ಹೊರಡುವ ಮುನ್ನ

June 1, 2019
12:00 PM
ಪ್ರೀತಿಸಿದವಳ ಜೊತೆ ನಡೆದವಳು
ಎದೆ ಹಾಲನುಣಿಸಿದವಳ ಮರೆತಳು
ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು
ಇನಿಯನ ಪ್ರೀತಿಯೇ ಹೆಚ್ಚೆಂದಳು ||೧||
ಹೆತ್ತವರಿಗೆ ಮಗಳು ತೊರೆದ ನೋವು
ಸುತ್ತಣದವರ ಚುಚ್ಚು ಮಾತಿನ ನೋವು
ಕಾಣಲಿಲ್ಲ ಅವಳಿಗೆ ಹೆತ್ತೆವರ ಕಣ್ಣೀರು
ಅವಳಿಗೀಗ ಅವನ ಪ್ರೀತಿಯೇ ಎಳನೀರು ||೨||
ಜಗವ ಸುತ್ತಿಸಿದ ಪ್ರೇಮಿಯ ಕೈ ಖಾಲಿಯಾಗಿದೆ
ದುಡಿವ ಅನಿವಾರ್ಯತೆ ಬದುಕಲ್ಲಿ ಎದುರಾಗಿದೆ
ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಾಗಿದೆ
ಮನೆಯಲ್ಲಿ ಜಗಳವೀಗ ಶುರುವಾಗಿದೆ ||೩||
ಆಕೆಯೀಗ ತುಂಬು ಗರ್ಭವತಿ
ಅವನಿಗಿಲ್ಲ ಅವಳಲ್ಲಿ ಮೊದಲಿನಂತೆ ಪ್ರೀತಿ
ಅವಳ ಬಾಳಾಗಿದೆ ಇಂದು ಅವನ ಕೈಸೆರೆ
ಅವಳಿಗೀಗ ಬೇಕಿದೆ ಹೆತ್ತವರ ಒಲವಿನಾಸರೆ ||೪||
ಮನವಿನಿಂದು ತಪ್ಪಿಗಾಗಿ ಮರುಗುತಿದೆ
ಹೆತ್ತವರ ಆಸರೆಗಾಗಿ ಪರಿತಪಿಸುತ್ತಿದೆ
ಕ್ಷಮೆಕೋರಲು ಮನವಿಂದು ಕಾಯುತಿದೆ
ಮಾಡಿದ ತಪ್ಪು ಮನವನ್ನು ಚುಚ್ಚುತ್ತಿದೆ ||೫||
ಪ್ರೀತಿಸುವ ಮುನ್ನ ಯೋಚಿಸಬೇಕು ಕಂದಾ
ಹೆತ್ತವರ ಒಪ್ಪಿಸಿ ನಡೆದರೆ ಆನಂದಾ
ಮುತ್ತಿನ ಮತ್ತಿನಿಂದೆ ನೀ‌ ಹೊರಡಬೇಡ
ತುತ್ತನ್ನು ಕಡೆಗಣಿಸಿ ನಡೆಯಬೇಡ ||೬||
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಕಾಲದ ದೋಷವೇ..? ನಮ್ಮ ಮನಸ್ಸಿನ ದೋಷವೇ..?
February 10, 2026
7:23 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಆರೋಗ್ಯಕರ ಗುಜ್ಜೆ ಕರಿ | ದೋಸೆ–ಚಪಾತಿಗೆ ಸೂಪರ್ ರುಚಿ
February 7, 2026
10:00 PM
by: ದಿವ್ಯ ಮಹೇಶ್
ದ್ವೇಷ ಬೆಂಕಿಯಾಗುತ್ತದೆ, ಕ್ಷಮೆ ಬೆಳಕಾಗುತ್ತದೆ
February 7, 2026
9:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮದುವೆ ಎಂದರೆ ಹೆದರಿಕೆ
February 5, 2026
10:03 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror