ಗೆಜ್ಜೆಗಿರಿ ನಂದನ ಬಿತ್ತಲ್‍ನಲ್ಲಿ ಕೊಡಿಮರ ಕೆತ್ತನೆ ಕಾರ್ಯಕ್ಕೆ ಚಾಲನೆ

Advertisement

ಪುತ್ತೂರು: ದೇಯಿಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಲ್‍ನಲ್ಲಿ ಕೊಡಿಮರ ಕೆತ್ತನೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಕ್ಷೇತ್ರದ ಸ್ತಪತಿ ಉಮೇಶ್ ಬಳ್ಪ ಮತ್ತವರ ತಂಡ ಮರದ ಕೆತ್ತನೆ ಆರಂಭಿಸಿತು. ಇದಕ್ಕೂ ಮುನ್ನ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮೇ 8ರಂದು ಗೆಜ್ಜೆಗಿರಿಯಲ್ಲಿ ಕೊಡಿಮರವನ್ನು ಎಳ್ಳೆಣ್ಣೆಯಲ್ಲಿ ಅದ್ದಿಡುವ ತೈಲಾಧಿವಾಸ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕೊಡಿಮರವನ್ನು ಕೆತ್ತಿ ಸಿದ್ಧಪಡಿಸಲಾಗುತ್ತದೆ. ಮೇ 8ರಂದು ಬೆಳಗ್ಗೆ 9.30ಕ್ಕೆ ತೈಲಧಿವಾಸ ಮುಹೂರ್ತ ನಡೆಯಲಿದೆ.
ಪ್ರಸ್ತುತ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ಧರ್ಮಚಾವಡಿ, ಮಾತೆಯ ಮಹಾಸಮಾಧಿ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ದೈವಸ್ಥಾನ, ಚಾರಿತ್ರಿಕ ಸರೋಳಿ ಸೈಮಂಜಕಟ್ಟೆ, ಬೆರ್ಮೆರ್ ಗುಂಡ ಪುನರುತ್ಥಾನ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಮೂಲಸ್ಥಾನ ಗರಡಿ ನಿರ್ಮಾಣದ ಎರಡನೇ ಹಂತದ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. 450 ವರ್ಷಗಳ ಹಿಂದೆ ಅವಳಿ ವೀರರು ಕೋಟಿ ಚೆನ್ನರು ಬಾಳಿ ಬೆಳಗಿದ ಕ್ಷೇತ್ರದಲ್ಲಿ ಮೂಲಸ್ಥಾನ ಪುನರುತ್ಥಾನ ಕಾರ್ಯ ಇದೇ ಮೊದಲ ಬಾರಿ ನಡೆಯುತ್ತಿದ್ದು, ಐತಿಹಾಸಿಕ ತಾಣಗಳು ಮತ್ತೆ ಜೀವ ಪಡೆದುಕೊಳ್ಳುತ್ತಿವೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಗೆಜ್ಜೆಗಿರಿ ನಂದನ ಬಿತ್ತಲ್‍ನಲ್ಲಿ ಕೊಡಿಮರ ಕೆತ್ತನೆ ಕಾರ್ಯಕ್ಕೆ ಚಾಲನೆ"

Leave a comment

Your email address will not be published.


*