ಬತ್ತಿದ ಜೀವ ಜಲ : ಒಣಗಿದ ತೋಟಗಳು

Advertisement
Advertisement
Advertisement

ಸುಬ್ರಹ್ಮಣ್ಯ: ಕೆರೆ,ಬಾವಿ,ಹೊಳೆಯಲ್ಲಿ ನೀರಿಲ್ಲ. ಮಳೆ ಬಂದರೂ ನೀರಿನ ಸೆಲೆ ಕಾಣುತ್ತಿಲ್ಲ. ಪರಿಣಾಮವಾಗಿ ತೋಟಗಳು ಒಣಗುತ್ತಿವೆ. ಕೊಳವೆಬಾವಿಯಲ್ಲಿ ನೀರಿದ್ದರೂ ಕರೆಂಟ್ ಇಲ್ಲ. ಹೀಗಾಗಿ ಈಗ ಗ್ರಾಮೀಣ ಭಾಗದಲ್ಲೂ ಸಮಸ್ಯೆ ಹೆಚ್ಚಾಗಿದೆ.

Advertisement

ಸುಮಾರು 8 ತಿಂಗಳ ಹಿಂದೆ ಭಾರೀ ಮಳೆಯ ಕಾರಣದಿಂದ ಅಡಿಕೆ ಕೊಳೆರೋಗದ ಸುದ್ದಿಯಾದರೆ ಈಗ ಅಡಿಕೆ ಮರಕ್ಕೆ ನೀರಿಲ್ಲದೆ ಒಣಗುವ ಸುದ್ದಿ. ಕಳೆದ ಒಂದು ತಿಂಗಳಿನಿಂದ ನೀರಿನ ಕೊರತೆ ಉಂಟಾಗಿ ಕೃಷಿ ಭೂಮಿ ಒಣಗಿದೆ. ಅದರ ಜೊತೆಗೆ ಕುಡಿಯಲೂ ನೀರಿಲ್ಲ. ಇದ್ದ ಅಲ್ಪ ಸ್ವಲ್ಪ ಫಸಲುಗಳು ಬಿಸಿಲಿನ ಝಳಕ್ಕೆ ಸಿಲುಕಿ ನಾಶವಾಗುತ್ತದೆ. ಹಿಂದೆಲ್ಲಾ ಗ್ರಾಮೀಣ ಭಾಗದಲ್ಲಿ ಅಂದರೆ ಮಲೆನಾಡು ಭಾಗದಲ್ಲಿ ಇಂತಹ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚೆಗೆ ಕಾಡಂಚಿನ ಪ್ರದೇಶದಲ್ಲೂ ಬರದ ಸ್ಥಿತಿ ಎದುರಾಗುತ್ತಿದೆ. ಈಗೀಗ ವಿದ್ಯುತ್ ಸಮಸ್ಯೆ ಕೂಡಾ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

“ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರಿನ ಆಸರೆಯಿದ್ದರೂ ಅದನ್ನು ಸಮರ್ಪಕವಾಗಿ ಬಳಸುವಲ್ಲಿ ಸಮಸ್ಯೆಯಾಗುತ್ತಿದೆ.ನಿತ್ಯ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ನೀರಿನ ಸಮಸ್ಯೆ ಇಲ್ಲದ ಕಡೆಯೂ ಸಮಸ್ಯೆ ಎದರುರಾಗಿದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇದ್ದರೆ ನೀರಿನ ಪೂರೈಕೆ ಯಾವುದೇ ಸಮಸ್ಯೆ ಎದುರಾಗದು” ಎಂದು “ಸುಳ್ಯಸುದ್ದಿ.ಕಾಂ”  ನೊಂದಿಗೆ ಕೃಷಿಕ ಸುರೇಶ್ಚಂದ್ರ ಹೇಳಿದರು.

“ಇರುವ ವಿದ್ಯುತ್ ಸರಿಯಾಗಿ ನೀಡಿದರೆ ಸಮಸ್ಯೆ ಇಲ್ಲ. ಹಗಲು 4 ಗಂಟೆ ಪಂಪ್‍ಗೆ ವಿದ್ಯುತ್ ಸಿಕ್ಕಿದರೆ ರಾತ್ರಿ ವೇಳೆ 3 ಗಂಟೆ ಅಂದರೂ ಅಷ್ಟು ಸಮಯ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತಷ್ಟು ಸಮಸ್ಯೆ” ಎಂದು “ಸುಳ್ಯಸುದ್ದಿ.ಕಾಂ” ನೊಂದಿಗೆ ಕೃಷಿಕ ವೆಂಕಪ್ಪ ಗೌಡ ತಮ್ಮ ಅಳಲು ತೋಡಿಕೊಂಡರು.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬತ್ತಿದ ಜೀವ ಜಲ : ಒಣಗಿದ ತೋಟಗಳು"

Leave a comment

Your email address will not be published.


*