‘ಹಸಿರೋತ್ಸವ’ | ಐಕಾಂತಿಕದಲ್ಲಿ ನಡೆಯುವ ಸಹಜ ಕೃಷಿ ಮತ್ತು ಸಹಜ ಜೀವನ ಉತ್ಸವ | ಹಸಿರಿನೊಂದಿಗೆ ಬೆರೆಯಿರಿ |

June 1, 2024
12:47 PM
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶ್ರೀನಿವಾಸ ನಗರದ ಐಕಾಂತಿಕ ದಲ್ಲಿ ಜೂ.2 ರಂದು 'ಹಸಿರೋತ್ಸವ' ನಡೆಯಲಿದೆ.

ಭೂಮಿಯ ಮೇಲೆ ಇರುವ ಪ್ರಾಣಿಪಕ್ಷಿಗಳು ಹುಳಹುಪ್ಪುಡಿಗಳು ಎಲ್ಲಾ ಜೀವಿಗಳು ಅಡ್ಡಾಡುತ್ತಾ ಅರಾಮವಾಗಿ ಜೀವನ ಸಾಗಿಸುತ್ತಿದ್ದಾವೆ. ನಾವು ಮನುಷ್ಯ ಮಾತ್ರ ಏಕೆ ಹೊದ್ದಾಡುತ್ತಾ ಕಷ್ಟಾಪಟ್ಟು ಜೀವನ ಸಾಗಿಸುತ್ತಿದ್ದೆವೆ? ನಾವು ಇದಕ್ಕೆ ಉತ್ತರವಾಗಿ ಹೊಸದಾಗಿ ಉಪಾಯಗಳು ಕಂಡುಕೊಳ್ಳುವ ಅವಶ್ಯಕತೆ ಇಲ್ಲ, ಹಿಂದೆ ನಮ್ಮ ಹಿರಿಯರು ಸಾಗಿದ ದಾರಿ ಹಿಡಿದರೆ ಸಾಕು. ಇದೆಲ್ಲಾ ನಿಜವಾದರೆ ಎಷ್ಟು ಚೆಂದ ವಿರುತ್ತದೆ ಎಂದು ಹಗಳ ಕನಸು ಕಾಣುವುದು ಅಷ್ಟೇನಾ! ಖಂಡಿತವಾಗಿಯೂ ಇಲ್ಲ, ಇದೆಲ್ಲವನ್ನು ಮರುಕಳಿಸಿ ಇವತ್ತಿನ ಕಾಲದಲ್ಲಿ ನಿಜ ಸಾಧ್ಯ ಮಾಡಿದ ‘ಐಕಾಂತಿಕ ಬುಡಕಟ್ಟು ಸಮುದಾಯ’ ನೋಡಲು, ಚರ್ಚಿಸಲು ಮತ್ತು ಸಂವಾದ ಮಾಡಲು ಅವಕಾಶವಾಗುತ್ತದೆ, ‘ಹಸಿರೋತ್ಸವ’ ಕ್ಕೆ ಬನ್ನಿ!. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶ್ರೀನಿವಾಸ ನಗರದ ಐಕಾಂತಿಕ ದಲ್ಲಿ ಜೂ.2 ರಂದು ‘ಹಸಿರೋತ್ಸವ’ (‘Nature Festival’) ನಡೆಯಲಿದೆ.

Advertisement
Advertisement

ಸಹಜ ಜೀವನದ ಪದ್ಧತಿಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿ ಮುಂದೆವರೆಯುತ್ತಿರುವ ಸದಸ್ಯರ ಜೊತೆಗೆ ನೇರವಾಗಿ ತಮ್ಮ ಪ್ರಶ್ನೆ ಮತ್ತು ಅನುಮಾನಗಳಿಗೆ ಉತ್ತರ ಸಿಗುತ್ತದೆ. ಸಹಜ ಜೀವನದ ವಿಷಯಗಳಾದ ಕೃಷಿ, ಆಹಾರ, ಆರೋಗ್ಯ, ಓದುವುದು, ಮನೆ ಕಟ್ಟಡ ಮತ್ತು ಸ್ವಚ್ಚತೆ ಗಾಗಿ ಬಳಸುವ ವಸ್ತುಗಳ ಬಗ್ಗೆ ಗೊಷ್ಟಿಗಳು ನಡೆಯಲಿವೆ. ಸಹಜ ಕೃಷಿಯ ಬಗ್ಗೆ ಐಕಾಂತಿಕ ಸಮುದಾಯದ ಸದಸ್ಯರ ಅನುಭವಗಳನ್ನು ಚಿತ್ರಗಳ ಸಹಿತ ಗೊಷ್ಟಿಗಳ ಮುಖಾಂತರ ಹಂಚಿಕೊಳ್ಳಲಿದ್ದಾರೆ ಮತ್ತು ರೈತರೊಂದಿಗೆ ಸಂವಾದ ಮಾಡಲಿದ್ದಾರೆ.

Advertisement

ಒಕ್ಕಲು ಮಕ್ಕಳ ಜೀವಾಳವಾಗಿರುವ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದ್ದು, ಪ್ರಸ್ತುತ ಎದುರಾಗಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ ತಳಿಗಳಿಗೆ ಆದ್ಯತೆ ನೀಡಬೇಕಿದೆ. ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಹಸಿರೋತ್ಸವ’ ದಲ್ಲಿ ‘ವಿವಿಧ’ ಪಾರಂಪರಿಕ ಬೀಜ ಸಂರಕ್ಷಕರ ಜಾಲದಿಂದ ನಮ್ಮ ಬೀಜ ಪರಂಪರೆಯ ವೈಭವವನ್ನು ತೋರುವ ಮತ್ತು ಮಾರಾಟಕ್ಕೆ ಆಯೋಜಿಸಲಾಗಿದೆ. ತೆಂಗು, ಇತರೆ ಹಣ್ಣಿನ, ಔಷಧೀಯ ಮತ್ತು ಅಲಂಕಾರಿಕ ಸಸ್ಯಗಳು ಮಾರಾಟಕ್ಕೆ ಲಭ್ಯವಿರುತ್ತವೆ.

Advertisement

ಪರಿಸರದ ನೀತಿ ಕಥೆ, ದಾವಣಗೆರೆ ಜಿಲ್ಲೆಯ ಆರೋಗ್ಯ ಉದ್ಯಮ, ನೈಸರ್ಗಿಕ ಕಟ್ಟಡಗಳು, ವಿಷಮುಕ್ತ ಅಡುಗೆ ಪಾತ್ರೆಗಳು, ಪಾರಂಪರಿಕ ಬೀಜಗಳು, ನಮ್ಮ ತರಕಾರಿ ನಮ್ಮ ತಾರಸಿಯಿಂದ, ಕೈಗಾರಿಕೃತ ಹಾಲು, ಪ್ಲಾಸ್ಟಿಕ್ ಭೂತ, ಪ್ಯಾಕೇಜ್ದ್ ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಪ್ರಿಜರ್ವೇಟೀವ್ಸ್, ಡಿಜಿಟಲ್ ಯೋಗಕ್ಷೇಮ, ಬರಿಗಾಲಿನ ನಡಿಗೆ, ಸ್ಯಾನಿಟರಿ ಪ್ಯಾಡ್ ಗಳಿಗೆ ಸುಸ್ಥಿರ ಪರ್ಯಾಯಗಳು, ಕೈಗಾರಿಕೃತ ಮೊಟ್ಟೆ ಮತ್ತು ಮಾಂಸ, ಸಂಸ್ಕರಿಸಿದ ಸಕ್ಕರೆ, ಪರ್ಯಾಯ ಚಿಕಿತ್ಸಾ ಪದ್ದತಿ, ಸಂಸ್ಕರಿಸಿದ ಉಪ್ಪು, ನೈಸರ್ಗಿಕ ಉಡುಪು, ಸ್ವಾಶಿಕ್ಷಣ (ಮನೆಯಲ್ಲೇ ಶಿಕ್ಷಣ) ಎನ್ನುವ ಸಹಜ ಜೀವನದ ವಿಷಯಗಳ ಬಗ್ಗೆ ತಜ್ಞರಿಂದ ಸಂವಾದಗಳು ಇರುತ್ತವೆ.

ಮಹಿಳಾ ಸಂಘಗಳು ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ತರಲಿವೆ. ಕರ್ನಾಟಕದ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಮಹಿಳಾ ಸಂಘದ ಸದಸ್ಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ. ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿವೆ. ನೈಸರ್ಗಿಕವಾಗಿ ಬೆಳೆದ ಮಾವು ಮಾರಾಟಕ್ಕೆ ಬರುತ್ತಿದೆ. ಬೆಂಗಳೂರಿನ ವೈವಿಧ್ಯದ ತಾರಸಿ ಕೈ ತೋಟವನ್ನು ಮಾಡಿರುವ ಮತ್ತು ತಮ್ಮ ಮನೆಗೆ ಬಳಕೆಗೆ ಬೇಕಾದ ಶೇಕಡಾ 80% ತರಕಾರಿಗಳನ್ನು ತಮ್ಮ ತಾರಸಿ ಯಿಂದ ಪಡೆಯುತ್ತಿರುವ ಶ್ರೀಮತಿ.ಶೈಲಜ ಅವರು ಅನುಭವ ಹಂಚಿಕೊಳ್ಳಲಿದ್ದಾರೆ. ತೆನೆ ತೋರಣ, ಕೃಷಿ ಆಚರಣೆಗಳ ಪ್ರದರ್ಶನ ಮತ್ತು ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಹಸಿರೊತ್ಸವಕ್ಕೆ ಕುಟುಂಬದ ಸಮೆತ ಜನರು ನೊಡಲು, ಅನುಭವಿಸಲು ಮತ್ತು ಕಲಿಯಲು ಬರಲಿದ್ದಾರೆ.

Advertisement

ವಿವರಗಳಿಗೆ ಸಂಪರ್ಕಿಸಿ: 9743140939, 8867202370

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಬದ್ಧವಾಗಿದೆ
September 14, 2024
2:25 PM
by: ದ ರೂರಲ್ ಮಿರರ್.ಕಾಂ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ | ಕೇಂದ್ರ ಸಚಿವ ಸಂಪುಟ ಅನುಮೋದನೆ
September 14, 2024
12:16 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಸಮಯದಲ್ಲಿ ಆಹಾರ ಕಲಬೆರಕೆಯಾಗದಂತೆ ತಪಾಸಣೆಗೆ ಸೂಚನೆ
September 14, 2024
11:50 AM
by: ದ ರೂರಲ್ ಮಿರರ್.ಕಾಂ
ಹಸಿರು ಜಲಜನಕ – 2024 ಅಂತಾರಾಷ್ಟ್ರೀಯ ಸಮಾವೇಶ | ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಗುರಿ
September 13, 2024
9:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror