಗಳ ಮುರಿಯುತ್ತಿವೆ. ದಯಮಾಡಿ ನಿಮ್ಮ‌ ರಕ್ಷಣೆ ಮೊದಲು ಆಧ್ಯತೆ ಕೊಡಿ. ನಮ್ಮಂತೆಯೆ ನಿಮಗೂ ಕುಟುಂಬವಿದೆ.
ಈ ಬೀಕರ ಮಳೆಯಲ್ಲಿ ನೀವು ಸರ್ಕಸ್ ರೀತಿಯಲ್ಲಿ ದುರಸ್ಥಿ ಕಾರ್ಯಮಾಡಿ ನಮ್ಮಗಳಿಗೆ ಬೆಳಕು ನೀಡಿ ನಿಮ್ಮ ಕುಟುಂಬ ಕತ್ತಲೆಯಲ್ಲಿ ಕವಿಯುವುದು ಬೇಡವೇ ಬೇಡ..

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror