ಸಹಕಾರಿ ಮಾತುಕತೆ | ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು

July 19, 2020
10:13 AM

ಸಹಕಾರಿ-ಸಹಕಾರ ಕ್ಷೇತ್ರದ ಬಗ್ಗೆ ಆಳವಾದ ಮಾಹಿತಿ ಹಾಗೂ ಅದ್ಯಯನ ಮಾಡಿರುವ ಸುಳ್ಯ ತಾಲೂಕಿನ ರಾಧಾಕೃಷ್ಣ ಕೋಟೆ ಅವರು ಪ್ರಸ್ತುತ ಸಹಕಾರಿ ಕ್ಷೇತ್ರದ ಚರ್ಚೆ ಹಾಗೂ ರಾಜಕೀಯ ಚಟುವಟಿಕೆ ಪ್ರವೇಶದ ಬಗ್ಗೆ ಬರೆದಿದ್ದಾರೆ..

Advertisement

ಸಹಕಾರಿ ಕ್ಷೇತ್ರದಲ್ಲಿ ಇಲಾಖೆ- ಸದಸ್ಯರುˌ- ಆಡಳಿತಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ ನಿರ್ವಾಹಕರ ಪಾತ್ರದ ಬಗ್ಗೆ……

1) ಕಾನೂನು ನಿಯಮಗಳಿಗೆ ವಿರುಧ್ಧವಾಗಿ ಆಡಳಿತ ಮಂಡಳಿ ನಡೆದಾಗ ಅದನ್ನು ಪ್ರಶ್ನಿಸುವ ಅಧಿಕಾರ ಇಲಾಖೆಗಿದೆ.

2) ಸದಸ್ಯರು ಸಂಘದ ಪರಮೋಚ್ಚ ಅಧಿಕಾರಸ್ತರು ಎಂಬುದಾಗಿ ಸಾಮಾನ್ಯವಾಗಿ ಬಿಂಬಿಸಲ್ಪಟ್ಟಿದ್ದರೂ ಮಹಾಸಭೆಯ ಕಾರ್ಯಸೂಚಿˌ ಅಧ್ಯಕ್ಷರ ಅನುಮತಿಗನುಸರಿಸಿ ಸದಸ್ಯರ ಪ್ರಾಯೋಗಿಕ ಅಧಿಕಾರ ಸೀಮಿತ

3) ಆಡಳಿತ ಮಂಡಳಿ ಸಂಸ್ಥೆಯ ನೀತಿನಿಯಮಗಳನ್ನು ರೂಪಿಸುವˌ ದೈನಂದಿನ ಆಡಳಿತಕ್ಕೆ ಸೂತ್ರದಾರನಾಗಿರುವ ಅಧಿಕಾರ ಹೊಂದಿದೆ. ಕೆಲವೊಂದು ವಿಷಯಗಳ ನಿರ್ಣಯ ಕೈಗೊಳ್ಳುವರೇ ಆಡಳಿತಮಂಡಳಿ ಉಪವಿಧಿಗಳಲ್ಲಿ ಹೇಳಲಾದ ಉಪಸಮಿತಿಗಳಿಗೆ ಜವಾಬ್ದಾರಿ ನೀಡಬಹುದು

Advertisement

4) ಆಡಳಿತಮಂಡಳಿ ನಿರ್ಣಯಗಳು ದೈನಂದಿನ ಚಟುವಟಿಕೆಗಳನ್ನು ಕಾನೂನುˌ ನಿಯಮˌ ಉಪವಿಧಿಗನುಸಾರವಾಗಿ ಜ್ಯಾರಿ ನಿರ್ದೇಶನದ ಅಧಿಕಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗಿರುತ್ತದೆ

5) ಅಧ್ಯಕ್ಷರು ಸಂಸ್ಥೆಯ ಸರ್ವಕಾರ್ಯಗಳನ್ನು ಗಮನಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚೌಕಟ್ಟಿನೊಳಗಡೆ ಮಾರ್ಗದರ್ಶನ ನೀಡುವ ಸರ್ವ ಅಧಿಕಾರವನ್ನು ಹೊಂದಿರುತ್ತಾರೆ.

ಇಂದು ಸಾಮಾನ್ಯವಾಗಿ ಆಡಳಿತಮಂಡಳಿಗಳು ಸದಸ್ಯರಿಂದ ಚುನಾಯಿಸಲ್ಪಟ್ಟರೂ ರಾಜಕೀಯ ಪಕ್ಷಗಳ ಅಥವಾ ಕೆಲವು ಸಂಘಟನೆಗಳ ಹಿನ್ನಲೆಯ ಪ್ರಾತಿನಿಧ್ಯದಿಂದ ಕೂಡಿರುತ್ತದೆ. ಈ ರೀತಿಯ ಆಯ್ಕೆ ಇಂದು ಸರ್ವೇ ಸಾಮಾನ್ಯ ವಿಷಯˌ ಒಪ್ಪಿಕೊಳ್ಳೋಣ. ಅಲ್ಲಿಗೆ ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು.

ಇಂತಹ ಸಂಘಟನೆಗಳ ಪ್ರಮುಖರಿಗೆ ಸಹಕಾರಿ ಸಂಘಗಳ ಆಡಳಿತದ ಆಳವಾದ ಅರಿವು ಖಂಡಿತ ಇರಲಾರದು.ಆಡಳಿತದ ಸಂಪೂರ್ಣಅರಿವಿಲ್ಲದ
ಪ್ರಮುಖರು ಸಹಕಾರ ಸಂಘಗಳ ಆಡಳಿತಾತ್ಮಕ  ನಿರ್ಣಯಗಳಲ್ಲಿ ಆಡಳಿತ ಮಂಡಳಿಯ ಬಹುಸಂಖ್ಯೆಯ ಸದಸ್ಯರಿಗೆ ಸಮ್ಮತಿ ಇಲ್ಲದೇ ಇದ್ದರೂ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲಂತಹ ವಿಷಯಗಳಿಗೆ ಒತ್ತಡಹೇರುವುದು ಸಾಧುವೇ? ಸಮಂಜಸವೇ?

ಬರಹ : ರಾಧಾಕೃಷ್ಣ ಕೋಟೆ

Advertisement
ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬದುಕು ಪುರಾಣ | ದಾನಕ್ಕೆ ಬಂದ ಮಾನ 
July 6, 2025
8:00 AM
by: ನಾ.ಕಾರಂತ ಪೆರಾಜೆ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಚನ್ನ ಬೋಂಡಾ
July 5, 2025
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group