ಕೊರೋನಾ-ಒಮಿಕ್ರಾನ್‌ ಹೆಚ್ಚಳ ಭೀತಿ | ಮತ್ತೆ ಲಾಕ್ಡೌನ್‌ ಭಯ | ಲಾಕ್ಡೌನ್‌ ಗೆ ಪರ್ಯಾಯ ಏನಿದೆ ಎಚ್ಚರ ? | ಆಡಳಿತಕ್ಕೆ ಏನು ಸಲಹೆ ? |

January 4, 2022
11:18 AM

ಮತ್ತೆ ಕೊರೋನಾ ಭಯ ಹೆಚ್ಚಾಗಿದೆ. ಅದರ ಜೊತೆಗೇ ಒಮಿಕ್ರಾನ್‌ ಕೂಡಾ ಹಬ್ಬುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಪ್ರತೀ ದಿನ ರೋಗದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರವಾಗಿ ಈ ರೋಗ ನಿಯಂತ್ರಣ ಮಾಡಲೇಬೇಕಿದೆ. ಮತ್ತೆ ಲಾಕ್ಡೌನ್‌ ಆದರೆ ಜನ ಅದರಲ್ಲೂ ಸಾಮಾನ್ಯ ಜನರು ಸಂಕಷ್ಟ ಅನುಭವಿಸುವುದು  ಖಚಿತ. ಹೀಗಾಗಿ ಲಾಕ್ಡೌನ್‌ ಬದಲಾಗಿ ಪರ್ಯಾಯ ದಾರಿಗಳು ಏನಿದೆ ? ರೋಗ ಹರಡುವುದು  ತಪ್ಪಿಸಲು ಏನು ಮಾಡಬಹುದು ? ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಏನು ಮಾಡಬಹುದು ? ಇಂತಹದ್ದೊಂದು ಯೋಚನೆ ಇದ್ದರೆ ಹೇಳಿ ಸರ್ಕಾರಕ್ಕೆ ನಾವೆಲ್ಲರೂ ಸೇರಿ ಗಮನಕ್ಕೆ ತರೋಣ.

Advertisement
Advertisement

Advertisement

ಏಕೆಂದರೆ ಸರ್ಕಾರಕ್ಕೂ, ಆಡಳಿತಕ್ಕೂ ಕೊರೋನಾ ಲಾಕ್ಡೌನ್‌ ಈಗ ಬೇಕಾಗಿಲ್ಲ. ಆದರೆ ಜವಾಬ್ದಾರಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಅನಿವಾರ್ಯ ಸ್ಥಿತಿ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ರೋಗ ಹರಡದಂತೆ ಲಾಕ್ಡೌನ್‌ ಮಾತ್ರವೇ ಪರಿಹಾರ ಎಂದು  ಹೇಳಲಾಗುತ್ತಿದೆ. ಈ ಕಾರಣದಿಂದ ಲಾಕ್ಡೌನ್‌ ಹೊರತಾದ ಯಾವ ಮಾರ್ಗ ಇದ್ದರೂ ಸರ್ಕಾರ ಪರಿಗಣಿಸುವುದು  ಕಷ್ಟವಾದರೂ ಸಡಿಲಿಕೆ ಮಾಡಬಹುದು. ಅಂತಹ ಯೋಚನೆಗಳು ಇದ್ದರೆ ಎಲ್ಲರೂ ಸರ್ಕಾರದ ಗಮನಕ್ಕೆ ತರಬಹುದು. ಪ್ರತಿಭಟನೆಗಳ ಬದಲಾಗಿ ರಚನಾತ್ಮಕ ಸಲಹೆ, ಯೋಚನೆಗಳನ್ನು ಹೇಳುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆ. ಈಗ ಈ ಪ್ರಯತ್ನ ನಾವೆಲ್ಲರೂ ಮಾಡೋಣ, ಏಕೆಂದರೆ ನಮ್ಮೆಲ್ಲರ ಹಿತಕ್ಕಾಗಿ… 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ
ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ | ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ | ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ |
May 1, 2024
4:55 PM
by: The Rural Mirror ಸುದ್ದಿಜಾಲ
ಪ್ರಜಾಪ್ರಭುತ್ವದಲ್ಲಿ ನೋಟಾ (NOTA)‌ | ಸುಶ್ರುತ ದೇಲಂಪಾಡಿ ಹೀಗೆ ಬರೆಯುತ್ತಾರೆ…
April 24, 2024
3:09 PM
by: ದ ರೂರಲ್ ಮಿರರ್.ಕಾಂ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror