ಬದಿಯಡ್ಕ ಮತ್ತು ಕಾಞಂಗಾಡ್ ಕ್ಯಾಂಪ್ಕೊ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧಾರ

April 14, 2020
5:45 PM

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಖರೀದಿ ನಡೆಸಲು ಕ್ಯಾಂಪ್ಕೋ ಮುಂದಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಕಾರಣದಿಂದ ಬದಿಯಡ್ಕ ಮತ್ತು ಕಾಞಂಗಾಡ್ ಕ್ಯಾಂಪ್ಕೊ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದೆ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.

ಎ.15 ರಿಂದ  ಸೀಮಿತವಾಗಿ ಬದಿಯಡ್ಕ ಮತ್ತು ಕಾಞಂಗಾಡ್ ಕ್ಯಾಂಪ್ಕೊ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದೆ. ಇಲ್ಲಿ  ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000/- ದ ಅಡಿಕೆ ಮಾರಾಟಕ್ಕೆ ಅವಕಾಶ ,  ಪ್ರತಿದಿನ 30 ಸದಸ್ಯರಿಗೆ ಮಾತ್ರ ಅವಕಾಶ.
ಆಯಾ ಶಾಖಾಧಿಕಾರಿಗಳ / ನಮೂದಿಸಲ್ಪಟ್ಟ ನೌಕರರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು, ಬೆಳಿಗ್ಗೆ ಗಂಟೆ 11.00 ರಿಂದ ,ಸಂಜೆ 5.00 ರ ವರೆಗೆ ಖರೀದಿ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ ಕ್ಯಾಂಪ್ಕೊ ಕಾರ್ಡು, ಜಾಗದ ಪೊಸೆಶನ್ ಸರ್ಟಿಫಿಕೇಟ್ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಆರೋಗ್ಯ ಇಲಾಖೆ ತಿಳಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.

ಅಡಿಕೆ ಖರೀದಿ ನಡೆಸುವ ಶಾಖೆಗಳು: 

ಬದಿಯಡ್ಕ :
ಸಂಪರ್ಕ : ಪ್ರದೀಪ್ ಕುಮಾರ್ PH : 8200693185 ಮತ್ತು 8105764906

ಕಾಞಂಗಾಡ್ :
ಸಂಪರ್ಕ : ಕುಂಞಂಬು. PH : 8921390124

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ
September 17, 2026
2:14 PM
by: ಸಾಯಿಶೇಖರ್ ಕರಿಕಳ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror