ಗುತ್ತಿಗಾರು ಒಂದನೇ ತರಗತಿ ಆಂಗ್ಲಮಾಧ್ಯಮ ತರಗತಿ ಉದ್ಘಾಟನೆ

Advertisement

ಗುತ್ತಿಗಾರು: ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ಆಂಗ್ಲಮಾಧ್ಯಮ ತರಗತಿ ಉದ್ಘಾಟನೆ ಮತ್ತು ಪೋಷಕರ ಸಭೆ ಶನಿವಾರ  ನಡೆಯಿತು.

Advertisement

ಗುತ್ತಿಗಾರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲಮಾಧ್ಯಮ‌ ತರಗತಿಯನ್ನು ಉದ್ಘಾಟಿಸಿ‌ದ ಶಾಸಕ ಅಂಗಾರ, “ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಭರಿತ ಶಿಕ್ಷಣದ ಅವಶ್ಯಕತೆ ಇದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಪರಿಣತಿ ಪಡೆಯಬೇಕು ಎಂದರು.

Advertisement
Advertisement

ಮುಖ್ಯ ಅತಿಥಿಯಾಗಿ ‌ಮಾತನಾಡಿದ ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ “ಪೋಷಕರಿಗೆ ಸರಕಾರಿ ಶಾಲೆಗಳ ಬಗ್ಗೆ ಅಭಿಮಾನ ಇರಬೇಕು. ಅಲ್ಲದೇ ಸರಕಾರ ಕೂಡಾ ಶಾಲೆಗಳಿಗೆ ಅವಶ್ಯಕ ಸೌಲಭ್ಯಗಳನ್ನು ನೀಡಬೇಕು” ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು ವಹಿಸಿದ್ದರು. ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲಿಂಗಪ್ಪ ಬೆಳ್ಳಾರೆ , ಅರೆಭಾಷೆ ಅಕಾಡೆಮಿ ಸದಸ್ಯ ದಿನೇಶ್ ಹಾಲೆಮಜಲು ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ತೇಜಮ್ಮ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ವೇದಿಕೆಯಲ್ಲಿ ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್, ನಿರ್ದೇಶಕ ಬಿ.ಕೆ.ಬೆಳ್ಯಪ್ಪ ಗೌಡ, ಮಾಜಿ ಜಿ.ಪಂ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಿಂಗರಾಜ್ ಜತ್ತಿಲ, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ಶಿವರಾಮ‌ ಕರುವಜೆ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ಟಿ. ಹೊನ್ನಪ್ಪ ಗೌಡ ಸ್ವಾಗತಿಸಿ , ಮುಖ್ಯ ಶಿಕ್ಷಕಿ ಕಮಲಾಕ್ಷಿ.ಪಿ ವಂದಿಸಿದರು. ಶಿಕ್ಷಕ ಶಶಿಧರ ಮಾವಿನಕಟ್ಟೆ ನಿರೂಪಿಸಿದರು.

Advertisement

 

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗುತ್ತಿಗಾರು ಒಂದನೇ ತರಗತಿ ಆಂಗ್ಲಮಾಧ್ಯಮ ತರಗತಿ ಉದ್ಘಾಟನೆ"

Leave a comment

Your email address will not be published.


*