ಸುಳ್ಯದಲ್ಲಿ ಮಳೆ : ಜಿಲ್ಲೆಯಲ್ಲೂ ಮಳೆ

June 13, 2019
2:53 PM

ಸುಳ್ಯ: ಸುಳ್ಯದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಹಗಲು 11 ಗಂಟೆಯಿಂದ ಆರಂಭಗೊಂಡ ಮಳೆ ಮುಂದುವರಿದಿದೆ. ಮೋಡ ಕವಿದಿದ್ದು ಕತ್ತಲು ಕವಿದ ವಾತಾವರಣ ಇದೆ. ಮಳೆಯ ಕಾರಣದಿಂದ ಅಲ್ಲಲ್ಲಿ  ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ  ನೀರು ಹರಿಯುತ್ತಿದೆ. ವಾಹನಗಳು ಸಾಗುವಾಗ  ಕೆಸರು ನೀರು ಸಿಂಚನವಾಗುತ್ತಿದೆ. ಇಲಾಖೆಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಜನಪ್ರತಿನಿಧಿಗಳು ತಕ್ಷಣವೇ ಸೂಚನೆ ನೀಡಬೇಕಿದೆ.

ಮಂಗಳೂರು ಪ್ರದೇಶದಲ್ಲಿ  ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 120 ಮಿಲಿಮೀಟರ್ ಮಳೆಯಾಗಿದೆ. ಬತ್ತಿದ್ದ  ನೇತ್ರಾವತಿ , ಕುಮಾರಧಾರಾ ನದಿಯಲ್ಲಿ  ನೀರು ಹರಿಯುಲು ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.  ಚಂಡಮಾರುತದ ಕಾರಣದಿಂದ  ದೊಡ್ಡ ದೊಡ್ಡ ಸಮುದ್ರದ  ಅಲೆಗಳು  ತೀರದಲ್ಲಿ ಅ ಪ್ಪಳಿಸುತ್ತಿದೆ. ಜಿಲ್ಲೆಯಾದ್ಯಂತ ಮಳೆ ಮೋಡ ಆವರಿಸಿದೆ. ಸಿಡಿಲು ಗುಡುಗು ಮಿಶ್ರಿತ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ   ವಿದ್ಯುತ್ ವ್ಯತ್ಯಯ,  ಮರ ಉರುಳಿದ್ದು ಬಿಟ್ಟರೆ ಯಾವುದೇ ಅನಾಹುತಗಳಾಗಿಲ್ಲ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಒಂದು ಮನೆ ನಿನ್ನೆ ಸಂಜೆ ವೇಳೆ ಸಮುದ್ರ ಪಾಲಾಗಿದೆ. ಕಡಲು ಕೊರತೆ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿದ್ದಾರೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಲಾಶಯ ಪಕ್ಕದಲ್ಲೇ ಟ್ಯಾಂಕರ್ ನೀರು | ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹೋರಾಟ
March 2, 2026
1:41 PM
by: ಮಿರರ್‌ ಡೆಸ್ಕ್
ಮಾನವ–ವನ್ಯಜೀವಿ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ
March 2, 2026
7:15 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿಗೆ ನವೋದ್ಯಮದ ಹೊಸ ಬೆಳಕು: ‘ಬೊಲ್ಪು’ ಯೋಜನೆಯಲ್ಲಿ 11 ಸ್ಟಾರ್ಟ್‌ಅಪ್ ಆಯ್ಕೆ
February 28, 2026
10:33 PM
by: ಮಿರರ್‌ ಡೆಸ್ಕ್
ಕಲುಷಿತ ಹಾಲು ಮಾರಾಟ ಮಾಡಿದರೆ ಕಠಿಣ ಕ್ರಮ : ಕೋಲಾರ ಜಿಲ್ಲಾಧಿಕಾರಿ ಎಚ್ಚರಿಕೆ
February 28, 2026
6:34 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror