ನ ಪಂ ಚುನಾವಣೆ : ಬಿಜೆಪಿಯಲ್ಲಿ ಮಾಜಿಗಳಿಗೆ ಟಿಕೆಟ್ ಇಲ್ಲ

Advertisement

ಸುಳ್ಯ. ನಗರ ಪಂಚಾಯತ್ ಚುನಾವಣೆಗೆ ಬಿಜೆಪಿಯ 20 ವಾರ್ಡ್ ಗಳಲ್ಲಿಯೂ ಅಭ್ಯರ್ಥಿ ಘೋಷಣೆ ಪೂರ್ತಿಯಾಗಿದ್ದು ಕಳೆದ ಆಡಳಿತ ಮಂಡಳಿಯಲ್ಲಿದ್ದ ಯಾವ ಸದಸ್ಯರಿಗೂ ಈ ಬಾರಿ ಟಿಕೇಟ್ ನೀಡಿಲ್ಲ. ಸಂಪೂರ್ಣ ಹೊಸ ಮುಖಗಳ ತಂಡವನ್ನು ಕಣಕ್ಕಿಳಿಸಲಾಗಿದೆ.

Advertisement

ಸತತ ಮೂರು ಬಾರಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಸಹಜವಾಗಿ ಎದುರಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಹೊಸ ತಂತ್ರ ರೂಪಿಸಿದೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಎನ್.ಎ.ರಾಮಚಂದ್ರ, ಪ್ರಕಾಶ್ ಹೆಗ್ಡೆ, ಶೀಲಾವತಿ ಮಾಧವ ಈ ಮೂವರು ಈ ಬಾರಿ ಕಣದಲ್ಲಿ ಇಲ್ಲ. ಹಿರಿಯ ಸದಸ್ಯರಾದ ಗೋಪಾಲ ನಡುಬೈಲು, ರಮಾನಂದ ರೈ, ಮೋಹಿನಿ ನಾಗರಾಜ್, ಮೀನಾಕ್ಷಿ ಕೂಡ ಈ ಬಾರಿ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಮಾಜಿ ಸದಸ್ಯರ ಪೈಕಿ ಸ್ಥಾನ ಪಡೆದವರು ಸರೋಜಿನಿ ಪೆಲ್ತಡ್ಕ ಮಾತ್ರ. 2008-13ರ ಅವಧಿಯ ನ.ಪಂ.ನಲ್ಲಿ ಸರೋಜಿನಿ ಸದಸ್ಯರಾಗಿದ್ದರು. ಪ್ರತಿ ವಾರ್ಡ್‍ಗಳ ಕಾರ್ಯಕರ್ತರ ಸೂಚನೆಯ ಮೇರೆಗೆ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಾಗಿದೆ. ಹೊಸ ಹುರುಪಿನೊಂದಿಗೆ ಕೆಲಸ ಮಾಡಲಿ ಎಂಬ ದೃಷ್ಠಿಯಿಂದ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಕೆಲವು ಹಿರಿಯ ಸದಸ್ಯರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರೂ ಸಂಪೂರ್ಣ ಹೊಸ ಮುಖಗಳಿಗೆ ಆದ್ಯತೆ ಎಂಬ ನಿಲುವನ್ನು ಬಿಜೆಪಿ ತಳೆದಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನ ಪಂ ಚುನಾವಣೆ : ಬಿಜೆಪಿಯಲ್ಲಿ ಮಾಜಿಗಳಿಗೆ ಟಿಕೆಟ್ ಇಲ್ಲ"

Leave a comment

Your email address will not be published.


*