ತೋಟಗಾರಿಕಾ ಇಲಾಖೆಯಲ್ಲಿ ವಿವಿಧ ಸೌಲಭ್ಯ : ಬಾಳಿಲ ಗ್ರಾಮಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿ

August 16, 2019
6:07 PM

ಬೆಳ್ಳಾರೆ: ತೋಟಗಾರಿಕಾ ಇಲಾಖೆಯಲ್ಲಿ ಕೃಷಿಕರಿಗೆ ಲಭ್ಯವಾಗುವ ವಿವಿಧ ಯೋಜನೆ, ಸಹಾಯಗಳ ಬಗ್ಗೆ ತೋಟಗಾರಿಕಾ ಇಲಾಖಾ ಅಧಿಕಾರಿ ಬಾಳಿಲ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ  ಮಾಹಿತಿ ನೀಡಿದರು.

ಬಾಳಿಲ ಗ್ರಾಮ ಪಂಚಾಯತ್ 2019-20ನೇ ಸಾಲಿನ ಮೊದಲ ಹಂತದ ಗ್ರಾಮಸಭೆ  ಗಿರಿಜನ ಆಶ್ರಮ ಶಾಲಾ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ತೋಟಗಾರಿಕಾ ಇಲಾಖಾಧಿಕಾರಿ ಮಾಹಿತಿ ನೀಡುತ್ತಾ ಬಾಳೆಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಇಲಾಖೆ ವತಿಯಿಂದ ಜೇನುಪೆಟ್ಟಿಗೆಗಳನ್ನು ಮತ್ತು ಅದಕ್ಕೆ 1600 ರೂಪಾಯಿಗಳ ಭತ್ಯೆಯನ್ನು ನೀಡಲಾಗುವುದು. ಗೇರು ಕೃಷಿಗೆ ಹೆಕ್ಟೇರ್ ಒಂದಕ್ಕೆ 2800 ಭತ್ಯೆ ಹಾಗು ಗೇರು ಕೃಷಿಯಲ್ಲಿ ಎರಡುವರೆ ಹೆಕ್ಟೇರ್‍ಗೆ 25ಸಾವಿರ ಮೊದಲ ವರ್ಷಕ್ಕೆ ಅನುದಾನ ನೀಡಲಾಗುತ್ತದೆ. ಶೇ33%ಕ್ಕಿಂತ ಹೆಚ್ಚಿನ ಅಡಕೆ ಮರಗಳು ಮುರಿದ್ದಿದ್ದರೆ ಹೆಕ್ಟೇರ್‍ಗೆ 18 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಫಸಲ್‍ಭೀಮಾ ಯೋಜನೆ ಕುರಿತು ಪ್ರಶ್ನಿಸಿದ್ದ ಗ್ರಾಮಸ್ಥರೊಬ್ಬರಿಗೆ ಉತ್ತರಿಸಿದ ತೋಟಗಾರಿಕಾಧಿಕಾರಿ ಹವಾಮಾನಕ್ಕನುಗುಣವಾಗಿ ಯೋಜನೆಯ ಫಲವನ್ನು ವಿತರಿಸಲಾಗುತ್ತದೆ ಎಂದರು.

ಆರೋಗ್ಯ ಇಲಾಖಾಧಿಕಾರಿ ಮಾಹಿತಿ ನೀಡುತ್ತಾ ಸಾಂಕ್ರಾಮಿಕ ರೋಗಗಳ ಕುರಿತು ಎಚ್ಚರಿಸಿದರು. ಗ್ರಾಮೀಣ ಭಾಗದಲ್ಲಿ ಹೆರಿಗೆಯಾದವರಿಗೆ ಸೌಲಭ್ಯ ಹಾಗು 6000 ಸಾವಿರ ಮಾತೃ ಮಾಸಾಶನದ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ನೊಡೆಲ್ ಅಧಿಕಾರಿ ವೀಣಾ ಎಂ.ಟಿ, ಕಂದಾಯ ಇಲಾಖಾಧಿಕಾರಿ, ಪಶು ಸಂಗೋಪನಾಧಿಕಾರಿ, ಮೆಸ್ಕಾಂ ಇಲಾಖಾಧಿಕಾರಿ, ಸುಳ್ಯ ತಾಲೂಕು ಪಂಚಾಯತ್ ಬಾಳಿಲ ಕ್ಷೇತ್ರದ ಸದಸ್ಯೆ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ ಕಾಯಾರ, ಸದಸ್ಯರಾದ ಯು.ರಾಧಾಕೃಷ್ಣ ರಾವ್, ರವೀಂದ್ರ ರೈ, ರಮೇಶ್ ರೈ ಉಪಸ್ಥಿತರಿದ್ದರು.

ವಾರ್ಷಿಕ ವರದಿಯನ್ನು ಸುಂದರ ವಾಚಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ
October 16, 2026
3:13 PM
by: ದ ರೂರಲ್ ಮಿರರ್.ಕಾಂ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು
ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror