ಸುಬ್ರಹ್ಮಣ್ಯ: ಕುಲ್ಕುಂದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಮೇ.1 ರಿಂದ 3 ರವರೆಗೆ ಸಂಸ್ಕಾರ ಶಿಬಿರ ನಡೆಯಲಿದೆ. ಆಸಕ್ತರು ಶೀಘ್ರವೇ ತಮ್ಮ ಹೆಸರನ್ನು ನೊಂದಾಯಿಸಬೇಕು ಎಂದು ಶಿಬಿರ ಸಂಚಾಲಕ ಎಂ.ಕೃಷ್ಣ ಭಟ್ ಹಾಗೂ ಕಾರ್ಯದರ್ಶಿ ಸತ್ಯಶಂಕರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಉಚಿತ ಸಂಸ್ಕಾರ ಶಿಬಿರವನ್ನು ಬಸವೇಶ್ವರ ದೇವಳದಲ್ಲಿ ಪ್ರಥಮವಾಗಿ ಆಯೋಜಿಸಲಾಗಿದ್ದು ಶಿಬಿರದ ಮೂಲಕ ಭವ್ಯವಾದ ನಮ್ಮ ಸಂಸ್ಕøತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಶ್ರೇಷ್ಠರಾಗಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ ಅವರಿಗೆ ಸಂಸ್ಕಾರ ಜ್ಞಾನ ಬೆಳೆಯಲು ಪ್ರೋತ್ಸಾಹಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.ಶಿಬಿರದಲ್ಲಿ ಶುಚಿತ್ವ, ಚಿಂತನೆ, ಶಾಂತಿ ಮಂತ್ರ, ಭಗವದ್ಗೀತಾ ಪಠಣ, ಪ್ರಾಣಾಯಾಮ, ಧ್ಯಾನ, ಬೌದ್ಧಿಕ, ಯೋಗ, ಆಟೋಟ ಸೇರಿದಂತೆ ಇತರ ವಿಚಾರಗಳ ಬಗ್ಗೆ ತಿಳಿಸಲಾಗುತ್ತದೆ.
ಮೇ.1 ರಂದು ಶಿಬಿರವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಉದ್ಘಾಟಿಸಲಿದ್ದಾರೆ.ಬಸವೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸಭಾಧ್ಯಕ್ಷತೆ ವಹಿಸಲಿದ್ದಾರೆ.ವಿದ್ಯಾಸಾಗರ ಕಲಾ ಶಾಲೆಯ ಅಧ್ಯಕ್ಷ ಎಂ.ಹರೀಶ್ ಕಾಮತ್, ಕಲಾವಿದ ಕೆ.ಯಜ್ಞೇಶ್ ಆಚಾರ್, ಬಸವೇಶ್ವರ ದೇವಳದ ಪ್ರಧಾನ ಅರ್ಚಕ ಗಣೇಶ ಕೃಷ್ಣ ದೀಕ್ಷಿತ್ ಮುಖ್ಯಅತಿಥಿಗಳಾಗಿದ್ದಾರೆ.