ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.23ರಿಂದ ಎ.26ರ ವರೆಗೆ ನಡೆಯಲಿದೆ.
ವಿಷು ಸಂಕ್ರಮಣದಂದು ಗೊನೆ ಕಡಿಯುವುದರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಎ.23ರಂದು ಸಂಜೆ ಸಂಜೆ 6.30ಕ್ಕೆ ಉಗ್ರಾಣ ತುಂಬಿಸುವುದು, 7ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ 9ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಎ.24ರಂದು ಬೆಳಗ್ಗೆ 10ಕ್ಕೆ ನವಕ, ಗಣಪತಿ ಹವನ, ತುಲಾಭಾರ, ಮಹಾಪೂಜೆ ಬಳಿಕ ಸಮಾರಾಧನೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಕಳೇರಿ ಉಳ್ಳಾಕುಲು ಮೂಲಸ್ಥಾನದಿಂದ ದೇವಸ್ಥಾನಕ್ಕೆ ಭಂಡಾರ ಬರಲಿದೆ. ರಾತ್ರಿ 8.30ಕ್ಕೆ ಭೂತಬಲಿ ಉತ್ಸವ, ಬಲಿಕಟ್ಟೆಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯಬಲಿ ಉತ್ಸವ ನಡೆಯಲಿದೆ.
ಎ.25ರಂದು ಬೆಳಗ್ಗೆ 8 ಗಂಟೆಗೆ ದೇವರ ದರ್ಶನ ಬಲಿ ಉತ್ಸವ, ಮಧ್ಯಾಹ್ನ 11 ಗಂಟೆಗೆ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಮಹಾಪೂಜೆ ನಡೆದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ದುರ್ಗಾಪೂಜೆ, ರಂಗಪೂಜೆ ನಡೆದ ಬಳಿಕ ರಾತ್ರಿ 9ಕ್ಕೆ ಸಾರ್ವಜನಿಕರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಎ.26ರಂದು ಅಡ್ಡಣಪೆಟ್ಟು: ಜಾತ್ರೋತ್ಸವ ಪ್ರಯುಕ್ತ ಎ.26ರಂದು ಬೆಳಗ್ಗೆ 9ರಿಂದ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಈ ಸಂದರ್ಭ ಬೆಳಗ್ಗೆ 10.30ಕ್ಕೆ ಐತಿಹಾಸಿಕ ಮಹತ್ವವುಳ್ಳ ಉಳ್ಳಾಕುಲು ದೈವಗಳ ಅಡ್ಡಣಪೆಟ್ಟು ನಡೆಯಲಿದೆ. ಮಧ್ಯಾಹ್ನ 12.30ರಿಂದ ಉದ್ರಾಂಡಿ ಹಾಗೂ ಉಪ ದೈವಗಳ ಕೋಲ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.